ಹ್ಯಾಕಿಂಗ್ ಮಾಡಿ ಕೋಟಿಗಟ್ಟಲೇ ಹಣ ಮಾಡುತ್ತಿದ್ದ ಖತರ್ನಾಕ್ ಹ್ಯಾಕರ್ ಶ್ರೀಕಿ ಅರೆಸ್ಟ್ ಆಗಿದ್ದಾನೆ. ಜೈಲಿನಿಂದ ಹೊರ ಬಂದರೂ ನಾನು ಹ್ಯಾಕಿಂಗ್ ಮಾಡೋದನ್ನು ಬಿಡುವುದಿಲ್ಲ. ನನಗೆ ಹ್ಯಾಕಿಂಗ್ ಬಿಟ್ಟು ಬೇರೆ ಏನೂ ಮಾಡಲು ಬರುವುದಿಲ್ಲ' ಎಂದಿದ್ದಾನೆ.
ಬೆಂಗಳೂರು (ನ. 21): ಹ್ಯಾಕಿಂಗ್ ಮಾಡಿ ಕೋಟಿಗಟ್ಟಲೇ ಹಣ ಮಾಡುತ್ತಿದ್ದ ಖತರ್ನಾಕ್ ಹ್ಯಾಕರ್ ಶ್ರೀಕಿ ಅರೆಸ್ಟ್ ಆಗಿದ್ದಾನೆ. ಜೈಲಿನಿಂದ ಹೊರ ಬಂದರೂ ನಾನು ಹ್ಯಾಕಿಂಗ್ ಮಾಡೋದನ್ನು ಬಿಡುವುದಿಲ್ಲ. ನನಗೆ ಹ್ಯಾಕಿಂಗ್ ಬಿಟ್ಟು ಬೇರೆ ಏನೂ ಮಾಡಲು ಬರುವುದಿಲ್ಲ' ಎಂದಿದ್ದಾನೆ.
ಭಗವದ್ಗೀತೆ ಪುಸ್ತಕದ ಜೊತೆಗೆ ಸಿಸಿಬಿ ಕಚೇರಿಗೆ ಬಂದಿದ್ದಾನೆ. ಸ್ವಾಮಿ ವಿವೇಕಾನಂದರು, ಓಶೋ ಪುಸ್ತಕಗಳನ್ನು ಓದಿಕೊಂಡಿದ್ದಾನೆ ಈತ. ಆಧ್ಯಾತ್ಮ ಹಾಗೂ ಧ್ಯಾನದ ಬಗ್ಗೆ ಸಾಕಷ್ಟು ಒಲವು ಹೊಂದಿದ್ದ ಈತ. ಹ್ಯಾಕ್ ಮಾಡುವಾಗ ಏಕಾಗ್ರತೆ, ನೆಮ್ಮದಿ ಬಹಳ ಮುಖ್ಯವಾಗುತ್ತದೆ. ಅದಕ್ಕೆ ಈತ ಭಗವದ್ಗೀತೆಯನ್ನು ಓದುತ್ತಿದ್ದ' ಎಂದು ತಿಳಿದು ಬಂದಿದೆ.