Feb 16, 2022, 1:07 PM IST
ಶಿವಮೊಗ್ಗ (ಫೆ. 16): ಡಿವಿಸ್ ಕಾಲೇಜಿನ ( DVS College)ವಿದ್ಯಾರ್ಥಿನಿಯರು ಹಿಜಾಬ್ (Hijab) ಧರಿಸಿ ಕಾಲೇಜಿಗೆ ಬಂದಿದ್ದಾರೆ. ತರಗತಿಗೆ ಅವಕಾಶ ಕೊಡದೇ ಇದ್ದಾಗ ವಾಪಸ್ಸಾಗಲು ರೆಡಿಯಾಗಿದ್ದಾರೆ. ಗೊಂದಲದ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಕಾಲೇಜು ಆವರಣಕ್ಕೆ ಪೊಲೀಸರು ಆಗಮಿಸಿದ್ದಾರೆ.
Hijab Row: ಶಿವಮೊಗ್ಗದ 3 ಕಾಲೇಜುಗಳಿಗೆ ರಜೆ ಘೋಷಣೆ
ಮುಂಜಾಗ್ರತಾ ಕ್ರಮವಾಗಿ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ 3 ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸೈನ್ಸ್ ಮೈದಾನದ ಸರ್ಕಾರಿ ಪಿಯು ಕಾಲೇಜು, ಬಾಪೂಜಿನಗರದ ಪ್ರಥಮ ದರ್ಜೆ ಕಾಲೇಜು, ಸಾಗರದ ಪದವಿ ಪೂರ್ವ ಕಾಲೇಜಿಗೆ ರಜೆ ಘೋಷಿಸಲಾಗಿದೆ.