ತೆಲುಗಿನ ಕಣ್ಣಪ್ಪ ಚಿತ್ರದಲ್ಲಿ 'ಶಿವ' ಯಾರು, ಗುಟ್ಟು ಇನ್ನೂ ರಟ್ಟಾಗಿಲ್ಲ ಯಾಕೆ?

ತೆಲುಗಿನ ಕಣ್ಣಪ್ಪ ಚಿತ್ರದಲ್ಲಿ 'ಶಿವ' ಯಾರು, ಗುಟ್ಟು ಇನ್ನೂ ರಟ್ಟಾಗಿಲ್ಲ ಯಾಕೆ?

Published : Jan 19, 2025, 12:35 PM IST

ಬೇಡರ ಕಣ್ಣಪ್ಪ.. ಶಿವ ಮೆಚ್ಚಿದ ಕಣ್ಣಪ್ಪ. ಇದು ಸ್ಯಾಂಡಲ್​ವುಡ್​​ ಸಿನಿ ರಸಿಕರು ಇಂದಿಗೂ ಭಕ್ತಿ ಭಾವದಿಂದ ಕಣ್ತುಂಬಿಕೊಳ್ಳೋ ಸಿನಿಮಾ. ಇದೀಗ ಈ ಕಣ್ಣಪ್ಪನ ಕತೆ ಟಾಲಿವುಡ್​​ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಸಿದ್ಧವಾಗಿದೆ. ಪ್ರಭಾಸ್​​ ಹಾಗು ವಿಷ್ಣುಮಂಚು ..

ಬೇಡರ ಕಣ್ಣಪ್ಪ.. ಇದು ಡಾಕ್ಟರ್ ರಾಜ್ ಕುಮಾರ್​ ನಟಿಸಿದ್ದ ಮೊದಲ ಮೈತಲಾಜಿಕಲ್ ಸಿನಿಮಾ. ಅಪ್ಪನಂತೆ ಮಗ ಅನ್ನೋ ಹಾಗೆ ಅಣ್ಣಾವ್ರ ಬೇಡರ ಕಣ್ಣಪ್ಪ ಸಿನಿಮಾವನ್ನ ಸ್ವಲ್ಪ ಚೇಂಜ್ ಮಾಡಿ ಶಿವ ಮಚ್ಚಿದ ಕಣ್ಣಪ್ಪ ಸಿನಿಮಾ ಮಾಡಿದ್ರು ಅಣ್ಣಾವ್ರ ಮಗ ಡಾ. ಶಿವರಾಜ್ ಕುಮಾರ್.. ಇದೀಗ ಟಾಲಿವುಡ್​​ನಲ್ಲಿ ಕಣ್ಣಪ್ಪ ಸಿನಿಮಾ ಬರುತ್ತಿದೆ. ಕಣ್ಣಪ್ಪನ ಟೀಸರ್​ ಕೂಡ ರಿಲೀಸ್ ಆಗಿದೆ. 

ಬೇಡರ ಕಣ್ಣಪ್ಪ.. ಶಿವ ಮೆಚ್ಚಿದ ಕಣ್ಣಪ್ಪ. ಇದು ಸ್ಯಾಂಡಲ್​ವುಡ್​​ ಸಿನಿ ರಸಿಕರು ಇಂದಿಗೂ ಭಕ್ತಿ ಭಾವದಿಂದ ಕಣ್ತುಂಬಿಕೊಳ್ಳೋ ಸಿನಿಮಾ. ಇದೀಗ ಈ ಕಣ್ಣಪ್ಪನ ಕತೆ ಟಾಲಿವುಡ್​​ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಸಿದ್ಧವಾಗಿದೆ. ಪ್ರಭಾಸ್​​ ಹಾಗು ವಿಷ್ಣುಮಂಚು ನಟಿಸಿರೋ ಕಣ್ಣಪ್ಪ ಸಿನಿಮಾದ ಟೀಸರ್​​ ರಿಲೀಸ್​ ಆಗಿದೆ. 

ಟಾಲಿವುಡ್​​ನಲ್ಲಿ ಒನ್ಸ್​ ಅಗೈನ್ ಕಣ್ಣಪ್ಪನ ಸೌಂಡು ಶುರುವಾಗಿದೆ. ನಟ ವಿಷ್ಣುಮಂಚು ಕಣ್ಣಪ್ಪನನ್ನ ಈಗಿನ ಟೆಕ್ನಾಲಜಿ ಬಳಸಿ ಪ್ಯಾನ್ ಇಂಡಿಯಾ ಲೆವೆಲ್​​ನಲ್ಲಿ ಮಾಡ್ತಿದ್ದಾರೆ. ಈ ಕಣ್ಣಪ್ಪ ಸಿನಿಮಾದಲ್ಲಿ ಅಭಿನಯಿಸೋದಕ್ಕೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಕೂಡ ಅಸ್ತು ಎಂದಿದ್ದಾರಂತೆ. ಆದ್ರೆ ಶಾಕಿಂಗ್ ಅಂದ್ರೆ ಕಣ್ಣಪ್ಪನಲ್ಲಿ ಶಿವಣ್ಣ ಇಲ್ಲವೇ ಇಲ್ಲ. ಬೆಂಗಳೂರಿನಲ್ಲಿ ಕಣ್ಣಪ್ಪ ಟೀಸರ್​ ರಿಲೀಸ್​ಗೆ ಬಂದಿದ್ದ ಚಿತ್ರತಂಡ ಕಣ್ಣಪ್ಪನಲ್ಲಿ ಶಿವಣ್ಣ ನಟಿಸಿಲ್ಲ ಎಂದಿದ್ದಾರೆ.

