ಹಾಲಿವುಡ್​ಗೆ ಸೆಡ್ಡು, ಇಂಡಿಯಾದ ಬಿಗ್ಗೆಸ್ಟ್ ಬಜೆಟ್ ಸಿನಿಮಾ: ಪ್ರಿನ್ಸ್​-ಮೌಳಿ ಮಹಾ ಪ್ರಾಜೆಕ್ಟ್​ಗೆ ಸಾವಿರ ಕೋಟಿ ಬಂಡವಾಳ!

Jan 4, 2025, 12:10 PM IST

ಈಗ ಭಾರತೀಯ ಸಿನಿ ಜಗತ್ತಲ್ಲಿ 100 - 200 ಕೋಟಿ ಸಿನಿಮಾ ಮಾಡೋ ಕಾಲ ಮುಗೀತು. ಇನ್ನೇನಿದ್ರು 1000 ಕೋಟಿ ಇಟ್ಕೊಂಡ್ ಬಂದ್ರೆ ಮಾತ್ರ ಸಿನಿಮಾ ಆಗುತ್ತೆ. ಹೀಗಂತ ಎಸ್​​​,ಎಸ್​ ರಾಜಮೌಳಿ ಹಾಗು ಪ್ರಿನ್ಸ್ ಮಹೇಶ್​ ಬಾಬು ಕಹಳೆ ಊದಿದ್ದಾರೆ. ಇದುವರೆಗೂ ಇಂಡಿಯನ್ ಸಿನಿ ಜಗತ್ತಲ್ಲಿ ಯಾರು ಮಾಡಿರದ 1000 ಕೋಟಿ ಸಾಧನೆಗೆ ಕೈ ಹಾಕಿದ್ದಾರೆ. ಹಾಗಾದ್ರೆ ಆ ಸಾವಿರ ಕೋಟಿ ಜಗತ್ತು ಹೇಗಿರುತ್ತೆ..? ಎಸ್​, ಎಸ್​ ರಾಜಮೌಳಿ ಗುರಿ ಇಟ್ರೆ ಮುಗೀತು. ಆ ಗುರಿ ಮಿಸ್ ಆಗೋಕೆ ಚಾನ್ಸೆ ಇಲ್ಲ. ಸ್ಟಾರ್ ಡೈರೆಕ್ಟರ್ ರಾಜಮೌಳಿ ಹಾಗು ಟಾಲಿವುಡ್​ ಪ್ರಿನ್ಸ್​​ ಮಹೇಶ್​ ಬಾಬು ಕಾಂಬಿನೇಷನ್​ನಲ್ಲಿ ಸಿನಿಮಾ ಬರುತ್ತೆ ಅಂತ ಮೂರು ವರ್ಷದ ಹಿಂದೆಯೇ ಅನೌನ್ಸ್​​ ಆಗಿತ್ತು. ಆದ್ರೆ ಆ ಸಿನಿಮಾ ಕಥೆ ಏನಾಯ್ತು ಅನ್ನೋ ಬಗ್ಗೆ ಸುಳಿವೇ ಇರಲಿಲ್ಲ. 

ಈಗ ಅಟೆಕ್ಷನ್ ಪ್ಲೀಸ್.. ಹೊಸ ವರ್ಷಕ್ಕೆ ಮೌಳಿ ಮತ್ತು ಮಹೇಶ್​ ಬಾಬು ಬಿಗೆಸ್ಟ್​ ನ್ಯೂಸ್ ಕೊಟ್ಟಿದ್ದಾರೆ. ರಾಜಮೌಳಿ-ಮಹೇಶ್​ ಬಾಬು ಕಾಂಬಿನೇಷನ್​​ನ ಸಿನಿಮಾಗೆ ಓಂಕಾರ ಹಾಕಿದ್ದಾರೆ. ಹೈದರಾಬಾದ್​ನಲ್ಲಿ ಸಿನಿಮಾ ಮಹೂರ್ಥ ಆಗಿದೆ. ಆರ್​ಆರ್​ಆರ್ ಸಿನಿಮಾ ಬಂದ ಮೇಲೆ ಕಂಪ್ಲೀಟ್​ ಆಗಿ ಮಹೇಶ್ ಬಾಬು ಜೊತೆಗಿನ ಸಿನಿಮಾ ಮೇಲೆ ಗಮನ ಇಟ್ಟಿದ್ದ ಮೌಳಿ ಈಗ ಮಹೂರ್ಥ ಮಾಡಿ ಶೂಟಿಂಗ್​ ಫ್ಲೋರ್​ಗೆ ಎಂಟ್ರಿ ಕೊಟ್ಟಿದ್ದಾರೆ. ಶೂಟಿಂಗ್ ಶುರುವಿನಲ್ಲೇ ಮೌಳಿ ಆ್ಯಂಡ್ ಟೀಂ ಹಾಲಿವುಡ್​ಗೆ ಸೆಡ್ಡು ಹೊಡೆದಿದ್ದಾರೆ. ನಮ್ಮದು ಜೆಸ್ಟ್​ 100 - 200 ಕೋಟಿ ಬಜೆಟ್ ಸಿನಿಮಾ ಅಲ್ಲ.. ನಮ್ಮದು ಸಾವಿರ ಕೋಟಿಯ ಮೂವಿ ಅಂತ ಅಫೀಷಿಯಲ್ ಆಗಿ ಅನೌನ್ಸ್ ಮಾಡಿದ್ದಾರೆ. 

ಇಂಟ್ರೆಸ್ಟಿಂಗ್ ಅಂದ್ರೆ ಇದುವರೆಗೂ ಇಂಡಿಯನ್ ಸಿನಿ ಹಿಸ್ಟರಿಯಲ್ಲೇ ಸಾವಿರ ಕೋಟಿ ಬಂಡವಾಳದ ಸಿನಿಮಾ ಮಾಡೋಕ್ಕೆ ಯಾವ ಡೈರೆಕ್ಟರ್​, ಹೀರೋ ಧೈರ್ಯ ಮಾಡಿಲ್ಲ. ರಾಜಮೌಳಿ ಬಾಹುಬಲಿಯಲ್ಲಿ ಐತಿಹಾಸಿಕ ಕಥೆ ಹೆಣೆದಿದ್ದಾಯ್ತು. ಆರ್​ಆರ್​ಆರ್​​ನಲ್ಲಿ ಇಬ್ಬರು ಧೀರದ ಸ್ಟೋರಿ ಕಟ್ಟಿದ್ದಾಯ್ತು. ಈಗ ಮೌಳಿ ಸೃಷ್ಟಿಸೋಕೆ ಹೊರಟಿರೋ ಪ್ರಪಂಚ ಅರಣ್ಯದ ಸುತ್ತ ನಡೆಯೋ ಕತೆಯನ್ನ. ಪ್ರಿನ್ಸ್ ಮಹೇಶ್ ಬಾಹು ನಟನೆಯ 29ನೇ ಸಿನಿಮಾದಲ್ಲಿ ಜಂಗಲ್​ ಅಡ್ವೆಂಚರ್​ ಸ್ಟೋರಿ ಇರಲಿದೆ.. ಆಫ್ರಿಕಾದ ದಟ್ಟಾರಣ್ಯ ಸೇರಿದಂತೆ ವಿಶ್ವದ ಹಲವೆಡೆ ಶೂಟಿಂಗ್ ನಡೆಯಲಿದೆ. ಹೀಗಾಗೆ ಆ ಸಿನಿಮಾಗೆ ಬರೋಬ್ಬರಿ 1000 ಕೋಟಿ ಬಂಡವಾಳ ಹೂಡುತ್ತಿದ್ದಾರೆ.