Dec 16, 2022, 4:28 PM IST
ಬೆಂಗಳೂರು (ಡಿ. 16): ಪತ್ನಿಯ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಆಕೆಯ ಕೊಲೆಗೂ ಯತ್ನಿಸಿದ ಆರೋಪದಲ್ಲಿ ಅಟ್ಟಿಕಾ ಗೋಲ್ಡ್ ಕಂಪನಿಯ ಮಾಲೀಕ ಅಟ್ಟಿಕಾ ಬಾಬುವನ್ನು ಅನಂತಪುರ ಪೊಲೀಸರು ಬಂಧಿಸಿದ್ದಾರೆ. ಈ ಕುರಿತಾಗಿ ದೂರು ದಾಖಲಾದ ಹಿನ್ನಲೆಯಲ್ಲಿ ಅವರನ್ನು ಬಂಧನ ಮಾಡಲಾಗಿದೆ.
ಶೇಕ್ ಮೀನಾಜ್ ಎಂಬವರನ್ನು ಮದುವೆ ಆಗಿದ್ದ ಆಯೂಬ್ ಅಲಿಯಾಸ್ ಅಟ್ಟಿಕಾ ಬಾಬು, ಡಿಸೆಂಬರ್ 12ರಂದು ಯಲ್ಲೂರಿಗೆ ತೆರಳಿ ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಅವರ ಮೇಲೆ ಕೇಳಿಬಂದಿದೆ. ತನ್ನ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಮನೆಯ ಪೀಠೋಪಕರಣಗಳನ್ನು ಧ್ವಂಸ ಮಾಡಿ ನನ್ನ ಕೊಲೆ ಮಾಡಲು ಕೂಡ ಪ್ರಯತ್ನಪಟ್ಟಿದ್ದರು ಎಂದು ಶೇಕ್ ಮಿನಾಜ್ ದೂರು ನೀಡಿದ್ದರು.
Davanagere: ಹಿರೇಕೆರೂರಿನಲ್ಲಿ ಹೃದಯವಿದ್ರಾವಕ ಘಟನೆ: ರಸ್ತೆ ಅಪಘಾತಕ್ಕೆ ನವ ವರ ಸ್ಥಳದಲ್ಲೇ ಸಾವು
ಅನಂತಪುರ ಪೊಲೀಸರು ಅಟ್ಟಿಕಾ ಬಾಬುವನ್ನು ಹುಡುಕಿಕೊಂಡು ಪೊಲೀಸರು ಬಂದಿದ್ದರು. ಸಿಸಿಬಿ ಹಾಗೂ ಹೈಗ್ರೌಂಡ್ಸ್ ಪೊಲೀಸರ ಸಹಾಯದೊಂದಿಗೆ ಅವರನ್ನು ವಶಕ್ಕೆ ಪಡೆಯಲಾಗಿದೆ.