Padmashree Bhat | Updated: Mar 28, 2025, 2:25 PM IST
ದಳಪತಿ ವಿಜಯ್ ನಟನೆಯ ಬಿಗ್ ಬಜೆಟ್ ಪಾಲಿಟಿಕಲ್ ಡ್ರಾಮಾ ಜನನಾಯಗನ್ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಜನವರಿ 9 , 2029ಕ್ಕೆ ಸಿನಿಮಾ ತೆರೆಗೆ ಬರಲಿದ್ದು, ತಮಿಳುನಾಡಿನಲ್ಲಿ ಪೊಂಗಲ್ ಹಬ್ಬಕ್ಕೆ ಥಿಯೇಟರ್ ಅಂಗಳದಲ್ಲೂ ಹಬ್ಬದ ವಾತಾವರಣ ನಿರ್ಮಿಸಲಿದೆ. ಅಸಲಿಗೆ ಇದು ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ. ಕೆವಿಎನ್ ಪ್ರೊಡಕ್ಷನ್ಸ್ ಈ ಸಿನಿಮಾವನ್ನ ನಿರ್ಮಿಸ್ತಾ ಇದ್ದು, ಇದರ ಬಜೆಟ್ ಭರ್ತಿ 300 ಕೋಟಿ. ಎಚ್.ವಿನೋದ್ ಈ ಸಿನಿಮಾ ನಿರ್ದೇಶನ ಮಾಡ್ತಾ ಇದ್ದು, ಹೆಸರಿಗೆ ತಕ್ಕಂತೆ ಇದು ಪಾಲಿಟಿಕಲ್ ಡ್ರಾಮಾ ಅನ್ನೋದ್ರಲ್ಲಿ ಡೌಟೇ ಇಲ್ಲ. ಹೌದು ಈಗಾಗ್ಲೇ ಟಿವಿಕೆ ಅನ್ನೋ ಪಾರ್ಟಿಯನ್ನ ಕಟ್ಟಿ 2026ರ ತಮಿಳುನಾಡು ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿಕ್ಕೆ ವಿಜಯ್ ಸಜ್ಜಾಗಿದ್ದಾರೆ. ವಿಜಯ್ ಖದರ್ ನೋಡಿದರವರು ವಿಜಯ್ ಮುಂದಿನ ತಮಿಳುನಾಡು ಸಿಎಂ ಆದ್ರೂ ಅಚ್ಚರಿಯಿಲ್ಲ ಅಂತಿದ್ದಾರೆ.