ಸುಳ್ಯ;  ವಿದ್ಯಾರ್ಥಿಗಳಿಗೆ ಸಿಗದ ನೆಟ್ವರ್ಕ್, ಬೆಟ್ಟದ ಮೇಲಿನ ಟೆಂಟೇ ಪಾಠಶಾಲೆ!

Jun 17, 2021, 11:14 PM IST

ಮಂಗಳೂರು (ಜೂ. 17)  ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸ್ ಎಂಬುದು ನರಕ ದರ್ಶನ ಮಾಡಿಸುತ್ತಿದೆ.  ಸುಳ್ಯ ತಾಲೂಕಿನ ಮೊಗ್ರದ ಬಳ್ಳಕ್ಕ ವಿದ್ಯಾರ್ಥಿಗಳಿಗೆ ನೆಟ್ವರ್ಕ್  ಎಂಬುದು ಗಗನ ಕುಸುಮ. ಭಾರೀ ಗಾಳಿ ಮಳೆಗೆ ಜೀವ ಕೈಯಲ್ಲಿ ಹಿಡಿದು ಆನ್‌ಲೈನ್ ಕ್ಲಾಸಿಗೆ ಹಾಜರಾಗಬೇಕಾದ ಪರಿಸ್ಥಿತಿ ಇದೆ.

ಮಳೆಗಾಲದಲ್ಲಿ ಮಲೆನಾಡ ಮಕ್ಕಳ ಶಿಕ್ಷಣದ ಕಟು ವಾಸ್ತವ

 ಗುಡ್ಡದ ಮೇಲಿನ ರಸ್ತೆಯಲ್ಲಿಯೇ ವಿದ್ಯಾರ್ಥಿಗಳ ಆನ್‌ಲೈನ್ ಕ್ಲಾಸ್ ನಡೆಯುತ್ತಿದ್ದು  ಕೈಯಲ್ಲಿ ಕೊಡೆ ಹಿಡಿದುಕೊಂಡು ವಿದ್ಯಾರ್ಥಿಗಳಿಗೆ ಪೋಷಕರು ನೆರವಾಗುವ ಸ್ಥಿತಿ ಇದೆ.  ನೆಟ್ ವರ್ಕ್ ಸಿಗದೇ ಪಡಬಾರದ ಕಷ್ಟ ಪಡುವ ವಿದ್ಯಾರ್ಥಿಗಳು ಗುಡ್ಡದ ಮೇಲೆ ಪ್ಲಾಸ್ಟಿಕ್ ಟೆಂಟಲ್ಲೇ ವಾಸವಾಗಿದ್ದಾರೆ.