
ಇತ್ತಿಚೆಗೆ ಪಾರ್ಟನರ್ಶಿಪ್ನಲ್ಲಿ ತನ್ನದೇ ಸ್ವಂತ ಸಲೂನ್ ತೆರೆದಿದ್ದ. ಆದ್ರೆ ಆವತ್ತು ಇದ್ದಕ್ಕಿದ್ದಂತೆ ಆತನ ಸಲೂನ್‌ಗೆ ಒಂದು ಗ್ಯಾಂಗ್ ನುಗ್ಗಿತ್ತು. ಮನಬಂದಂತೆ ಅವನ ಮೇಲೆ ಹಲ್ಲೆ ಮಾಡಿದ್ರು. ಕೇವಲ ಹೊಡೆದಿದ್ದಷ್ಟೇ ಅಲ್ಲ ಅವನನ್ನ ಕಿಡ್ನಾಪ್ ಮಾಡಿತ್ತು. ಅಷ್ಟಕ್ಕೂ ಏನಿದು ಕಥೆ
ಬೆಂಗಳೂರು: ಆತ ಸಲೂನ್ ಓನರ್. ಮೊದಲು ಬೇರೆಯವರ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ. ಇತ್ತಿಚೆಗಷ್ಟೇ ಪಾರ್ಟನರ್ಶಿಪ್ನಲ್ಲಿ ತನ್ನದೇ ಸ್ವಂತ ಸಲೂನ್ ತೆರೆದಿದ್ದ. ಆದ್ರೆ ಆವತ್ತು ಇದ್ದಕ್ಕಿದ್ದಂತೆ ಆತನ ಸಲೂನ್‌ಗೆ ಒಂದು ಗ್ಯಾಂಗ್ ನುಗ್ಗಿತ್ತು. ಮನಬಂದಂತೆ ಅವನ ಮೇಲೆ ಹಲ್ಲೆ ಮಾಡಿದ್ರು. ಮುಖ ಮೂತಿ ನೋಡದೇ ಹೊಡೆದಿದ್ರು. ಕೇವಲ ಹೊಡೆದಿದ್ದಷ್ಟೇ ಅಲ್ಲ ಅವನನ್ನ ಕಿಡ್ನ್ಯಾಪ್ ಮಾಡಿಕೊಂಡು ಹೋದ್ರು. ಆದ್ರೆ ಹಲ್ಲೆ ಮಾಡಿ ಕಿಡ್ನ್ಯಾಪ್ ಮಾಡಿದ್ದು ಯಾರು ಗೊತ್ತಾ? ಒಬ್ಬಳು ಲೇಡಿ ಡಾನ್. ನಾಲಕ್ಕು ಜನರು ಗುಂಪು ಕಟ್ಟಿಕೊಂಡು ಬಂದ ಆ ಡಾನ್. ಸಲೂನ್ ಓನರ್‌ಗೆ ಮನಬಂದಂತೆ ಥಳಿಸಿದ್ದಳು. ಬಳಿಕ ಎತ್ತಾಕೊಂಡೂ ಹೋದ್ಲು. ಅಷ್ಟಕ್ಕೂ ಆ ಲೇಡಿ ಡಾನ್ ಯಾರು? ಒದೆ ತಿಂದವನು ಯಾರು? ಬೆಂಗಳೂರಿನಲ್ಲಿ ಅಟ್ಟಹಾಸ ಮೆರೆದ ಲೇಡಿ ಡಾನ್ ಕಥೆಯೇ ಇವತ್ತಿನ ಎಫ್.ಐ.ಆರ್