
ಏಷ್ಯಾಕಪ್ ಟೂರ್ನಿ ಆರಂಭವಾಗಿ ಈಗಾಗಲೇ ನಾಲ್ಕು ದಿನಗಳು ಕಳೆದಿವೆ. ದಿನಕಳೆದಂತೆ ಇದೀಗ ಏಷ್ಯಾಕಪ್ ಟೂರ್ನಿಯ ಸೂಪರ್ 4 ಲೆಕ್ಕಾಚಾರ ಜೋರಾಗಿದೆ. ಟೂರ್ನಿಯಲ್ಲಿ ಪಾಲ್ಗೊಂಡಿರುವ ಏಷ್ಯಾದ 8 ತಂಡಗಳ ಪೈಕಿ ಈಗಾಗಲೇ ಮೂರು ತಂಡಗಳು ಗಂಟುಮೂಟೆ ಕಟ್ಟಿಕೊಂಡು ಮನೆಗೆ ವಾಪಾಸ್ಸಾಗಲು ರೆಡಿಯಾಗ್ತಿವೆ. ಓಮಾನ್ ಎದುರು ಪಾಕಿಸ್ತಾನ ಗೆಲುವು ಸಾಧಿಸುತ್ತಿದ್ದಂತೆಯೇ ಸೂಪರ್ 4 ಸಿನಾರಿಯೋ ಮತ್ತಷ್ಟು ಕ್ಯೂರಿಯಾಸಿಟಿ ಹೆಚ್ಚಾಗುವಂತೆ ಮಾಡಿದೆ.
ಸದ್ಯ 'ಬಿ' ಗುಂಪಿನಲ್ಲಿ ಸತತ ಎರಡು ಸೋಲು ಕಂಡಿರುವ ಹಾಂಕಾಂಗ್ ತಂಡವು ಬಹುತೇಕ ಸೂಪರ್ 4 ರೇಸ್‌ನಿಂದ ಹೊರಬಿದ್ದಂತೆ ಆಗಿದೆ. ಹಾಂಕಾಂಗ್ ತಂಡದ ಇನ್ನೊಂದು ಸೋಲು ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳುವಂತೆ ಮಾಡಲಿದೆ. ಇನ್ನು 'ಎ' ಗುಂಪಿನಲ್ಲಿ ಯುಎಇ ತಂಡವು ಭಾರತ ಎದುರು 9 ವಿಕೆಟ್ ಅಂತರದ ಹೀನಾಯ ಸೋಲು ಅನುಭವಿಸಿದೆ. ಪರಿಣಾಮ ಯುಎಇ ತಂಡದ ನೆಟ್ ರನ್‌ರೇಟ್ ನೆಗೆಟಿವ್ 10ಗೆ ಕುಸಿದಿದೆ. ಇನ್ನೊಂದು ಸೋಲು ಅಧಿಕೃತವಾಗಿ ಯುಎಇ ತಂಡದ ಸೂಪರ್ 4 ಕನಸನ್ನು ನುಚ್ಚುನೂರು ಮಾಡಲಿದೆ.
ಇನ್ನು ಪಾಕ್ ಎದುರು ಓಮಾನ್ ತಂಡ 93 ರನ್ ಅಂತರದ ಸೋಲು ಅನುಭವಿಸಿದ್ದು, ನೆಟ್ ರನ್‌ರೇಟ್ ನೆಗೆಟಿವ್ 4ಗೆ ಕುಸಿದಿದೆ. ಓಮಾನ್ ಇದೀಗ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಬಲಿಷ್ಠ ಭಾರತ ತಂಡವನ್ನು ಎದುರಿಸಲಿದೆ. ಹೀಗಾಗಿ ಓಮಾನ್‌ಗೆ ಮತ್ತೊಂದು ಸೋಲು ಕಟ್ಟಿಟ್ಟ ಬುತ್ತಿ ಎಂದು ವಿಶ್ಲೇಷಲಾಗುತ್ತಿದೆ. ಹೀಗಾಗಿ ಓಮಾನ್ ಕೂಡಾ ಗ್ರೂಪ್ ಹಂತದಲ್ಲೇ ಹೊರಬೀಳುವ ಸಾಧ್ಯತೆ ನಿಚ್ಚಳವಾಗಿದೆ.