ವಸಿಷ್ಠ ಇದೀಗ ತನ್ನದೆ ಆದ ಆಡಿಯೋ ಲೇಬಲ್ ಲಾಂಚ್ ಮಾಡಿದ್ದಾರೆ. ಆಡಿಯೋ ಲೇಬಲ್ ಲಾಂಚ್ ಮಾಡುವ ಮೊದಲು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಸಲ್ಲಿಸಲಾಯಿತು. ಬಳಿಕ ಮಾತನಾಡಿದ ವಸಿಷ್ಠ, ಅಪ್ಪು ಸರ್ ಜನರ ಪ್ರೀತಿ, ಚಪ್ಪಾಳೆ ಗಳಿಸಿದ್ರು, ಕಾಲವಾದ ಬಳಿಕ ಭಕ್ತಿನೂ ಸಂಪಾದನೆ ಮಾಡಿದ್ರು ಎಂದು ಹೇಳಿದ್ದಾರೆ.
ನಟ ವಸಿಷ್ಠ ಸಿಂಹ ಚಿತ್ರರಂಗದಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ. ನಟನಾಗಿ, ಗಾಯಕನಾಗಿ ಖ್ಯಾತಿಗಳಿಸಿದ್ದ ವಸಿಷ್ಠ ಇದೀಗ ತನ್ನದೆ ಆದ ಆಡಿಯೋ ಲೇಬಲ್ ಲಾಂಚ್ ಮಾಡಿದ್ದಾರೆ. ಆಡಿಯೋ ಲೇಬಲ್ ಲಾಂಚ್ ಮಾಡುವ ಮೊದಲು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಸಲ್ಲಿಸಲಾಯಿತು. ಈ ಬಗ್ಗೆ ಮಾತನಾಡಿದ ವಸಿಷ್ಠ ಅಪ್ಪು ಸರ್ ಜನರ ಪ್ರೀತಿ, ಚಪ್ಪಾಳೆ ಗಳಿಸಿದ್ರು, ಕಾಲವಾದ ಬಳಿಕ ಭಕ್ತಿನೂ ಸಂಪಾದನೆ ಮಾಡಿದ್ರು. ಯಾವುದೇ ಪೂಜೆಯಲ್ಲಿ ಮೊದಲು ಗಣೇಶನಿಗೆ ಪೂಜೆ ಮಾಡ್ತಾರೆ ಹಾಗೆ ಸಿನಿಮಾ ಕಾರ್ಯಕ್ರಮದಲ್ಲಿ ಮೊದಲು ಅಪ್ಪು ಸರ್ ನೆನಪಿಸಿಕೊಳ್ಳಬೇಕು, ಅಂತ ಪರಮಾತ್ಮ ಆಗಿದ್ದಾರೆ. ಅಪ್ಪು ಸರ್ ಇಲ್ಲ ಎನ್ನುವುದಕ್ಕಿಂತ ಅವರ ಪ್ರಸೆನ್ಸ್ ಈಗ ಹೆಚ್ಚು ಫೀಲ್ ಆಗ್ತಿದೆ. ರಕ್ತ ದಾನ ಮತ್ತು ಕಣ್ಣುದಾನ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದ್ರೆ ಅಪ್ಪು ಸರ್ ಹಾಗೆ ಕೊಟ್ಟು ಹೋಗಬೇಕು ಎನ್ನುವ ಪಾಠ ಕಲಿಸಿಕೊಟ್ಟ ಶ್ರೇಷ್ಠ ಜೀವ. ಎಲ್ಲಿದ್ರು ನಮ್ಮನ್ನು ನೋಡ್ತಾ ಇರುತ್ತಾರೆ. ಎಲ್ಲರ ಮನೆ ಮಗ ಅವರು. ಬದುಕಿದ್ರೆ ಅವರ ಹಾಗೆ ಬದುಕಬೇಕು ಎಂದು ವಸಿಷ್ಠ ಹೇಳಿದ್ದಾರೆ.