Jul 19, 2022, 7:58 PM IST
ಗಣಿತ ವಿಷಯ ಅಂದರೆ ಬಹುತೇಕರ ದೂರ ಹೋಗುತ್ತಾರೆ. ಪರೀಕ್ಷೆಯಲ್ಲಿ ಪಾಸ್ ಆದರೆ ಸಾಕು ಎಂದು ಬೇಡುವವರ ಸಂಖ್ಯೆ ಹೆಚ್ಚಿದೆ. ಆದರೆ ಬೆಂಗಳೂರಿನ ಮೋಹಿತ್ ಹುಳ್ಸೆ ಮ್ಯಾಥಮಿಟಿಕಲ್ ಒಲಂಪಿಯಾಡ್‌ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ರಚಿಸಿದ್ದಾರೆ. ಓಸ್ಲೋದಲ್ಲಿ ನಡೆದ 63ನೇ ಅಂತಾರಾಷ್ಟ್ರೀಯ ಮ್ಯಾಥಮಿಟಿಕಲ್ ಒಲಂಪಿಯಾಡ್‌ನಲ್ಲಿ 100ಕ್ಕೂ ಹೆಚ್ಚು ದೇಶದ ವಿದ್ಯಾರ್ಥಿಗಳು ಈ ಒಲಂಪಿಯಡ್‌ನಲ್ಲಿ ಭಾಗವಹಿಸಿದ್ದರು. ಗಣಿತಶಾಸ್ತ್ರದ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ ಕನ್ನಡಿಗನ ಸಾಧನೆ ಇಡೀ ಕರ್ನಾಟಕಕ್ಕೆ ಹೆಮ್ಮೆ ತಂದಿದೆ.