13 ವರ್ಷಗಳ ಬಳಿಕ ಹೊಸ ಆವಿಷ್ಕಾರದೊಂದಿಗೆ ‘ಅವತಾರ್: ದಿ ವೇ ಆಫ್ ವಾಟರ್’ (Avatar:The Way of Water) ಬರ್ತಿದೆ. ಅವತಾರ್ನಲ್ಲಿ ಕಾಡು ಬೆಂಕಿ ಮಧ್ಯೆ ಸೆಣಸಿದ್ದ ಪಾತ್ರಗಳು ಈ ಭಾರಿ ನೀರಿನಲ್ಲಿ ರೋಚಕ ಅನುಭವ ನೀಡಲಿವೆ.
13 ವರ್ಷಗಳ ಬಳಿಕ ಹೊಸ ಆವಿಷ್ಕಾರದೊಂದಿಗೆ ‘ಅವತಾರ್: ದಿ ವೇ ಆಫ್ ವಾಟರ್’ (Avatar:The Way of Water) ಬರ್ತಿದೆ. ಅವತಾರ್ನಲ್ಲಿ ಕಾಡು ಬೆಂಕಿ ಮಧ್ಯೆ ಸೆಣಸಿದ್ದ ಪಾತ್ರಗಳು ಈ ಭಾರಿ ನೀರಿನಲ್ಲಿ ರೋಚಕ ಅನುಭವ ನೀಡಲಿವೆ. ಈಗ ಬಂದಿರೋ ಟೀಸರ್ ಟ್ರೈಲರ್ನಲ್ಲಿ ಹಲವು ವಿಸ್ಮಯಗಳು ಕಣ್ಣಿಗೆ ಕಾಣುತ್ತಿವೆ.. ಅವತಾರ್-2ನ (Avatar-2) ದೃಶ್ಯ ವೈಭವ ನೋಡುತ್ತಿದ್ರೆ ಮೈ ಮನವೆಲ್ಲಾ ಥ್ರಿಲ್ ಆಗುತ್ತೆ.
ಅವತಾರ್ ಚಾಪ್ಟರ್ ಒನ್ ಬಂದಾಗ ಭಾರತದಲ್ಲಿ ಸೆನ್ಸೇಷನ್ ಸೃಷ್ಟಿಸಿತ್ತು. ಇಂಗ್ಲೀಷ್ ಭಾಷೆಯಲ್ಲಿ ಬಂದ ಈ ಸಿನಿಮಾ ಮುಗಿ ಬಿದ್ದು ನೋಡಿದ್ರು, ಈಗ ‘ಅವತಾರ್: ದಿ ವೇ ಆಫ್ ವಾಟರ್’ ವಿಶ್ವದಾದ್ಯಂತ 160 ಭಾಷೆಗಳಲ್ಲಿ ತೆರೆ ಕಾಣುತ್ತಿದೆ. ಇಂಡಿಯಾದಲ್ಲಿ ಐದು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಕನ್ನಡದಲ್ಲೂ ಸಿನಿಮಾ ಬಿಡುಗಡೆ ಆಗಿತ್ತಿರೋದು ಮತ್ತೊಂದು ವಿಶೇಷ.
ಅವತಾರ್ ಚಾಪ್ಟರ್-1 ಸಿನಿಮಾ ನಿರ್ಮಾಣಕ್ಕೆ 1196 ಕೋಟಿ ಖರ್ಚಾಗಿತ್ತು. 106 ದೇಶಗಳಲ್ಲಿ 14,604 ಸ್ಕ್ರೀನ್ಗಳಲ್ಲಿ ಅವತಾರ್ ತೆರೆ ಕಂಡಿತ್ತು. ಈ ಸಿನಿಮಾದ ಒಟ್ಟು ವರ್ಲ್ಡ್ ವೈಡ್ ಕಲೆಕ್ಷನ್ 18,957 ಕೋಟಿ ಗಳಿಸಿತ್ತು. ಭಾರತದಲ್ಲಿ ಈ ಸಿನಿಮಾ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಈಗ ಇಡೀ ಪ್ರಪಂಚ ಅವತಾರ್ ಚಾಪ್ಟರ್-2 ಮೇಲೆ ಕಣ್ಣಿಟ್ಟಿದ್ದು, ಹಳೆ ದಾಖಲೆಗಳನ್ನೆಲ್ಲಾ ಅವತಾರ್-2 ಬ್ರೇಕ್ ಮಾಡೋ ಮುನ್ಸೂಚನೆ ಸಿಕ್ಕಿದೆ.
ಅವತಾರ್ ಭಾರತ ಮೂಲದ ಜಾನಪದ ಕಥೆಯೊಂದರ ಎಳೆಯಿಂದ ಸೃಷ್ಟಿಯಾದ ಸಿನಿಮಾ. ನಿರ್ದೇಶಕ ಜೇಮ್ಸ್ ಕ್ಯಾಮರೂನ್ ತನ್ನದೆ ಕಲರ್ಫುಲ್ ಕಲ್ಪನೆಯೊಂದಿಗೆ ಹೊಸ ರೂಪ ಕೊಟ್ಟು ವಿಸ್ಮಯ ಪ್ರಪಂಚ ಸೃಷ್ಟಿಸಿ ಅವತಾರ್ಅನ್ನ ಸಿದ್ಧಪಡಿಸಿದ್ರು. ಈಗ ಅದರ ಸೀಕ್ವೇಲ್ ಬರ್ತಿದೆ. ಭೂಮಿಯಂತೆ ಕಾಣುವ ಸುಂದರವಾದ ಪ್ಯಾಂಡೋರಾ ಜಗತ್ತಿನಲ್ಲಿ ವಾಸಿಸುವ ನಾವಿ ಜೀವಿಗಳ ಸುತ್ತ ಈ ಸಿನಿಮಾದ ಕಥೆ ಹೆಣೆಯಲಾಗಿದೆ. ಅವತಾರ್‌ನಲ್ಲಿದ್ದ ಸ್ಯಾಮ್ ವರ್ಥಿಂಗ್ಟನ್, ಜೋಯ್ ಸಲ್ಡಾನಾ, ಸ್ಟೀಫನ್ ಲ್ಯಾಂಗ್, ಜಿಯೋವಾನಿ ರಿಬಿಸಿ, ಜೋಯಲ್ ಡೇವಿಡ್ ಮೂರ್, ದಿಲೀಪ್ ರಾವ್ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ರು. ಈಗ ಅವತಾರ್-2ನಲ್ಲೀ ಇವರೇ ನಟಿಸಿದ್ದಾರೆ.