Hijab Row ವೀರಶೈವ ಮಹಿಳಾ ಕಾಲೇಜು ವಿದ್ಯಾರ್ಥಿಗಳಿಂದ ಪರೀಕ್ಷೆ ಬಹಿಷ್ಕಾರ

Feb 17, 2022, 12:31 PM IST

ಬಳ್ಳಾರಿ, (ಫೆ.17): ಉಡುಪಿಯಲ್ಲಿ ಆರಂಭವಾದ ಸಮವಸ್ತ್ರ (Uniform) ಸಮರ ಚರ್ಚೆ ಇಡೀ ದೇಶದಾದ್ಯಂತ ವ್ಯಾಪಿಸಿದೆ.  ಅದರಲ್ಲೂ ಕರ್ನಾಟಕದಲ್ಲಿ ಹಿಜಾಬ್ (Hijab) ವಿವಾದ ಭುಗಿಲೆದಿದ್ದು, ಒಂದು ಕಡೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ರೆ, ಇತ್ತ ಶಾಲಾ೦ಕಾಲೇಜುಗಳಲ್ಲಿ ಹೈಡ್ರಾಮಾಗಳು ನಡೆಯುತ್ತಿವೆ. ಇನ್ನು ಬಳ್ಳಾರಿಯಲ್ಲಿ ಹಿಜಾಬ್ ಸಂಘರ್ಷ ಭುಗಿಲೆದಿದೆ.

ಶಾಂತವಾಗಿದ್ದ ಸರಳಾ ದೇವಿ ಕಾಲೇಜಿನ ಮತ್ತೆ ವಿವಾದ, ಕಣ್ಣೀರು ಹಾಕಿದ ಗ್ರಂಥಪಾಲಕಿ

 ಸರಳಾದೇವಿ ಕಾಲೇಜಿನಲ್ಲಿ ಹೈಡ್ರಾಮಾ ನಡೆದಿದೆ. ಇಷ್ಟು ದಿನ ಬುರ್ಖಾ ತೆಗೆದಿಲ್ಲ ಈಗ್ಯಾಕೆ ತೆಗಿಯಬೇಕು ಎಂದು ಗ್ರಂಥಪಾಲಕಿ ಕಣ್ಣೀರು ಹಾಕಿದ್ದಾರೆ. ಬಳಿಕ ಪೊಲೀಸರು ಬಂದು ಮಹಿಳೆಯನ್ನು ಕರೆದುಕೊಂಡು ಹೋಗಿದ್ದಾರೆ. ಇದೀಗ ಇದೇ ಬಳ್ಳಾರಿ ವೀರಶೈವ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಬಹಿಷ್ಕಾರ ಮಾಡಿದ್ದಾರೆ. 

ಒಂದು ವರ್ಷದ ಓದು ಹಾಳಾದ್ರೂ ಪರವಾಗಿಲ್ಲ. ಹಿಜಾಬ್ ಬೇಕೇ ಬೇಕು ಎಂದು ವಿದ್ಯಾರ್ಥಿಗಳು ಪಟ್ಟುಹಿಡಿದಿದ್ದಾರೆ. ಪ್ರತಿಭಟನೆ ಮಾಡುತ್ತಿರುವ ವಿದ್ಯಾರ್ಥಿಗಳನ ಮನವೊಲಿಸಲು ಕಾಲೇಜಿನ ಶಿಕ್ಷಕರು ಕಸರತ್ತು ನಡೆಸಿದ್ದಾರೆ. ಆದ್ರೆ, ವಿದ್ಯಾರ್ಥಿಗಳು ಹಠ ಬಿಡುತ್ತಿಲ್ಲ. ಇನ್ನು ವಿದ್ಯಾರ್ಥಿಗಳ ಪ್ರತಿಭಟನೆಗೆ ಪೋಷಕರು ಸಹ ಸಾಥ್ ಕೊಟ್ಟಿದ್ದಾರೆ. ಇದರಿಂದ ಗಣಿನಾಡು ಬಳ್ಳಾರಿಯಲ್ಲೂ ಸಹ ಹಿಜಾಬ್ ಸಂಘರ್ಷ ತಾರಕಕ್ಕೇರಿದೆ.