ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !

ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !

Published : Dec 03, 2025, 11:30 AM IST

ಸಮಂತಾ ಮದುವೆಯಾಗಿರೋದು ಕೊಯಮತ್ತೂರಿನಲ್ಲಿರೋ ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್​​ನಲ್ಲಿ. ಇಲ್ಲಿ ಶಾಸ್ತ್ರೋಕ್ತವಾಗಿ ಸಮಂತಾ - ರಾಜ್ ಮದುವೆ ನಡೆದಿದ್ದು, ಪತಿಯ ಕೈ ಹಿಡಿದು ನಡೀತಿರೋ ಫೋಟೋಗಳನ್ನ ಹಂಚಿಕೊಂಡಿದ್ದಾರೆ ಸಮಂತಾ. ಅಲ್ಲೇ ಯಾಕೆ ಮದುವೆ ಆಗಿದ್ದು? ಈ ಸ್ಟೋರಿ ನೋಡಿ..

ಸಮಂತಾ ಕಲ್ಯಾಣ: ಸದ್ದಿಲ್ಲದೇ ಸಪ್ತಪದಿ ತುಳಿದ ಸಮಂತಾ ರಾಜ್ ಜೋಡಿ
ಸದ್ಗುರು ಸನ್ನಿಧಿಯಲ್ಲಿ ನೆರವೇರಿದ ಸಮಂತಾ ಕಲ್ಯಾಣ
ಇಷ್ಟದೇವಿ ಎದುರು ಇಷ್ಟಪಟ್ಟವನ ಕೈ ಹಿಡಿದ ಸ್ಯಾಮ್
ಸ್ಯಾಮ್ ಬದುಕಲ್ಲಿ ಹೊಸ ಅಧ್ಯಾಯ.. ತಾರೆಯರ ಹಾರೈಕೆ
ರಾಜ್​ ನಿಡಿಮೋರು ಜೊತೆಗೆ ನಟಿ ಸಮಂತಾ ಮದುವೆ

ಅಂತೂ ಇಂತೂ ಟಾಲಿವುಡ್ ಶಾಕುಂತ್ಲೆ ಸಮಂತಾ ಕಲ್ಯಾಣ ನೆರವೇರಿದೆ. ಬಹಳಷ್ಟು ದಿನಗಳಿಂದ ಸಮಂತಾ ಮತ್ತು ನಿರ್ದೇಶಕ ರಾಜ್ ನಿಡಿಮೋರು ರಿಲೇಷನ್​ಶಿಪ್ ಬಗ್ಗೆ ಗಾಸಿಪ್ ಹರಿದಾಡ್ತಾ ಇತ್ತು. ಇದೀಗ ಈ ಜೋಡಿ ಸದ್ಗುರು ಸನ್ನಿಧಿಯಲ್ಲಿ ಹಸೆಮಣೆ ಏರಿದ್ದಾರೆ. ಸಿನಿಲೋಕದ ತುಂಬಾ ಸದ್ಯ ಸ್ಯಾಮ್ ಕಲ್ಯಾಣದ್ದೇ ಸುದ್ದಿ.

ಸದ್ದಿಲ್ಲದೇ ಸಪ್ತಪದಿ ತುಳಿದ ಸಮಂತಾ ರಾಜ್ ಜೋಡಿ
ಸದ್ಗುರು ಸನ್ನಿಧಿಯಲ್ಲಿ ನೆರವೇರಿದ ಸಮಂತಾ ಕಲ್ಯಾಣ
ಯೆಸ್ ಟಾಲಿವುಡ್ ಶಾಕುಂತ್ಲೆ, ಬಹುಭಾಷಾ ನಟಿ ಸಮಂತಾ ಕೊನೆಗೂ ಹಸೆಮಣೆ ಏರಿದ್ದಾರೆ. ಬಹಳಷ್ಟು ದಿನಗಳಿಂದ ಸಮಂತಾ ಮತ್ತು ನಿರ್ದೇಶಕ ರಾಜ್ ನಿಡಿಮೋರು ಸಂಬಂಧದ ಬಗ್ಗ ಗಾಸಿಪ್ ಹರಿದಾಡ್ತಾ ಇದ್ವು. ಇದೀಗ ಮುದವೆ ಮಾಡಿಕೊಂಡು ಈ ಗಾಸಿಪ್​ಗಳಿಗೆಲ್ಲಾ ಫುಲ್​ಸ್ಟಾಪ್ ಇಟ್ಟಿದೆ ಈ ಜೋಡಿ.

ಅಂದಹಾಗೆ ಸಮಂತಾ ಮದುವೆಯಾಗಿರೋದು ಕೊಯಮತ್ತೂರಿನಲ್ಲಿರೋ ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್​​ನಲ್ಲಿ. ಇಲ್ಲಿ ಶಾಸ್ತ್ರೋಕ್ತವಾಗಿ ಸಮಂತಾ - ರಾಜ್ ಮದುವೆ ನಡೆದಿದ್ದು, ಪತಿಯ ಕೈ ಹಿಡಿದು ನಡೀತಿರೋ ಫೋಟೋಗಳನ್ನ ಹಂಚಿಕೊಂಡಿದ್ದಾರೆ ಸಮಂತಾ.

