ಕಳ್ಳರು ನಮಗಿಂತ 10 ಹೆಜ್ಜೆ ಮುಂದಿರುತ್ತಾರೆ; ಪೈರಸಿ ಬಗ್ಗೆ ಕಿಚ್ಚನ ಮಾತು

Jul 18, 2022, 12:12 PM IST

ಕಿಚ್ಚ ಸುದೀಪ್ ಸದ್ಯ ವಿಕ್ರಾಂತ್ ರೋಣ ಸಿನಿಮಾ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಬಹುನಿರೀಕ್ಷೆಯ ಸಿನಿಮಾ ಜುಲೈ 28ರಂದು ತೆರೆಗೆ ಬರುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿರುವ ವಿಕ್ರಾಂತ್ ರೋಣ ಸಿನಿಮಾ ಬಗ್ಗೆ ಕಿಚ್ಚ ಸುದೀಪ್ ಇಂಟ್ರಸ್ಟಿಂಗ್ ಮಾಹಿತಿ ಹಂಚಿಕೊಂಡಿದ್ದಾರೆ. ಸಿನಿಮಾದ ಪೈರಸಿ ಬಗ್ಗೆಯೂ ಕಿಚ್ಚ ಸುದೀಪ್ ಮಾತನಾಡಿದ್ದಾರೆ. ಪೈಲ್ವಾನ್ ಪೈರಸಿ ಆದಾಗ ಸಮಯ, ನನ್ನ ಅಭಿಮಾನಿಗಳು ಸಹಾಯ ಮಾಡಿದರು. ಪೈರಸಿ ಆದರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿದ್ದಾರೆ. ಆ ನಂಬಿಕೆ ನನಗಿದೆ.  ಕಳ್ಳರು ಬಂದ್ಮೇಲೆ ಕಾನೂನು ಬಂದಿದ್ದು. ಕಳ್ಳರು ನಮಗಿಂತ 10 ಹೆಜ್ಜೆ ಮುಂದಿರುತ್ತಾರೆ. ನಾವು ಏನೆ ಮಾಡಿದರು ಅದಕ್ಕೊಂದು ದಾರಿ ಕಂಡು ಹಿಡಿದುಕೊಳ್ಳುತ್ತಾರೆ ಎಂದು ಸುದೀಪ್ ಹೇಳುದರು.