ಕರ್ನಾಟಕದಲ್ಲಿ ಕೊರೋನಾ ಭೀತಿ: 7,8,9ನೇ ತರಗತಿ ಪರೀಕ್ಷೆ ಮುಂದೂಡಿಕೆ

Mar 15, 2020, 6:25 PM IST

ಬೆಂಗಳೂರು, [ಮಾ.15]: ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಶಿಕ್ಷಣ ಇಲಾಖೆ 7, 8, 9ನೇ ತರಗತಿ ಪರೀಕ್ಷೆಗಳನ್ನ ಮುಂದೂಡುವಂತೆ ಆದೇಶ ಹೊರಡಿಸಿದೆ.

ಕೊರೋನಾ ಭೀತಿ, ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ

ಈಗಾಗಲೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇನ್ನು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಆರೋಗ್ಯ ಹಿತದೃಷ್ಟಿಯಿಂದ ಎಲ್ಲಾ ಪರೀಕ್ಷೆಗಳನ್ನು ಮುಂದೂಡುವಂತೆ ಆದೇಶ ಹೊರಡಿಸಿದೆ. ನಾಳೆಯಿಂದ ಅಂದ್ರೆ ಮಾರ್ಚ್ 16ರಿಂದ  7 ನೇ ತರಗತಿ ಪರೀಕ್ಷೆ ಪ್ರಾರಂಭವಾಗಬೇಕಿದ್ದ ಹಿನ್ನೆಲೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಸಚಿವ ಎಸ್​.ಸುರೇಶ್ ಕುಮಾರ್ ಈ ಆದೇಶ ಹೊರಡಿಸಿದ್ದಾರೆ.