Hijab Saffron Shawl Row: ಹಿಜಾಬ್, ಕೇಸರಿ ಶಾಲು ವಿವಾದಕ್ಕೆ ಅರಗ ಜ್ಞಾನೇಂದ್ರ ಕಿಡಿ

Feb 7, 2022, 6:42 PM IST

ಬೆಂಗಳೂರು(ಫೆ.7): ರಾಜ್ಯಾದ್ಯಂತ ತೀವ್ರ ವಿವಾದ ಸೃಷ್ಟಿಸಿರುವ ಹಿಜಾಬ್ ಪ್ರಕರಣದಲ್ಲಿ ಕೆಲವು ಕಾಣದ ದುಷ್ಟ ಕೈಗಳ ಕೈವಾಡವಿದ್ದು, ಸರ್ಕಾರ ಇದರ ತನಿಖೆ ನಡೆಸುತ್ತಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ (Araga Jnanendra) ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಇಬ್ಬರು ತಲ್ವಾರ್ ಹಿಡಿದುಕೊಂಡು ಸ್ಥಳಕ್ಕೆ ಬಂದಿದ್ದರು ಎಂದರೆ ಇದರ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

HIJAB ROW ಸರ್ಕಾರದ ಆದೇಶಕ್ಕೆ ಸೆಡ್ಡು, ಹಿಜಾಬ್-ಕೇಸರಿ ಶಾಲು ಮಧ್ಯೆ ನೀಲಿ ಶಾಲು ಎಂಟ್ರಿ

ಸರ್ಕಾರದ ನಿಯಮಗಳನ್ನು ಪಾಲನೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಯಾರು ಕೂಡ ಇದನ್ನು ಉಲ್ಲಂಘಿಸಬಾರದು. ಇಷ್ಟು ದೊಡ್ಡ ಮಟ್ಟದಲ್ಲಿ ರಾದ್ದಾಂತ ಸೃಷ್ಟಿಯಾಗಿದೆ ಎಂದರೆ ಇದರ ಹಿಂದೆ ಕಾಣದ ಕೈಗಳ ಕುಮ್ಮಕ್ಕಿದೆ ಎಂದು ಆರೋಪಿಸಿದ್ದಾರೆ. ವಿದ್ಯಾರ್ಥಿಗಳು ಯಾವುದೇ ಸಂಘಟನೆಗಳು, ಮುಖಂಡರ ಪ್ರಚೋದನೆಗೆ ಒಳಗಾಗಬಾರದು. ಹಿಜಾಬ್ (Hijab) ಇಲ್ಲವೇ ಕೇಸರಿ ಶಾಲು (Saffron Shawl) ಧರಿಸಲು ಅವಕಾಶವಿಲ್ಲ. ಸಮವಸ್ತ್ರವನ್ನೇ ಧರಿಸಿಕೊಂಡು ಬರಬೇಕು. ಇದರಲ್ಲಿ ರಾಜೀಯಾಗುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.