Sep 18, 2022, 6:35 PM IST
ಹಾಸನ ಜಿಲ್ಲೆಯ ಅರಕಲಗೂಡಿನ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳು ಇಬ್ಬರು ಗಲಾಟೆ ಮಾಡಿಕೊಂಡಿರುವ ಘಟನೆ ನಡೆದಿದೆ. ಶಿಕ್ಷಕರಿಗೆ ತರಬೇತಿ ನೀಡುವ ಕಾರ್ಯಾಗಾರದಲ್ಲಿ ಅಕ್ಷರ ದಾಸೋಹ ಅಧಿಕಾರಿ ಶಿವಕುಮಾರ್ ಹಾಗೂ ಶಿಕ್ಷಣ ಸಂಯೋಜಕ ಗಿರಿಜಾನಂದ ಮುಂಬಳೆ ಪರಸ್ಪರ ರಕ್ತ ಬರುವಂತೆ ಹೊಡೆದಾಡಿಕೊಂಡಿದ್ದಾರೆ. ಶಿಕ್ಷಕರ ತರಬೇತಿ ನೀಡುವ ಕಾರ್ಯಾಗಾರವೊಂದು ಆಯೋಜಿಸಲಾಗಿತ್ತು. ಈ ವೇಳೆ ಗಿರಿಜಾನಂದ ಮುಂಬಳೆ ಗಣಿತವನ್ನು ಬಿಡಿಸುವ ವಿಧಾನವೊಂದನ್ನು ಹೇಳಿದ್ದಾರೆ. ಆದರೆ ಈ ವಿಧಾನ ತಪ್ಪು ಎಂದು ಶಿವಕುಮಾರ್ ಅವರಿಗೆ ಅನ್ನಿಸಿ ಅದನ್ನು ಅಲ್ಲೇ ಹೇಳಿದ್ದಾರೆ. ಬಳಿಕ ಅಲ್ಲಿಂದ ಅರಕಲಗೂಡಿನ ಶಿಕ್ಷಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ್ದಾರೆ. ಅಲ್ಲಿ ಶಿವಕುಮಾರ್ ಅವರನ್ನು ಮಾತನಾಡಲು ಇದೆ ಸ್ವಲ್ಪ ಹೊರಗೆ ಬನ್ನಿ ಎಂದು ಗಿರಿಜಾನಂದ ಕರೆದಿದ್ದಾರೆ ಆದರೆ. ಅವರು ಹೊರಗಡೆ ಬರುವುದಿಲ್ಲ. ಒಂದೆಡರಡು ಬಾರಿ ಕರೆದ ನಂತರ ಕುಪಿತರಾದ ಗಿರಿಜಾನಂದ ಮತ್ತೆ ಕರೆದಾಗ ಶಿವಕುಮಾರ್ ಹೊರಗಡೆ ಬಂದಿದ್ದಾರೆ. ಬಳಿಕ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಗಲಾಟೆ ತಾರಕಕ್ಕೇರಿ ರಕ್ತ ಬರುವಂತೆ ಹೊಡೆದಾಡಿಕೊಂಡಿದ್ದಾರೆ.