ಅತಿದೊಡ್ಡ ಅಬಕಾರಿ ದಾಳಿ; ಚಿಕ್ಕಬಳ್ಳಾಪುರದಲ್ಲಿ ಸಿಕ್ಕಿದ ಅಕ್ರಮ ಮದ್ಯ ಖಜಾನೆ

Jan 18, 2021, 4:15 PM IST

ಚಿಕ್ಕಬಳ್ಳಾಪುರ(ಜ. 18)  ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅಪಾರ ಪ್ರಮಾಣದ ಅಕ್ರಮ ಮದ್ಯ ದಾಸ್ತಾನು ವಶಕ್ಕೆ ಪಡೆಯಲಾಗಿದೆ.   ಅಬಕಾರಿ ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ  10 ಲಕ್ಷ ಹೆಚ್ಚು ಮೌಲ್ಯದ ಅಕ್ರಮ ಮದ್ಯ, ಸ್ಪೀರಿಟ್, ಬ್ಲೆಂಡ್ ವಶಕ್ಕ ಪಡೆಯಲಾಗಿದೆ.

ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡ್ತಿದ್ದ ಯುವತಿ!

ಶಿಡ್ಲಘಟ್ಟ ತಾಲೂಕು ತಾದೂರು ಗ್ರಾಮದ ಬಳಿ ಅಕ್ರಮ ಮದ್ಯ  ತಯಾರು ಮಾಡುತ್ತಿದ್ದ ಮಂಜುನಾಥ್  ಎಂಬಾತನನ್ನು ಬಂಧಿಸಲಾಗಿದೆ. ಇತ್ತೀಚಿಗೆ ರಾಜ್ಯದಲ್ಲಿ ಅತಿದೊಡ್ಡ ಅಬಕಾರಿ ದಾಳಿ ಇದಾಗಿದೆ. ಅಕ್ರಮ ಮದ್ಯ ಮಾಡಲು ಬಳಸುತಿದ್ದ ಸಾಮಾಗ್ರಿಗಳು ಕೂಡ ವಶಕ್ಕೆ ಪಡೆಯಲಾಗಿದೆ  ಅಬಕಾರಿ ಡಿಸಿ ನರೇಂದ್ರ ಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದೆ.