ದೇವ ಟ್ರೈಲರ್ ರಾಕಿಂಗ್, ಬಾಕ್ಸಾಫೀಸ್​​ನಲ್ಲಿ ಮುಗ್ಗರಿಸಿತಾ ಕಂಗನಾ 'ಎಮರ್ಜೆನ್ಸಿ'..?

ದೇವ ಟ್ರೈಲರ್ ರಾಕಿಂಗ್, ಬಾಕ್ಸಾಫೀಸ್​​ನಲ್ಲಿ ಮುಗ್ಗರಿಸಿತಾ ಕಂಗನಾ 'ಎಮರ್ಜೆನ್ಸಿ'..?

Published : Jan 20, 2025, 07:20 PM IST

ಶಾಹೀದ್ ಕಪೂರ್ ನಟನೆಯ ಆಕ್ಷನ್ ಥ್ರಿಲ್ಲರ್ ಮೂವಿ ಟ್ರೈಲರ್ ಸಖತ್ ಸದ್ದು ಮಾಡ್ತಾ ಇದೆ. ಕಂಗನಾ ರಣಾವತ್ ನಟನೆ ನಿರ್ದೇಶನದ ಎಮರ್ಜೆನ್ಸಿ ಸಿನಿಮಾ  ಬಗ್ಗೆ ದೊಡ್ಡ ನಿರೀಕ್ಷೆ ಸೃಷ್ಟಿಯಾಗಿತ್ತು. ಕಳೆದ ವಾರ ತೆರೆಗೆ ಬಂದಿರೋ ಸಿನಿಮಾ ನಿರೀಕ್ಷೆಯಂತೆ ಬಾಕ್ಸ್ ಆಫೀಸ್​ನಲ್ಲಿ ಕಲೆಕ್ಷನ್ ಮಾಡುತ್ತಿಲ್ಲ.

ಶಾಹೀದ್ ಕಪೂರ್ ನಟನೆಯ ಆಕ್ಷನ್ ಥ್ರಿಲ್ಲರ್ ಮೂವಿ  ದೇವ ಇದೇ ತಿಂಗಳ ಅಂತ್ಯಕ್ಕೆ ತೆರೆಗೆ ಬರಲಿದೆ. ಸದ್ಯ ರಿಲೀಸ್ ಹೊಸ್ತಿಲಲ್ಲಿ ಬಂದಿರೋ ಸಿನಿಮಾದ ಟ್ರೈಲರ್ ಸಖತ್ ಸದ್ದು ಮಾಡ್ತಾ ಇದೆ. ಜಸ್ಟ್ ಎರಡೇ ದಿನಗಳಲ್ಲಿ 30 ಮಿಲಿಯನ್ ವಿವ್ಸ್ ಪಡೆದಿರೋ ದೇವ ಟ್ರೈಲರ್ ಹೊಸ ದಾಖಲೆ ಬರೆದಿದೆ. ಪೂಜಾ ಹೆಗ್ಡೆ ಈ ಸಿನಿಮಾದಲ್ಲಿ ಶಾಹೀದ್ ಜೋಡಿಯಾಗಿ ಮಿಂಚಿದ್ದು, ಶಾಹೀದ್ ಇಲ್ಲಿ ಸೂಪರ್ ಕಾಪ್ ರೋಲ್​ನಲ್ಲಿ ಮಿಂಚಿದ್ದಾರೆ. ಶಾಹೀದ್ ಮಾಸ್ ಅವತಾರ ನೋಡಿದವರು ಇದು ಕಬೀರ್ ಸಿಂಗ್​ನ ಮೀರಿಸುತ್ತೆ ಅಂತಿದ್ದಾರೆ.
*
ನಟಿ ಕಂ ಸಂಸದೆ ಕಂಗನಾ ರಣಾವತ್ ನಟನೆ ನಿರ್ದೇಶನದ ಎಮರ್ಜೆನ್ಸಿ ಸಿನಿಮಾ ಕಳೆದ ಶುಕ್ರವಾರ ತೆರೆಗೆ ಬಂದಿದೆ. ಇಂದಿರಾ ಗಾಂಧಿ ಕಾಲದ ಎಮರ್ಜೆನ್ಸಿ ಕುರಿತ ಕಥೆಯಾದ್ದರಿಂದ ಈ ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆ ಸೃಷ್ಟಿಯಾಗಿತ್ತು. ಸೆನ್ಸಾರ್​ನಲ್ಲೂ ಸಿಕ್ಕಾಪಟ್ಟೆ ಸಮಸ್ಯೆ ಎದುರಿಸಿದ್ದ ಸಿನಿಮಾ ಕೊನೆಗೂ ಕಳೆದ ವಾರ ತೆರೆಗೆ ಬಂದಿದೆ. ಆದ್ರೆ ನಿರೀಕ್ಷೆಯಂತೆ ಸಿನಿಮಾಗೆ ಬಾಕ್ಸ್ ಆಫೀಸ್​ನಲ್ಲಿ ಸಕ್ಸಸ್ ಮಾತ್ರ ಸಿಕ್ಕಿಲ್ಲ. 60 ಕೋಟಿ ಬಜೆಟ್​​ನ ಎಮರ್ಜೆನ್ಸಿ ಸಿನಿಮಾ ಮೊದಲೆರಡು ದಿನಗಳಲ್ಲಿ ಜಸ್ಟ್ 6 ಕೋಟಿ ಗಳಿಕೆ ಮಾಡಿದ್ದು, ಬಾಕ್ಸಾಫೀಸ್ ಬಾಂಬ್ ಎನ್ನಿಸಿಕೊಂಡಿದೆ.  
*
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕರುನಾಡಿನಲ್ಲಿ ದಂತ ಕಥೆಯಾಗಿದ್ದಾರೆ. ಅಪ್ಪು ಆದರ್ಶಗಳನ್ನ ನೆನಪಿಸುವ ಅನೇಕ ಚಿತ್ರಗಳು ಈಗಾಗಲೇ ನಿರ್ಮಾಣವಾಗಿವೆ. ಇದೀಗ ಮತ್ತೊಂದು ತಂಡ  'ಪುನೀತ್ ನಿವಾಸ' ಎಂಬ ಹೆಸರಿಟ್ಟುಕೊಂಡು ಅಂಥದ್ದೇ ಚಿತ್ರವೊಂದನ್ನ ಪ್ರಾರಂಭಿಸಿದೆ. ಅಶ್ವಿನಿ ಪುನೀತ್ ರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಅವರ‌ ಶುಭ ಹಾರೈಕೆಯೂ ಈ ಚಿತ್ರಕ್ಕಿದೆ. ಪುಟ್ಟಣ್ಣ ಕಣಗಾಲ್ ಜತೆ ಸಹಾಯಕರಾಗಿ ಕೆಲಸ ಮಾಡಿದ ನಾಗೇಂದ್ರ ಪ್ರಸಾದ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳ್ತಿದ್ದಾರೆ. ಇತ್ತೀಚೆಗೆ ತ್ಯಾಗರಾಜ ನಗರದ ಗಂಗಮ್ಮ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ. ಮೋಹನ್ ಎಸ್. ಈ ಚಿತ್ರವನ್ನು ನಿರ್ಮಿಸುತ್ತಿದ್ದು ಮಾಸ್ಡರ್ ವಿಠಲ್,  ಅಭಿಜಿತ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸ್ತಾ ಇದ್ದಾರೆ.

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
Read more