News Hour: ವಿಶ್ವ ವಿಜೇತರಿಗೆ ತವರಲ್ಲಿ ಅದ್ದೂರಿ ಸ್ವಾಗತ, ವಿಜಯಯಾತ್ರೆಗೆ ಸೇರಿದ ಜನಸಾಗರ!

News Hour: ವಿಶ್ವ ವಿಜೇತರಿಗೆ ತವರಲ್ಲಿ ಅದ್ದೂರಿ ಸ್ವಾಗತ, ವಿಜಯಯಾತ್ರೆಗೆ ಸೇರಿದ ಜನಸಾಗರ!

Published : Jul 04, 2024, 11:01 PM IST

ವಿಶ್ವಕಪ್​ ಗೆದ್ದ ಟೀಮ್​ ಇಂಡಿಯಾಗೆ ತವರಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ವಾಣಿಜ್ಯ ನಗರಿ ಮುಂಬೈ ವಿಜಯಯಾತ್ರೆಗೆ ಸಾಕ್ಷಿಯಾಗಿದೆ. ಕ್ರಿಕೆಟ್​ ಅಭಿಮಾನಿಗಳ ಅಲೆ ಮಧ್ಯೆ ರೋಡ್​ ಷೋ ನಡೆದಿದೆ.

ಮುಂಬೈ (ಜು.4): ಭಾರತಕ್ಕೆ ಟಿ20 ವಿಶ್ವಕಪ್​​​​ ಚಾಂಪಿಯನ್ನರ ಆಗಮನವಾಗಿದೆ.. 3 ದಿನ ತಡವಾಗಿ ಬಂದ ರೋಹಿತ್​ ಪಡೆಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಬಾರ್ಬಡೋಸ್​​​ನಂತೆ ಭಾರತದಲ್ಲಿಯೂ ಸಂಭ್ರಮ ಮನೆ ಮಾಡಿತ್ತು.ವಿಶ್ವ ವಿಜೇತರರಿಗೆ ಸನ್ಮಾನ ಮಾಡಿದ ಪ್ರಧಾನಿ ಮೋದಿ ಉಪಹಾರ ಕೂಟ ಆಯೋಜಿಸಿದ್ದರು.

17 ವರ್ಷಗಳ ಬಳಿಕ ಟೀಮ್​ ಇಂಡಿಯಾ ವಿಶ್ವಕಪ್​ ಕಾಳಗದ​ ಅಗ್ನಿ ಪರೀಕ್ಷೆ ಗೆದ್ದಾಗಿದೆ.. ಮಹಾ ಕದನದಲ್ಲಿ ಆಟಗಾರರು ನೀಡಿದ ಪ್ರದರ್ಶನದಿಂದಾಗಿ ವಿಶ್ವದೆದುರು  ಹೀರೋಗಳಾಗಿದ್ದಾರೆ.. ಟಿ20 ವಿಶ್ವಕಪ್​ ಗೆದ್ದು ಚರಿತ್ರೆ ಸೃಷ್ಟಿಸಿದ ಟೀಮ್ ಇಂಡಿಯಾ ಆಟಗಾರರು ಸ್ವದೇಶಕ್ಕೆ ಮರಳಿದ್ದಾರೆ. ಬೆಳಗ್ಗೆ ವಿಶೇಷ ವಿಮಾನದಲ್ಲಿ ದೆಹಲಿಗೆ ಬಂದಿಳಿದ ರೋಹಿತ್​ ಬಳಗವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.

