ಅಂಕಲ್​​ ಕೊಲೆಗೆ ಹೊಂಚು ಹಾಕಿತ್ತು ಕುಟುಂಬ! ವೈರಲ್​ ಫೋಟೋದಿಂದ ಅವನ ಸುಳಿವು ಸಿಕ್ಕಿತ್ತು!

Dec 5, 2024, 4:49 PM IST

ಸಂತೆಬೆನ್ನೂರು: ಆತ ಬೋರ್​ವೆಲ್​ ಪಾಯಿಂಟ್​​ ಗುರುತಿಸೋನು. ಆತ ಒಂದು ಪಾಯಿಂಟ್ ಗುರುತು​​​ ಮಾಡಿದ್ರೆ ನೀರು ಸಿಗೋದು ಪಕ್ಕಾ. ಹೀಗಾಗಿ ಸುತ್ತಮುತ್ತಲಿನ ಜಿಲ್ಲೆಗಳಿಂದಲೂ ಆತನನ್ನ ಕರೆಸಿ ಬೋರ್​ವೆಲ್​​ ಪಾಯಿಂಟ್​​​ ಪತ್ತೆ ಮಾಡಿಸುತ್ತಿದ್ರು. ಆದ್ರೆ ಆವತ್ತೊಂದು ದಿನ ಇದೇ ಕೆಲಸಕ್ಕೆ ಅಂತ ದೂರದ ಊರಿಗೆ ಹೋಗಿದ್ದ. ಆದ್ರೆ ಎಷ್ಟೇ ಹೊತ್ತಾದ್ರೂ ಮನೆಗೆ ವಾಪಸ್​​ ಆಗಲಿಲ್ಲ. 

ಫೋನ್​ ಮಾಡಿದ್ರೆ ಸ್ವಿಚ್​​ ಆಫ್​. ನಾಳೆ ಬರಬಹುದು ಅಂತ ಕುಟುಂಬದವರು ಸುಮ್ಮನ್ನಾಗಿದ್ದಾರೆ. ಆದ್ರೆ ಮರು ದಿನ ಸಿಕ್ಕಿದ್ದು ಅವನ ಡೆಡ್​​ಬಾಡಿ. ಆತನ ಮೃತದೆಹ ಭದ್ರ ಉಪಕಾಲುವೆಯಲ್ಲಿ ತೇಲಾಡುತ್ತಿತ್ತು. ಇನ್ನೂ ಇದೇ ಕೇಸ್​ನ ತನಿಖೆ ನಡೆಸಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಹಂತಕರನ್ನ ಪತ್ತೆ ಮಾಡಿದ್ರು. ಅಷ್ಟಕ್ಕೂ ಬೋರ್​ವೆಲ್​ ಪಾಯಿಂಟ್​​ ಮಾಡಲು ಹೋದವನು ಹೆಣವಾಗಿದ್ದೇಗೆ? ಅವನನ್ನ ಕೊಂದಿದ್ಯಾರು ಅನ್ನೋದೇ ಇವತ್ತಿನ ಎಫ್‌ ಐ ಆರ್‌ನಲ್ಲಿ ನೋಡಿ