Sep 14, 2022, 3:08 PM IST
ಕೇವಲ ಬಾಲಿವುಡ್ ಸಿನಿಮಾಗಳಿಗೆ ಸೀಮಿತವಾಗಿದ್ದು ಕೊಂಡು ಬ್ಯಾಕ್ ಟು ಬ್ಯಾಕ್ ಸೋಲನ್ನ ಅನುಭವಿಸಿದ್ದ ನಟ ಸಂಜಯ್ ದತ್‌ಗೆ ಈಗ ಭಾರಿ ಡಿಮ್ಯಾಂಡ್ ಕ್ರಿಯೆಟ್ ಆಗಿದೆ. ಅದಕ್ಕೆ ಕಾರಣ ಕೆಜಿಎಫ್ ಸಿನಿಮಾ. ಯೆಸ್. ಕೆಜಿಎಫ್‌ನಲ್ಲಿ ಅಧೀರನಾಗಿ ಮಿಂಚಿದ್ದ ಸಂಜಯ್ ದತ್‌ಗೆ ಭಾರಿ ಬೇಡಿಕೆ ಶುರುವಾಗಿದ್ದು ಅದರಲ್ಲೂ ಸೌತ್‌ನ ಸಿನಿಮಾಗಳಿಗೆ ಸಂಜಯ್ ಅವರೇ ವಿಲನ್ ಆಗಬೇಕು ಅಂತಿದ್ದಾರೆ ನಿರ್ದೇಶಕರು. ಸೌತ್‌ನಲ್ಲಿ ಸಂಜಯ್ ದತ್ ಹವಾ ಹೆಚ್ಚಾಗುತ್ತಿದ್ದಂತೆ ಸಂಜಯ್ ದತ್ ತಮ್ಮ ಸಂಭಾವನೆಯನ್ನ ಹೆಚ್ಚು ಮಾಡಿಕೊಂಡಿದ್ದಾರೆ. ಯೆಸ್ ಸಂಜಯ್ ದತ್ ಒಂದು ಸಿನಿಮಾಗೆ ಬರೋಬ್ಬರಿ 10 ಕೋಟಿ ಪಡೆಯುತ್ತಿದ್ದಾರಂತೆ. ಸದ್ಯ ಇಳಯದಳಪತಿ ವಿಜಯ್ ಅಭಿನಯದ 67 ನೇ ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ಸೆಟ್ಟೇರಲಿದೆ. ಈ ಚಿತ್ರವನ್ನ ಲೋಕೇಶ್ ಕನಗರಾಜ್ ನಿರ್ದೇಶನ ಮಾಡುತ್ತಿದ್ದು ಈ ಚಿತ್ರದಲ್ಲಿ ವಿಲನ್ ಆಗಿ ರಜನಿಕಾಂತ್ ಆಕ್ಟ್ ಮಾಡ್ತಾರೆ ಅನ್ನೋ ಸುದ್ದಿ ಇತ್ತು. ಆದ್ರೆ ಈಗ ಅದೇ ಪಾತ್ರದಲ್ಲಿ ಸಂಜಯ್ ದತ್ ಕಾಣಿಸಿಕೊಳ್ತಾರೆ ಅನ್ನೋದು ಕನ್ಫರ್ಮ್ ಆಗಿದೆ. ವಿಶೇಷ ಅಂದ್ರೆ ಕೋಟಿ ಕೋಟಿ ಸಂಭಾವನೆ ಕೊಟ್ಟು ಸಂಜಯ್ ದತ್ ಅವ್ರನ್ನ ಈ ಚಿತ್ರಕ್ಕೆ ವೆಲ್ಕಂ ಮಾಡಲಾಗುತ್ತಿದ್ಯಂತೆ. ಒಟ್ಟಾರೆ ಒಂದು ಸಿನಿಮಾದ ಸಕ್ಸಕ್ ಎಷ್ಟೆಲ್ಲಾ ಹಾಗೂ ಯಾವ ರೀತಿಯಲ್ಲಿ ಲಾಭ ಮಾಡಿಕೊಡುತ್ತೆ ಅನ್ನೋದಕ್ಕೆ ಇದೇ ಸಾಕ್ಷಿ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment