Dec 25, 2024, 1:18 PM IST
ಸೈಫ್ ಅಲಿ ಖಾನ್ ಪುತ್ರಿ , ಬಾಲಿವುಡ್ ಬೆಡಗಿ ಸಾರಾ ಅಲಿ ಖಾನ್ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರ್ತಾಳೆ. ಅದ್ರಲ್ಲೂ ಫಿಟ್‌ನೆಸ್ ಫ್ರೀಕ್ ಆಗಿರೋ ಸಾರಾ ತನ್ನ ಜಿಮ್, ವರ್ಕೌಟ್ ವಿಡಿಯೋಸ್ ಆಗಾಗ ಶೇರ್ ಮಾಡ್ತಾನೇ ಇರ್ತಾಳೆ.
ಒಂದೊಮ್ಮೆ ಸಿಕ್ಕಾಪಟ್ಟೆ ದಡೂತಿಯಾಗಿದ್ದ ಸಾರಾ ಜಿಮ್‌ನಲ್ಲಿ ಬೆವರು ಹರಿಸಿನೇ ಇಷ್ಟು ಸಪೂರವಾಗಿರೋದು. ಈ ಶ್ವೇತ ವರ್ಣದ ಸಪೂರ ಸುಂದರಿ ಜಿಮ್‌ನಲ್ಲಿ ತನ್ನ ದೇಹವನ್ನ ದಂಡಿಸಿ ವರ್ಕೌಟ್ ಮಾಡ್ತಿದ್ರೆ, ಈ ವಿಡಿಯೋಸ್ ನೋಡುವ ಹುಡುಗರ ಹೃದಯ ಘಾಸಿಯಾಗೋದು ಫಿಕ್ಸ್.
ಹಲವು ಬಾರಿ ಫಿಟ್ ನೆಸ್ ಚಾಲೆಂಜ್ಗಳನ್ನ ಹಾಕಿ ವರ್ಕೌಟ್ ವಿಡಿಯೋಸ್ ಮಾಡಿರೋ ಸಾರಾ, ಸೋಷಿಯಲ್ ಮಿಡಿಯಾದಲ್ಲಿ ಕಿಚ್ಚು ಹಚ್ತಾ ಇರ್ತಾಳೆ. ಸಾರಾ ಸೌಂದರ್ಯ ಪೂರಾ ಸವೀಬೇಕು ಅಂದ್ರೆ ನೀವು ಈ ವಿಡಿಯೋಸ್ ಮತ್ತೆ ಮತ್ತೆ ನೋಡಬೇಕು.