ಟೀಮ್‌ ಇಂಡಿಯಾ ಪ್ಲೇಯರ್ಸ್‌ಗೆ 125 ಕೋಟಿ ರೂಪಾಯಿ ಚೆಕ್‌ ನೀಡಿದ ಬಿಸಿಸಿಐ

ಬೆರಿಲ್​ ಚಂಡಮಾರುತ ಪರಿಣಾಮ ಕಳೆದ 3 ದಿನಗಳಿಂದ ಟೀಂ ಇಂಡಿಯಾ ವೆಸ್ಟ್​ಇಂಡೀಸ್​​ನ ಬಾರ್ಬಡೊಸ್​ನಲ್ಲಿ ಉಳಿದುಕೊಂಡಿತ್ತು. ಹೀಗಾಗಿ ಬಿಸಿಸಿಐ ವಿಶೇಷ ಮುತುವರ್ಜಿ ವಹಿಸಿ ಚಾರ್ಟರ್ಡ್​ ಫ್ಲೈಟ್​ ಮೂಲಕ ಆಟಗಾರರನ್ನ ದೇಶಕ್ಕೆ ಕರೆತಂದಿದೆ.. ಇಂದು ಬೆಳಗ್ಗೆ 6:30ರ ಸುಮಾರಿಗೆ ರೋಹಿತ್​ & ಟೀಮ್​​ ದೆಹಲಿಗೆ ಬಂದಿಳಿದಿದ್ದು ವಿಮಾನ ನಿಲ್ದಾಣದಲ್ಲಿಯೇ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯ್ತು..
 

03:05ಚಿನ್ನಸ್ವಾಮಿಯಲ್ಲಿ ಐಪಿಎಲ್‌ ಪಂದ್ಯ: ಹೇಗಿದೆ ಪಾರ್ಕಿಂಗ್ ವ್ಯವಸ್ಥೆ? ಏನೆಲ್ಲಾ ಸೌಲಭ್ಯ?
03:21ಐಪಿಎಲ್ ಕಪ್‌ ಗೆಲ್ಲಲೇ ಬೇಕು! ಆರ್‌ಸಿಬಿ ಜೆನ್‌ಝಿ, ಜೆನ್‌ ಆಲ್ಫಾಗೆ ಭಾರೀ ನಿರೀಕ್ಷೆ!
03:09ಆರ್‌ಸಿಬಿ ಈ ಬಾರಿಯೂ ಕಪ್‌ ಗೆಲ್ಲುತ್ತಾ? ಜೆನ್‌ಝಿ, ಜೆನ್‌ ಆಲ್ಫಾ ಫ್ಯಾನ್ಸ್ ಹೇಳೋದೇನು?
01:50ಟ್ರೋಫಿ ಕೊಡಲು ಹಟ ಹಿಡಿದ ನಖ್ವಿಗೆ ಶಾಕ್ ಕೊಡಲು ಬಿಸಿಸಿಐ ಮಾಸ್ಟರ್ ಪ್ಲಾನ್
01:58ಮುಂದುವರಿದ ಏಷ್ಯಾ ಕಪ್‌ ಟ್ರೋಫಿ ಹಸ್ತಾಂತರ ರಗಳೆ! ಕ್ಷಮೆ ಕೇಳಿದ ನಖ್ವಿ ಹೊಸ ಕ್ಯಾತೆ
02:08ಪಾಕ್‌ಗೆ ಏಷ್ಯಾಕಪ್‌ನಲ್ಲಿ ಭಾರೀ ಮುಖಭಂಗ! ಐಸಿಸಿ ವಾರ್ನಿಂಗ್‌ಗೆ ಪಾಕ್ ಕಂಗಾಲು
02:18ದುಬೈನಲ್ಲಿಂದು ಪಾಕ್ ಮೇಲೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?
02:04Asia Cup 2025: ಎಂಟು ತಂಡಗಳ ಪೈಕಿ ಮೂವರು ಟೀಂ ಔಟ್, ಸೂಪರ್ 4 ಹಂತಕ್ಕೇರೋರು ಯಾರು?
03:08Asia Cup 2025: ಹಲವು ಗಾಸಿಪ್‌ಗೆ ಬ್ರೇಕ್ ಹಾಕಿದ ಸೂರ್ಯಕುಮಾರ್ ಯಾದವ್!
03:12ಯುಎಇ ಎದುರಿನ ಪಂದ್ಯಕ್ಕೆ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಯಾರು?
Read more