ಮದ್ಯಕ್ಕೆ ಪರ್ಮಿಟ್ ನೀಡಲು ಫ್ಯಾಕ್ಟರಿ ಸಿಬ್ಬಂದಿಯಿಂದ ಲಂಚ ಪಡೆದ ಅಧಿಕಾರಿಗಳು, ಕ್ಯಾಮೆರಾದಲ್ಲಿ ಸೆರೆ!

Jun 23, 2022, 1:23 PM IST

ಬೆಂಗಳೂರು (ಜೂ. 23): ಸರ್ಕಾರಿ ಇಲಾಖೆಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ಪದೇ ಪದೇ ವರದಿಗಳಾಗುತ್ತಲೇ ಇರುತ್ತವೆ. ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರದ ಕಾರುಬಾರು ಜೋರಾಗಿದೆ. ಪರ್ಮಿಟ್‌ಗಾಗಿ ಕಂತೆ ಕಂತೆ ಕಾಸು ಕೇಳ್ತಾರೆ ಅಧಿಕಾರಿಗಳು. ಸುವರ್ಣ ನ್ಯುಸ್ ಕ್ಯಾಮೆರಾದಲ್ಲಿ ಲಂಚ ಕೇಳುವ ದೃಶ್ಯಗಳು ಸೆರೆಯಾಗಿವೆ. 

ಬೆಂಗಳೂರು: ವಕೀಲನ ಮೇಲೆ ಖಾಕಿ ದೌರ್ಜನ್ಯ, ಸಿಸಿಟಿವಿಯಲ್ಲಿ ಥಳಿತದ ದೃಶ್ಯ ಸೆರೆ

ಫ್ಯಾಕ್ಟರಿಯಿಂದ ಮದ್ಯ ಸಾಗಿಸಲು ಅಬಕಾರಿ ಇಲಾಖೆಯ ಪರ್ಮಿಟ್ ಕಡ್ಡಾಯ. ಚೆನ್ನೈ ಮದ್ಯ ಕಂಪನಿಯಿಂದ ಹೊಸಕೋಟೆ ವೇರ್‌ಹೌಸ್‌ಗೆ ಮದ್ಯ ಸರಬರಾಜು ಮಾಡಲು ಪರ್ಮಿಟ್ ಕೊಡಲು ಬೆಂಗಳೂರು ಗ್ರಾಮಾಂತರ ಅಬಕಾರಿ ಉಪ ಆಯುಕ್ತ ನಾಗರಾಜಪ್ಪ, ಹೊಸಕೋಟೆ ಅಬಕಾರಿ ನಿರೀಕ್ಷಕ ರಾಜಶೇಖರ್ ರಿಂದ ಅಧಿಕಾರಿಗಳು ಲಂಚ ಪಡೆದಿರುವ ದೃಶ್ಯಗಳು ಸೆರೆಯಾಗಿವೆ.