ಕನ್ನಡದ ಶಿವ ಮೆಚ್ಚಿದ ಕಣ್ಣಪ್ಪ ಸಿನಿಮಾದಲ್ಲಿ ಅಣ್ಣಾವ್ರು ಶಿವನ ಪಾತ್ರ ಮಾಡಿದ್ರು. ಶಿವಣ್ಣ ಕಣ್ಣಪ್ಪನಾಗಿದ್ರು. ಈಗ ತೆಲುಗುನಲ್ಲಿ ನಟ ವಿಷ್ಣು ಮಂಚು ಕಣ್ಣಪ್ಪ ಆಗಿದ್ದಾರೆ. ಇಲ್ಲಿ ಶಿವನ ರೋಲ್​ಅನ್ನ ಹೆಸರಿಗೆ ತಕ್ಕಂತೆ ಶಿವರಾಜ್ ಕುಮಾರ್ ಮಾಡ್ತಾರೆ ಅಂತ ಸುದ್ದಿ ಹರಿದಾಡಿತ್ತು. ಆದ್ರೆ ಆ ಪಾತ್ರವನ್ನ ಸ್ಟಾರ್ ನಟರೊಬ್ರು ನಿರ್ವಹಿಸಿದ್ದಾರಂತೆ. ಆದ್ರೆ ಅದು ಯಾರು ಅನ್ನೋ ಗುಟ್ಟು ಬಿಟ್ಟಿಲ್ಲ. 

ಕಣ್ಣಪ್ಪ ಸಿನಿಮಾದಲ್ಲಿ ವಿಷ್ಣು ಮಂಚು ಜೊತೆ ಅಕ್ಷಯ್ ಕುಮಾರ್, ಮೋಹನ್ ಲಾಲ್, ಶರತ್ ಕುಮಾರ್, ಪ್ರಭಾಸ್, ಮೋಹನ್ ಬಾಬು ಹೀಗೆ ದೊಡ್ಡ ತಾರಾ ಬಳಗವೇ ಇದೆ. ಇಂಡಿಯನ್ ಮೈಕಲ್​ ಜಾಕ್ಸನ್ ಪ್ರಭುದೇವ ಮೂರು ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಅಷ್ಟೆ ಅಲ್ಲ ಪ್ರಭುದೇವ ಕೂಡ ಕಣ್ಣಪ್ಪ ಸಿನಿಮಾದಲ್ಲಿ ನಟಿಸಿದ್ದಾರಂತೆ.. 

ಚಿತ್ರಕ್ಕೆ ಹಾಲಿವುಡ್ನ ಕ್ಯಾಮರಾಮನ್ ಶೆಲ್ಡನ್ ಚೌ ಕೆಲಸ ಮಾಡಿದ್ದಾರೆ. ವಿಶೇಷ ಅಂದ್ರೆ ಇಡೀ ಸಿನಿಮಾವನ್ನ ನ್ಯೂಜಿಲ್ಯಾಂಡ್​​ನಲ್ಲೇ ಚಿತ್ರೀಕರಣ ಮಾಡಿದ್ದಾರಂತೆ.  ಏಪ್ರಿಲ್-24 ರಂದು ಬೇಡರ ಕಣ್ಣಪ್ಪ ರಾಜ್ಕುಮಾರ್ ಜನ್ಮ ದಿನ ಇದೆ. ಆದ್ರೆ ಕಣ್ಣಪ್ಪ ಸಿನಿಮಾ ಏಪ್ರಿಲ್-25ಕ್ಕೆ ರಿಲೀಸ್ ಆಗುತ್ತಿದೆ. ಕಣ್ಣಪ್ಪ ಸಿನಿಮಾವನ್ನ ಕರ್ನಾಟದಲ್ಲಿ ರಾಕ್​ಲೈನ್ ವೆಂಕಟೇಶ್ ವಿತರಣೆ ಮಾಡುತ್ತಿದ್ದಾರೆ. 

ಹಾಗ್ ನೋಡಿದ್ರೆ ಕಣ್ಣಪ್ಪ ಕಥೆ ತೆಲುಗು ಮಂದಿಗೆ ಹೊಸದೇನಲ್ಲ. 1976ರಲ್ಲಿ ನಟ ಪ್ರಭಾಸ್ ಚಿಕ್ಕಪ್ಪ ಕೃಷ್ಣಂ ರಾಜು ಭಕ್ತ ಕಣ್ಣಪ್ಪ ಅಂತ ಸಿನಿಮಾ ಮಾಡಿದ್ರು. ಕಣ್ಣಪ್ಪ ಸಿನಿಮಾದಲ್ಲಿ ಪ್ರಭಾಸ್​ಗೂ ನಟಿಸಬೇಕು ಅನ್ನೋ ಆಸೆ ಇತ್ತು. ಇದನ್ನ ಸ್ವತಃ ಪ್ರಭಾಸ್ ಹೇಳಿಕೊಂಡಿದ್ರು. ಹೀಗಾಗಿ ಕಣ್ಣಪ್ಪನ ಕಥೆ ಕೈಗೆತ್ತಿಕೊಂಡಿರೋ ವಿಷ್ಣುಮಂಚು ಪ್ರಭಾಸ್​ಗೂ ರೋಲ್ ಇಟ್ಟಿದ್ದಾರೆ. ಪ್ರಭಾಸ್ ಕೂಡ ನಟಿಸಿದ್ದಾರೆ. 
ಪ್ರಭಾಸ್ ಯಾವ್ ಪಾತ್ರ ಮಾಡ್ತಾರೆ ಕಾದು ನೋಡ್ಬೇಕು.
 

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್