ಕೈಯಲ್ಲಿ ಸಿಗರೇಟ್ ಹಿಡಿದುಕೊಂಡು ಸಲೂನ್​ಗೆ ನುಗ್ಗಿ ಲೇಡಿ ರೌಡಿ ಅಟ್ಟಹಾಸ!

ಕೈಯಲ್ಲಿ ಸಿಗರೇಟ್ ಹಿಡಿದುಕೊಂಡು ಸಲೂನ್​ಗೆ ನುಗ್ಗಿ ಲೇಡಿ ರೌಡಿ ಅಟ್ಟಹಾಸ!

Published : May 31, 2025, 10:39 AM IST

ಲೇಡಿ ಗ್ಯಾಂಗ್ ರೌಡಿಸಂ ಬೆಚ್ಚಿಬೀಳಿಸುವಂತಿದೆ. ಅಬ್ಬಬ್ಬಾ.. ಇವಳ ದರ್ಪ. ಇವಳ ದೌಲತ್ತು ನೋಡಿ.. ಈ ಅಟ್ಟಹಾಸ ನೋಡ್ತಿದ್ರೆ ಇವಳೇನು ಹೆಣ್ಣೋ.. ಹೆಮ್ಮಾರಿಯೋ ಅನ್ನೋ ಅನುಮಾನ ಮೂಡುತ್ತೆ.

ಆತನ ಸಲೂನ್ ಒಂದ್ರಲ್ಲಿ ಕೆಲಸ ಮಾಡ್ತಿದ್ದ. ಆದ್ರೆ ಇತ್ತಿಚೆಗಷ್ಟೇ ಆ ಸಲೂನ್​ನಿಂದ ಹೊರಬಂದು ಸ್ವಂತಃ ಸಲೂನ್ ನಡೆಸ್ತಿದ್ದ.. ಇಷ್ಟಕ್ಕೇ ರೊಚ್ಚಿಗೆದ್ದ ಆ ಲೇಡಿ ಗ್ಯಾಂಗ್.. ಆತನ ಮೇಲೆ ಮೃಗೀಯ ರೀತಿಯಲ್ಲಿ ಎರಗಿದ್ದಾರೆ. ಸಾಲದ್ದಕ್ಕೇ ಆತತನ್ನು ಕಿಡ್ನ್ಯಾಪ್ ಮಾಡಿ ಬೆದರಿಕೆ ಹಾಕಿದೆ. ಲೇಡಿ ಗ್ಯಾಂಗ್ ರೌಡಿಸಂ ಬೆಚ್ಚಿಬೀಳಿಸುವಂತಿದೆ.  ಅಬ್ಬಬ್ಬಾ.. ಇವಳ ದರ್ಪ. ಇವಳ ದೌಲತ್ತು ನೋಡಿ.. ಈ ಅಟ್ಟಹಾಸ ನೋಡ್ತಿದ್ರೆ ಇವಳೇನು ಹೆಣ್ಣೋ.. ಹೆಮ್ಮಾರಿಯೋ ಅನ್ನೋ ಅನುಮಾನ ಮೂಡುತ್ತೆ. ಕೈಯಲ್ಲಿ ಸಿಗರೇಟ್ ಹಿಡಿದುಕೊಂಡು ರೌಡಿಯಂತೆ ಅಬ್ಬರಿಸಿದ್ದಾಳೆ. ಇದ್ದಕ್ಕಿದ್ದಂತೆ ಸಲೂನ್​ಗೆ ಎಂಟ್ರಿ ಕೊಟ್ಟ ಈ ಲೇಡಿ ಗ್ಯಾಂಗ್ ವ್ಯಕ್ತಿ ಮುಖಕ್ಕೆ ಪಂಚ್ ಮೇಲೆ ಪಂಚ್ ಕೊಟ್ಟಿದೆ.

