ಜಯನಗರದ ₹5 ಕೋಟಿ ಸೈಟಿನ ಮಾಲೀಕನನ್ನು ಅನಾಥ ಶವ ಮಾಡಿದ ರಿಯಲ್ ಎಸ್ಟೇಟ್ ಮಾಫಿಯಾ!

ಜಯನಗರದ ₹5 ಕೋಟಿ ಸೈಟಿನ ಮಾಲೀಕನನ್ನು ಅನಾಥ ಶವ ಮಾಡಿದ ರಿಯಲ್ ಎಸ್ಟೇಟ್ ಮಾಫಿಯಾ!

Published : Jan 17, 2025, 04:35 PM ISTUpdated : Jan 17, 2025, 04:37 PM IST

ಬೆಂಗಳೂರಿನ ಜಯನಗರದಲ್ಲಿ 5 ಕೋಟಿ ರೂ. ಮೌಲ್ಯದ ಆಸ್ತಿಯ ಮಾಲೀಕ ನಾಪತ್ತೆಯಾಗಿದ್ದು, ರಿಯಲ್ ಎಸ್ಟೇಟ್ ಮಾಫಿಯಾ ಕೈವಾಡ ಇರುವುದಾಗಿ ಶಂಕಿಸಲಾಗಿದೆ. ಮನೆ ನೆಲಸಮಗೊಂಡು, ಆತನ ಸಂಬಂಧಿಕರು ಹೇಬಿಯಸ್ ಕಾರ್ಪಸ್ ಮೊರೆ ಹೋಗಿದ್ದಾರೆ.

ಬೆಂಗಳೂರಿನ ಪ್ರತಿಷ್ಠಿತ ಏರಿಯಾ ಜಯನಗರದ 7ನೇ ಹಂತದಲ್ಲಿ ಸುಮಾರು 5 ಕೋಟಿ ರೂ. ಮೌಲ್ಯದ ನಿವೇಶನ ಹೊಂದಿದ್ದ ಇವನಿಗೆ ಯಾರೂ ದಿಕ್ಕು ಇರಲಿಲ್ಲ. ಆತನಿಗೆ ಹಿಂದೆ ಮುಂದೆ ಯಾರೂ ಇಲ್ಲ. ಒಂಟಿಯಾಗಿ ಬೆಂಗಳೂರಿನ ಪ್ರತಿಷ್ಠಿತ ಏರಿಯಾದಲ್ಲಿ ವಾಸ ಮಾಡ್ತಿದ್ದನು. ಅಪ್ಪ ಮಾಡಿಟ್ಟಿದ್ದ ಮನೆಯೇ ಅವನಿಗೆ ಆಸ್ತಿಯಾಗಿತ್ತು. ಅದು ಕಮ್ಮಿ ಇಲ್ಲಾಂದ್ರೂ 4-5 ಕೋಟಿ ರೂ. ಬೆಲೆ ಬಾಳುತ್ತಿತ್ತು. ಆದ್ರೆ ಆವತ್ತೊಂದು ದಿನ ಅತ ಇದ್ದಕ್ಕಿದ್ದಂತೆ ಮಿಸ್ಸಿಂಗ್​ ಆಗಿಬಿಟ್ಟಿದ್ದ. ಆತನ ಸಂಬಂದಿಕರು ಏನಕ್ಕೋ ಬೆಂಗಳೂರಿಗೆ ಬಂದವರು ಇವನ ಮನೆಗೆ ಬಂದಿದ್ದಾರೆ. ಆದರೆ ಅಷ್ಟರಲ್ಲೇ ಆ ಮನೆ ನೆಲಸಮವಾಗಿತ್ತು. ಅವನು ನಾಪತ್ತೆಯಾಗಿದ್ದ. ಪೊಲೀಸ್​​ ಕಂಪ್ಲೆಂಟ್​​ ಕೊಟ್ಟರೂ ​​ ನೋ ಯೂಸ್​​. ಕೊನೆಗೆ ಹೇಬಿಯಸ್​​ ಕಾರ್ಪಸ್​​ ಮೊರೆ ಹೋಗಿದ್ದಾರೆ. ಆಗಲೇ ನೋಡಿ ಪೊಲೀಸರ ರಿಯಲ್​ ಇನ್ವೆಸ್ಟಿಗೇಷನ್​ ಶುರುವಾಗೋದು.

