Coronavirus India

ದೇಶದ ಜನತೆಗೆ ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್ ಮತ್ತೊಂದು ಸಂದೇಶ

Mar 30, 2020, 6:46 PM IST

ಬೆಂಗಳೂರು (ಮಾ.30):  ಭಾರತದಲ್ಲಿ ಕೊರೋನಾವೈರಸ್ ಸೋಂಕಿತರ ಸಂಖ್ಯೆ 1000 ಗಡಿ ದಾಟಿದೆ.  ಸೋಂಕು ಹರಡುವಿಕೆ ತಡೆಯಲು ಭಾರತ ಲಾಕ್‌ಡೌನ್ ಮೊರೆಹೋಗಿದೆ. ಸೋಂಕು ಹರಡದಂತೆ ತಡೆಯಲು ಪ್ರತಿಯೊಬ್ಬರು ಮುಂಜಾಗೃತ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ  ಮೂಲಕ ಕೊರೋನಾವೈರಸ್ ಹರಡದಂತೆ ಎಲ್ಲರೂ ಎಚ್ಚರ ವಹಿಸಬೇಕು. ಮುನ್ನಚ್ಚರಿಕೆಗಳ ಪೈಕಿ  ಡಿಜಿಟಲ್ ವ್ಯವಹಾರವೂ ಒಂದು. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಮೊಬೈಲ್ ಆ್ಯಪ್‌ಗಳ ಮೂಲಕ ಡಿಜಿಟಲ್ ವ್ಯವಹಾರ ಮಾಡೋದ್ರಿಂದ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬಹುದು. 

ಇದನ್ನೂ ನೋಡಿ | EMI ಬೆನ್ನಲ್ಲೇ ಮೊಬೈಲ್ ಬಳಕೆದಾರರಿಗೂ ವ್ಯಾಲಿಡಿಟಿ ರಿಲೀಫ್?

ಈ ಬಗ್ಗೆ ಖುದ್ದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ದೇಶದ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಬನ್ನಿ ಅವರೇನು ಹೇಳಿದ್ದಾರೆ ಕೇಳೋಣ...