ಅಷ್ಟೆ ಅಲ್ಲ, ಮಹಿಳೆಯ ಜುಟ್ಟು ಹಿಡಿದು ಹಲ್ಲೆ ಮಾಡಿದೆ. ಕೈಮುಗಿದು ಬೇಡಿಕೊಂಡರು ಬಿಡದೆ ಹಲ್ಲೆ ನಡೆಸಿದ್ದ ಈ ಮೃಗೀಯ ಗ್ಯಾಂಗ್ ಈಗ ಅಂದರ್ ಆಗಿದೆ. ಈ ಅಟ್ಟಹಾಸ ನಡೆದಿದ್ದು ಬೆಂಗಳೂರಿನ ಅಮೃತಹಳ್ಳಿಯ ಭುವನೇಶ್ವರಿ ನಗರದಲ್ಲಿ. ಇದೇ ಏರಿಯಾದ ಸಂಜು ಎಂಬಾತ, ರಾಯಲ್ ಸಲೂನ್ ಮತ್ತು ಸ್ಪಾ ನಡೆಸುತ್ತಿದ್ದ. ನಿನ್ನೆ 8 ಗಂಟೆ ಸುಮಾರಿಗೆ ಸ್ಪಾಗೆ ಎಂಟ್ರಿ ಕೊಟ್ಟ ಕಾವ್ಯ, ಸ್ಮಿತಾ, ಮೊಹಮ್ಮದ್ ಹಾಗೂ ಇನ್ನಿಬ್ಬರು ಸಂಜು ಮೇಲೆ ಮನಸೋ ಇಚ್ಛೆ ಮಾಡಿದ್ದಾರೆ. ನಂತ್ರ ಬ್ಲೂ ಕಲರ್ ಸ್ವಿಫ್ಟ್ ಕಾರ್​ನಲ್ಲಿ ಕಿಡ್ನಾಪ್ ಮಾಡಿಕೊಂಡು ದಾಸರಹಳ್ಳಿ ಕಡೆ ಸುತ್ತಾಡಿಸಿ ಬಿಯರ್ ಬಾಟಲ್, ಡ್ರಾಗರ್, ಮಚ್ಚಿನಿಂದ ಹಲ್ಲೆ ಮಾಡಿದ್ದಾರಂತೆ.

ಸಂಜು ಮೇಲೆ ಹಲ್ಲೆ ಮಾಡಿರೋ ಇದೇ ಸ್ಮಿತಾ ಆ್ಯಂಡ್ ಗ್ಯಾಂಗ್ ಜೊತೆ ಸಂಜು ಕೆಲಸ ಮಾಡ್ತಿದ್ದ. ಸಲೂನ್ ಸ್ಪಾನಲ್ಲಿ ಮ್ಯಾನೇಜರ್ ಆಗಿ ಸುಮಾರು 8 ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಇತ್ತೀಚಿಗೆ ಕೆಲಸ ಬಿಟ್ಟಿದ್ದ ಸಂಜು ಅಮೃತಹಳ್ಳಿ ಬಳಿ ಸ್ವಂತ ಸ್ಪಾ ಓಪನ್ ಮಾಡಿದ್ದ. ಇದರಿಂದ ರೊಚ್ಚಿಗೆದ್ದಿದ್ದ ಸ್ಮಿತಾ, ಕಾವ್ಯ ಗ್ಯಾಂಗ್ ನಾಲ್ಕೈದು ಜನರನ್ನ ಕರೆತಂದು ಏಕಾಏಕಿ ಸ್ಪಾ ಒಳಗೆ ‌ನುಗ್ಗಿ ಹಲ್ಲೆ ಮಾಡಿ ಕಿಡ್ನಾಪ್ ಮಾಡಿದ್ದಾರೆ. ಸ್ವಂತ ಸ್ಪಾ ಓಪನ್​ ಮಾಡುವಷ್ಟು ಬೆಳೆದಿದ್ಯಾ ಅಂತಾ ಆವಾಜ್​ ಹಾಕಿದ್ದಾರೆ. ತಕ್ಷಣವೇ ಸಂಜು ಪತ್ನಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಲೇಡಿ ರೌಡಿ ಗ್ಯಾಂಗ್​ ಪತ್ತೆ ಹಚ್ಚಿ ಪೊಲೀಸರು ಸಂಜುನನ್ನ ರಕ್ಷಣೆ ಮಾಡಿದ್ದಾರೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಸ್ಮಿತಾ, ಕಾವ್ಯ, ಮೊಹಮ್ಮದ್ ಅಂದರ್ ಆಗಿದ್ದಾರೆ.

23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
Read more