ಸೌತ್​​ನಲ್ಲಿ ಸಿದ್ದವಾಗಲಿದೆ ಮತ್ತೊಂದು ರಾಮಾಯಣ: ಸೌತ್ ರಾಮ, ಬಾಲಿವುಡ್ ಸೀತೆ, ಉಲ್ಟಾಪಲ್ಟಾ ಕತೆ

ಸೌತ್​​ನಲ್ಲಿ ಸಿದ್ದವಾಗಲಿದೆ ಮತ್ತೊಂದು ರಾಮಾಯಣ: ಸೌತ್ ರಾಮ, ಬಾಲಿವುಡ್ ಸೀತೆ, ಉಲ್ಟಾಪಲ್ಟಾ ಕತೆ

Published : Jul 23, 2025, 02:25 PM IST

ನಾರ್ತ್ ರಾಮನಿಗೆ ಸೌತ್ ಸೀತೆಯಾದ್ರೆ, ಈ ರಾಮಾಯಣದಲ್ಲಿ ಸೌತ್ ರಾಮನಿಗೆ ಬಾಲಿವುಡ್ ಸೀತೆ ಜೊತೆಯಾಗಲಿದ್ದಾರೆ. ಇನ್ನೂ ಈ ಸಿನಿಮಾದಲ್ಲಿ ಮೋಹನ್ ಬಾಬು ರಾವಣನ ಪಾತ್ರ ಮಾಡ್ತಾರಂತೆ.

ಬಾಲಿವುಡ್ ಟೀಂ ಜೊತೆ ರಾಕಿಂಗ್ ಸ್ಟಾರ್ ಯಶ್ ಪ್ಯಾನ್ ವರ್ಲ್ಡ್ ರಾಮಾಯಣ ನಿರ್ಮಿಸ್ತಾ ಇರೋ ವಿಷ್ಯ ಗೊತ್ತೇ ಇದೆ. ಅದರ ಜೊತೆಗೆ ಈಗ ಸೌತ್​ನಲ್ಲಿ ಮತ್ತೊಂದು ರಾಮಾಯಣ ನಿರ್ಮಿಸೋದಕ್ಕೆ ತಂಡವೊಂದು ಸಜ್ಜಾಗಿದೆ. ಈ ಹೊಸ ರಾಮಾಯಣದಲ್ಲಿ ಯಾರೆಲ್ಲಾ ಲೀಡ್ ರೋಲ್ ಮಾಡ್ತಾರೆ ಗೊತ್ತಾ..? ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ. ನಿತೇಶ್ ತಿವಾರಿ ನಿರ್ದೇಶನದಲ್ಲಿ ಎರಡು ಭಾಗಗಳಲ್ಲಿ ರಾಮಾಯಣ ಪ್ರಾಜೆಕ್ಟ್ ಬರ್ತಿರೋ ವಿಷ್ಯ ಗೊತ್ತೇ ಇದೆ. ಈ ಸಿನಿಮಾದಲ್ಲಿ ರಣಬೀರ್​ ಕಪೂರ್ ರಾಮನಾದ್ರೆ, ಸಾಯಿ ಪಲ್ಲವಿ ಸೀತೆ ಪಾತ್ರ ಮಾಡ್ತಾ ಇದ್ದಾರೆ. ಮತ್ತು ನಮ್ಮ ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಮಿಂಚ್ತಾ ಇದ್ದಾರೆ. ಇತ್ತೀಚಿಗೆ ಈ ರಾಮಾಯಣ ಮೂವಿಯ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆಗಿ ಎಲ್ಲರ ಮನಸು ಗೆದ್ದಿತ್ತು.

