
ಬೆಂಗಳೂರು: ಇವತ್ತಿನಿಂದ 17ನೇ ಸೀಸನ್ ಏಷ್ಯಾಕಪ್ ಟೂರ್ನಿ ಶುರುವಾಗ್ತಿದೆ. ಉದ್ಘಾಟನಾ ಪಂದ್ಯದಲ್ಲಿ ಆಫ್ಘಾನಿಸ್ತಾನ-ಹಾಂಕಾಂಗ್ ತಂಡಗಳು ಕಣಕ್ಕಿಳಿಯುವ ಮೂಲಕ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ. ಈ ಪಂದ್ಯಕ್ಕೆ ಅಬುದಾಬಿಯ ಶೇಕ್ ಝಾಯೆದ್ ಮೈದಾನ ಆತಿಥ್ಯ ವಹಿಸಲಿದೆ. ಇನ್ನು ಈ ಬಾರಿಯ ಏಷ್ಯಾಕಪ್ ಟೂರ್ನಿಯು ಹಲವು ವಿಶೇಷತೆಗಳಿಗೆ ಸಾಕ್ಷಿಯಾಗ್ತಾ ಇದೆ.
20 ದಿನಗಳ ಕಾಲ ನಡೆಯುವ ಏಷ್ಯಾಕಪ್ ಟೂರ್ನಿಯಲ್ಲಿ ಫೈನಲ್ ಸೇರಿದಂತೆ 19 ಪಂದ್ಯಗಳು ನಡೆಯಲಿವೆ. ಚಾಂಪಿಯನ್ ತಂಡಕ್ಕೆ 2.6 ಕೋಟಿ, ರನ್ನರ್ ಅಪ್ ತಂಡಕ್ಕೆ 1.3 ಕೋಟಿ ರೂಪಾಯಿ ನಗದು ಬಹುಮಾನ ಸಿಗಲಿದೆ
ಏಷ್ಯಾಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿ 8 ತಂಡಗಳು ಕಣಕ್ಕಿಳಿತಿವೆ. ಕಳೆದ ಆವೃತ್ತಿಯಲ್ಲಿ ಗರಿಷ್ಠ 6 ತಂಡಗಳು ಆಡಿದ್ದವು. 1984, 1986, 1991 ರಲ್ಲಿ ಕೇವಲ 3 ತಂಡಗಳು ಏಷ್ಯಾಕಪ್ ಟೂರ್ನಿಯಲ್ಲಿ ಕಣಕ್ಕಿಳಿದಿದ್ದವು.
ಇನ್ನು ಇದೇ ಮೊದಲ ಸಲ ಓಮಾನ್ ಕ್ರಿಕೆಟ್ ತಂಡವು ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಳ್ತಾ ಇದೆ. 1984ರಿಂದ ಏಷ್ಯಾಕಪ್ ಟೂರ್ನಿ ನಡೆಯುತ್ತಾ ಬಂದಿದೆ. ಆದರೆ ಇದುವರೆಗೂ ಓಮಾನ್ ತಂಡಕ್ಕೆ ಏಷ್ಯಾಕಪ್ ಆಡುವ ಅರ್ಹತೆ ಸಿಕ್ಕಿರಲಿಲ್ಲ. ಇದೀಗ ಓಮಾನ್ 'ಎ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಭಾರತ, ಪಾಕಿಸ್ತಾನದಂತಹ ಏಷ್ಯಾದ ಬಲಿಷ್ಠ ತಂಡಗಳ ಸವಾಲು ಎದುರಾಗಲಿದೆ.