ಇಷ್ಟದೇವಿ ಎದುರು ಇಷ್ಟಪಟ್ಟವನ ಕೈ ಹಿಡಿದ ಸ್ಯಾಮ್
ಸಮಂತಾ ಇಶಾ ಫೌಂಡೇಷನ್​ನಲ್ಲಿರೋ ಲಿಂಗ ಭೈರವಿ ದೇವಿಯ ಪರಮಭಕ್ತೆ. ತಮ್ಮ ಕಷ್ಟದ ದಿನಗಳಲ್ಲಿ ಈ ದೇವಿ ಆರಾಧನೆ ಮಾಡಿದ್ರು ಸಮಂತಾ. ಇದೀಗ ಇಷ್ಟದೇವಿ ಎದುರೇ ಇಷ್ಟಪಟ್ಟವನ ಕೈ ಹಿಡಿದ್ದಾರೆ ಸಮಂತಾ.

ಸ್ಯಾಮ್ ಬದುಕಲ್ಲಿ ಹೊಸ ಅಧ್ಯಾಯ.. ತಾರೆಯರ ಹಾರೈಕೆ
ಹೌದು ಸಮಂತಾ ಮೊದಲ ನಾಗಚೈತನ್ಯಯಿಂದ ಡಿವೋರ್ಸ್ ಪಡೆದ ಮೇಲೆ ಒಬ್ಬಂಟಿಯಾಗಿದ್ರು. ಕಳೆದ ವರ್ಷ ನಾಗಚೈತನ್ಯ ನಟಿ ಶೋಭಿತಾ ಜೊತೆಗೆ ಎರಡನೇ ವಿವಾಹ ಮಾಡಿಕೊಂಡಿದ್ರು. ಸೋ ಅಭಿಮಾನಿಗಳು, ಸ್ನೇಹಿತರು ಸ್ಯಾಮ್ ಕೂಡ ಲೈಫ್​ನಲ್ಲಿ ಮೂವ್ ಆನ್ ಆಗಬೇಕು. ಇನ್ನೊಂದು ಮದುವೆ ಆಗಬೇಕು ಬಯಸ್ತಾ ಇದ್ರು.

ಒಂಟಿಯಾಗಿದ್ದ ಸಮಂತಾಗೆ ದಿ ಫ್ಯಾಮಿಲಿ ಮ್ಯಾನ್ ಸೀಸನ್-2 ವೆಬ್​ಸರಣಿ ಮೂಲಕ ಹತ್ತಿರವಾಗಿದ್ದು ನಿರ್ದೇಶಕ ರಾಜ್ ನಿಡಿಮೋರು. ಈ ಸರಣಿಯಲ್ಲಿ ಕೆಲಸ ಮಾಡ್ತಾ ಪರಿಚಿತರಾದ ರಾಜ್ ಌಂಡ್ ಸ್ಯಾಮ್ ಮುಂದೆ ಸಿಟಾಡೆಲ್, ರಕ್ತಬ್ರಹ್ಮಾಂಡನಂತಹ ಸಿರೀಸ್​ಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ರು.

ಕಳೆದ ವರ್ಷದಿಂದಲೂ ಆಪ್ತರಾಗಿದ್ದ ರಾಜ್ ಌಂಡ್ ಸಮಂತಾ ಒಟ್ಟೋಟ್ಟಿಗೆ ಅನೇಕ ಕಡೆಗೆ ಕಾಣಿಸಿಕೊಂಡಿದ್ರು. ರಾಜ್ ನಿಡಿಮೋರುಗೂ ಇದು ಎರಡನೇ ಮದುವೆ. ರಾಜ್-ಸ್ಯಾಮ್ ಮದುವೆ ಬೆನ್ನಲ್ಲೇ ರಾಜ್ ಮೊದಲ ಪತ್ನಿ ಶ್ಯಾಮಲಿ ದೇ ಮೈಕೆಲ್ಬ್ರೂಕ್ಸ್ಅವರ,  ʻಹತಾಶ ಜನರು ಹತಾಶ ಕೆಲಸಗಳನ್ನ ಮಾಡ್ತಾರೆ’ ಅನ್ನೋ ಹೇಳಿಕೆಯನ್ನ ಪೋಸ್ಟ್ ಮಾಡಿದ್ದಾರೆ. ಇದು ಮಾಜಿ ಪತಿಯ ಬಗ್ಗೆಯಾ..? ಗೊತ್ತಿಲ್ಲ.

ಇನ್ನೂ ಸಮಂತಾ ಮದುವೆ ಫೋಟೊಗಳನ್ನ ಹಂಚಿಕೊಂಡ ಬೆನ್ನಲ್ಲೇ ಸಿನಿಲೋಕದ ಅನೇಕ ತಾರೆಯರು, ಸ್ಯಾಮ್ ಹೊಸ ಬದುಕಿಗೆ ಶುಭ ಹಾರೈಸಿದ್ದಾರೆ. ನಟಿ ರಮ್ಯಾ ಸೇರಿದಂತೆ ಹಲವರು ಸಮಂತಾ-ರಾಜ್ ಜೋಡಿಗೆ ಶುಭ ಹಾರೈಸಿದ್ದಾರೆ. ಫ್ಯಾನ್ಸ್ ಕೂಡ ಸಮಂತಾ ಹೊಸ ಜೀವನ ಸುಂದರವಾಗಲಿ ಅಂತ ವಿಶ್ ಮಾಡ್ತಾ ಇದ್ದಾರೆ. 

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
04:07ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
03:30ರಾಜಸ್ಥಾನ ಅರಮನೆಯಲ್ಲಿ 'ಗೀತಾ-ಗೋವಿಂದ' ಮದುವೆ! ಮಡಿಕೇರಿ, ಹೈದ್ರಾಬಾದ್ ಬಿಟ್ಟು ಅಲ್ಲಿ ಯಾಕೆ?
Read more