ಮತ್ತೀಗ ಸೌತ್​ನಲ್ಲಿ ಮತ್ತೊಂದು ರಾಮಾಯಣ ಪ್ರಾಜೆಕ್ಟ್ ಬರ್ತಾ ಇದೆ. ಇತ್ತೀಚಿಗೆ ಕಣ್ಣಪ್ಪ ಸಿನಿಮಾ ಮಾಡಿ ಸಕ್ಸಸ್ ಕಂಡಿರೋ ವಿಷ್ಣು ಮಂಚು ರಾಮಾಯಣ ಸಿನಿಮಾ ನಿರ್ಮಿಸೋದಕ್ಕೆ  ಸಿದ್ದವಾಗಿದ್ದಾರೆ. ಬಾಲಿವುಡ್ ರಾಮಾಯಣದಲ್ಲಿ ರಣ್​ಬೀರ್ ರಾಮನಾಗಿ ಕಾಣಿಸಿಕೊಂಡ್ರೆ, ವಿಷ್ಣು ಮಂಚು ನಿರ್ಮಾಣದ ರಾಮಾಯಣದಲ್ಲಿ ಆಲಿಯಾ ಭಟ್ ಸೀತೆಯಾಗಲಿದ್ದಾರಂತೆ. ಗಂಡ ಹೆಂಡತಿ ಇಬ್ಬರೂ ರಾಮ-ಸೀತೆ ಪಾತ್ರ ಮಾಡ್ತಾ ಇದ್ದಾರೆ. ಆದ್ರೆ ಸಿನಿಮಾಗಳು ಮಾತ್ರ ಬೇರೆ ಬೇರೆ. ಹೌದು ವಿಷ್ಣು ಮಂಚು ನಿರ್ಮಾಣದ ರಾಮಾಯಣದಲ್ಲಿ ತಮಿಳು ನಟ ಸೂರ್ಯ ರಾಮನ ಪಾತ್ರ ಮಾಡಲಿದ್ದಾರಂತೆ. ಆಲಿಯಾ ಸೀತೆಯಾಗ್ತಾ ಇದ್ದಾರೆ. ಬಾಲಿವುಡ್ ರಾಮಾಯಣದಲ್ಲಿ ಬಾಲಿವುಡ್ ರಾಮ ಇದ್ರೆ, ಸೌತ್ ಬ್ಯೂಟಿ ಸಾಯಿ ಪಲ್ಲವಿ ಸೀತೆ ಪಾತ್ರ ಮಾಡ್ತಿದ್ದಾರೆ.

ಅಲ್ಲಿಗೆ ಆ ರಾಮಾಯಣದಲ್ಲಿ ನಾರ್ತ್ ರಾಮನಿಗೆ ಸೌತ್ ಸೀತೆಯಾದ್ರೆ, ಈ ರಾಮಾಯಣದಲ್ಲಿ ಸೌತ್ ರಾಮನಿಗೆ ಬಾಲಿವುಡ್ ಸೀತೆ ಜೊತೆಯಾಗಲಿದ್ದಾರೆ. ಇನ್ನೂ ಈ ಸಿನಿಮಾದಲ್ಲಿ ಮೋಹನ್ ಬಾಬು ರಾವಣನ ಪಾತ್ರ ಮಾಡ್ತಾರಂತೆ. ಸದ್ಯ ಕಣ್ಣಪ್ಪ ಸಿನಿಮಾ ಸಕ್ಸಸ್ ಖುಷಿಯಲ್ಲಿ ರಾಮಾಯಣ ಪ್ರಾಜೆಕ್ಟ್ ಅನೌನ್ಸ್ ಮಾಡಿದ್ದಾರೆ ವಿಷ್ಣು ಮಂಚು. ಇತ್ತೀಚಿಗೆ ಸಿನಿದುನಿಯಾ ಮತ್ತೆ ರಾಮಾಯಣದ ಹಿಂದೆ ಬಿದ್ದಿದೆ. 2023ರಲ್ಲಿ ಪ್ರಭಾಸ್ ನಟನೆಯಲ್ಲಿ ರಾಮಾಯಣ ಆಧರಿಸಿ ಆದಿಪುರುಷ್ ಸಿನಿಮಾ ಬಂದಿತ್ತು. ರಣ್​ಬೀರ್, ಸಾಯಿ ಪಲ್ಲವಿ, ಯಶ್ ನಟನೆಯಲ್ಲಿ ಪ್ಯಾನ್  ವರ್ಲ್ಡ್ ರಾಮಾಯಣ ಮೂಡಿಬರ್ತಿದೆ. ಮತ್ತೀಗ ಮತ್ತೊಂದು ರಾಮಾಯಣ ಕೂಡ ಶುರುವಾಗಿದೆ. ಒಟ್ಟಾರೆ ರಾಮಾಯಣ ಒಂದು ರಾಮ, ಸೀತೆ ಹಲವರು ಅನ್ನೋ ತರಹ ಆಗಿದೆ.

05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
Read more