ಇನ್ನು ಸೈಟಿನ ಮಾಲೀಕ ಆನಂದ್‌ಗೆ 44 ವರ್ಷ. ಆತನಿಗೆ ಮದುವೆ ಮಕ್ಕಳು ಯಾರೂ ಇರಲಿಲ್ಲ. ಅಪ್ಪ, ಅಮ್ಮ ವೈದ್ಯರಾಗಿದ್ದರೂ ಮಗನಿಗಾಗಿ ಆಸ್ತಿ ಮಾಡಿಟ್ಟು ವಯೋಸಹಜ ಕಾಯಿಲೆಯಿಂದ ಸತ್ತು ಹೋಗಿದ್ದರು. ಅಕ್ಕನಿಗೆ ಮದುವೆ ಮಾಡಿ ಕೊಟ್ಟಿದ್ದರೂ, ಅಕಾಲಿಕ ಮರಣ ಹೊಂದಿದ್ದರು. ಆಗ ಕೆಲಸಕ್ಕೂ ಹೋದ ಆನಂದ್ ಮನೆ ಹಾಗೂ ಸೈಟ್ ಮಾರಾಟಕ್ಕೆ ಮುಂದಾಗುತ್ತಾನೆ. ಆಗಲೇ ನೋಡಿ ಆನಂದನ ಗೆಳೆತನ ಮಾಡಿಕೊಂಡ ರಿಯಲ್ ಎಸ್ಟೇಟ್ ಮಾಫಿಯಾ ಗ್ಯಾಂಗ್‌ನ ಮೂವರು ಆನಂದನ ಸೈಟನ್ನು ಬೇಕಾಬಿಟ್ಟಿ ಬೆಲೆಗೆ ಮಾರಾಟಕ್ಕೆ ಒಪ್ಪಿಸುತ್ತಾರೆ. 

ಇದನ್ನೂ ಓದಿ: ₹5 ಕೋಟಿ ಮೌಲ್ಯದ ಸೈಟಿನ ಒಡೆಯನನ್ನು ಫ್ರೆಂಡ್‌ಶಿಪ್ ಹೆಸರಲ್ಲಿ ಕೊಲೆಗೈದ ರಿಯಲ್ ಎಸ್ಟೇಟ್ ಉದ್ಯಮಿಗಳು!

ಆತನಿಂದ ಎಲ್ಲ ಸಹಿ ಪಡೆದು ಕಾಗದ ಪತ್ರಗಳನ್ನು ಸಲೀಸಾಗಿ ಕಾನೂನು ಪ್ರಕಾರ ಬೇರೆಯವರ ಹೆಸರಿಗೆ ಮಾಡಿಸುತ್ತಾರೆ. ಆಗ ಅಡ್ವಾನ್ಸ್ ಆಗಿ ಕೊಟ್ಟ 45 ಲಕ್ಷ ಹಣವನ್ನು ಆನಂದನಿಗೆ ಕೊಡದೇ ಒಂದು ತಿಂಗಳು ಟ್ರಿಪ್‌ಗೆ ಕರೆದುಕೊಂಡು ಹೋಗುತ್ತಾರೆ. ಅವನು ಟ್ರಿಪ್‌ಗೆ ಹೋಗುತ್ತಿದ್ದಂತೆ ಇಲ್ಲಿ ಮನೆ ನೆಲಸಮ ಮಾಡಿಸಿದ್ದಾರೆ. ಆಗ ಆನಂದ್‌ ತಾನು ಮನೆಗೆ ಹೋಗಲೇಬೇಕು ಎಂದು ಹಠ ಮಾಡಿದಾಗ ಮೈಸೂರಿನಿಂದ ಬೆಂಗಳೂರಿಗೆ ರಾತ್ರಿ 2 ಗಂಟೆ ಸುಮಾರಿ ಕಾರಿನಲ್ಲಿ ಕರೆದುಕೊಂಡು ಬಂದ ಸ್ನೇಹಿತರು ಆತನನ್ನು ಕೊಲೆ ಮಾಡಿ ಕಾವೇರಿ ನದಿಗೆ ಎಸೆದು ಬರುತ್ತಾರೆ. ಆದರೆ. ಪೊಲೀಸರು ಶವ ನೋಡಿ ಅನಾಥ ಶವವೆಂದು ಹೂತು ಮಣ್ಣು ಮಾಡಿಬಿಡುತ್ತಾರೆ. ಮುಂದೆ ಏನಾಯ್ತು ಒಮ್ಮೆ ನೀವೇ ನೋಡಿ...

25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
Read more