Sep 1, 2020, 10:33 AM IST
ಬೆಂಗಳೂರು(ಸೆ.01) ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಮಾತ್ರವಲ್ಲ ಸೆಕ್ಸ್ ದಂಧೆ ಕುಡಾ ನಡೆಯುತ್ತೆ ಎಂದು ಯುವನಟನೊಬ್ಬ ಸ್ಫೋಟಕ ಹೇಳಿಕೆ ನೀಡಿದ್ದಾನೆ. ಟ್ಯಾಲೆಂಟ್ ಹಂಟ್ ಹೆಸರಲ್ಲಿ ಇಲ್ಲಿ ಸೆಕ್ಸ್ ಹಂಟ್ ನಡೆಯುತ್ತೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಸ್ಯಾಂಡಲ್‌ವುಡ್ ಮಾತ್ರವಲ್ಲ, ಇಬ್ಬರು MLA ಗಳ ಮಕ್ಕಳು ಡ್ರಗ್ಸ್ ಜಾಲದಲ್ಲಿ?
ಸುರದ್ರೂಪಿ ನಟರನ್ನೇ ಸೆಕ್ಸ್ ಗೆ ಪೀಡಿಸುವ ದೊಡ್ಡ ತಂಡವೊಂದದು ಇಲ್ಲಿ ವ್ಯವಸ್ಥಿತವಾಗಿ ದಂಧೆ ನಡೆಸುತ್ತದೆ. ಚಾನ್ಸ್ ಬೇಕಂದ್ರೆ ಅಡ್ಜಸ್ಟ್ ಮಾಡು, ಕೋ ಆಪರೇಟ್ ಮಾಡು ಅಂತಾರೆ ಎಂದೂ ಆ ಯುವನಟ ಹೇಳಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಮಾಫಿಯಾ; ದಾರಿ ತಪ್ಪಿದ್ದು ಎಲ್ಲಿ?
ತಮ್ಮ ದಂಧೆಗೆ ಬೀಳಿಸಲು ಫೋಟೋ ತರಿಸಿಕೊಂಡು ಗಾಳ ಹಾಕುತ್ತಾರೆ. ಕಾಸ್ಟಿಂಗ್, ಕೋ ಆರ್ಡಿನೇಟರ್ ವೇಷದಲ್ಲಿ ಇಲ್ಲಿ ಪಿಂಪ್‌ಗಳು ಕಾರ್ಯನಿರ್ವಹಿಸುತ್ತಾರೆ. ನಿರ್ಮಾಪಕ ಹಾಗೂ ನಿರ್ದೇಶಕರಜತೆ ಸಹಕರಿಸಲು ರೆಡಿನಾ ಎಂದು ಕೇಳುತ್ತಾರೆ ಎಂದೂ ಈ ಯುವ ನಟ ಆರೋಪಿಸಿದ್ದಾರೆ