ಮುಸ್ಲಿಂ ನಾಯಕನ ಆತ್ಮಹತ್ಯೆ ಕೇಸ್​ಗೆ ಬಿಗ್​​ ಟ್ವಿಸ್ಟ್​​! ಅಣ್ಣನ ಮೇಲಿನ ದ್ವೇಷಕ್ಕೆ ತಮ್ಮನಿಗೆ ಹಾಕಿದ್ರು ಸ್ಕೆಚ್​​!

Oct 10, 2024, 4:16 PM IST

ಮಾಜಿ ಎಂಎಲ್ಎ ಮೊಯಿದ್ದೀನ್​​​ ಬಾವ ಮತ್ತು ಮಾಜಿ ಎಂಎಲ್​ಸಿ ಬಿ.ಎಂ ಫಾರೂಖ್​ ಸಹೋದರ ಮುಮ್ತಾಜ್​ ಆಲಿ ನದಿಯಲ್ಲಿ ಬಿದ್ದು ಸಾವನ್ನಪ್ಪಿ ಮೂರು ದಿನಗಳಾಗಿದೆ. ಕೋಟಿ ಕೋಟಿ ಒಡೆಯ ಆವತ್ತು ಪಲ್ಗುಣಿ ನದಿಗೆ ಹಾರಿಬಿಟ್ಟಿದ್ರು. ಆದ್ರೆ ಅವರ ಸಾವು ಹಲವು ಅನುಮಾನಗಳನ್ನ ಹುಟ್ಟು ಹಾಕಿತ್ತು. ಯಾಕಾಗಿ ಸೂಸೈಡ್​ ಮಾಡಿಕೊಂಡ್ರು? ಯಾಕಾಗಿ ಈ ನಿರ್ಧಾರ ಮಾಡಿದ್ರು ಅನ್ನೋ ಪ್ರಶ್ನೆಗಳನ್ನ ಎಲ್ಲರನ್ನ ಕಾಡಿದ್ವು. ಆದ್ರೆ ತನಿಖೆ ನಡೆಸುತ್ತಿರುವ ಪೊಲೀಸರು ಈಗ ಒಂದೊಂದೇ ಭಯಾನಕ ಸತ್ಯಗಳನ್ನ ಪತ್ತೆ ಮಾಡುತ್ತಿದ್ದಾರೆ.

ಮುಮ್ತಾಜ್​ ಆಲಿ ಸಾವಿಗೂ ಅವರ ಅಣ್ಣ ಮೊಯುದ್ದೀನ್​ ಬಾವ ವಿರೋಧಿಗಳಿಗೂ ಲಿಂಕ್​​ ಇರೋದು ಪತ್ತೆಯಾಗ್ತಿದೆ.. ಹಾಗಾದ್ರೆ ಮುಸ್ಲಿಂ ಮುಖಂಡನ ಸಾವಿಗೆ ನಿಜವಾದ ಕಾರಣವೇನು? ಆವತ್ತು ಮಂಗಳೂರಿನಲ್ಲಿ ನಡೆದಿದ್ದೇನು? ಮುಮ್ತಾಜ್​ ಅಲಿ ಆತ್ಮಹತ್ಯೆ ಕೇಸ್​​ನ ಲೇಟೆಸ್ಟ್​​ ಅಪ್​​ಡೇಟ್ಸ್​​ ಇಲ್ಲಿದೆ ನೋಡಿ