ಸಮಂತಾ ನೆಮ್ಮದಿಗೆ ಸಿಕ್ಕಿದೆಯಾ ಆ ಗಟ್ಟಿ ಭುಜ? ಹೊಸ ಬದುಕಿಗೆ ಸಜ್ಜಾದ್ರಾ ನಾಗಚೈತನ್ಯ ಮಾಜಿ ಪತ್ನಿ?

ಸಮಂತಾ ನೆಮ್ಮದಿಗೆ ಸಿಕ್ಕಿದೆಯಾ ಆ ಗಟ್ಟಿ ಭುಜ? ಹೊಸ ಬದುಕಿಗೆ ಸಜ್ಜಾದ್ರಾ ನಾಗಚೈತನ್ಯ ಮಾಜಿ ಪತ್ನಿ?

Published : May 16, 2025, 05:14 PM IST

ಮಾಜಿ ಪತಿ ನಾಗಚೈತನ್ಯ ಜೊತೆ ಸಂಸಾರ ಮುರಿದುಕೊಂಡ ಬಳಿಕ ಸಮಂತಾ ಜಂಗಲ್​ ಮೇ ಸಿಂಗಲ್ ಶೇರ್​ ತರ ಓಡಾಡ್ಕೊಂಡ್ ಇದ್ರು. ಆದ್ರೆ ಈಗ ಸ್ಯಾಮ್ ನೆಮ್ಮದಿ ಕಂಡುಕೊಳ್ಳಲು ಒಂದು ಭುಜ ಹುಡುಕಿಕೊಂಡಿದ್ದಾರೆ. 

ಟಾಲಿವುಡ್​ನ ಶಾಕುಂತಲೆ ಸಮಂತಾ ರುತ್​ ಪ್ರಭು ಈಗ ಟಿಟೌನ್​ನ ಹಾಟ್ ಟಾಪಿಕ್​. ಮಾಜಿ ಪತಿ ನಾಗಚೈತನ್ಯ ಜೊತೆ ಸಂಸಾರ ಮುರಿದುಕೊಂಡ ಬಳಿಕ ಸಮಂತಾ ಜಂಗಲ್​ ಮೇ ಸಿಂಗಲ್ ಶೇರ್​ ತರ ಓಡಾಡ್ಕೊಂಡ್ ಇದ್ರು. ಆದ್ರೆ ಈಗ ಸ್ಯಾಮ್ ನೆಮ್ಮದಿ ಕಂಡುಕೊಳ್ಳಲು ಒಂದು ಭುಜ ಹುಡುಕಿಕೊಂಡಿದ್ದಾರೆ. ಇದನ್ನ ನಾವ್ ಹೇಳ್ತಿಲ್ಲ ಸಮಂತಾ ಶೇರ್​ ಮಾಡಿರೋ ಆ ಸಖತ್ ಫೋಟೋ ಸಾರಿ ಹೇಳುತ್ತಿದೆ. ಹಾಗಾದ್ರೆ ಸಮಂತಾ ತಲೆಗೆ ಭುಜ ಕೊಟ್ಟ ಆ ಹ್ಯಾಂಡ್ಸಮ್ ಯಾರು..? ಸ್ಯಾಮ್​ ಗು ಆ ಹುಡುಗನ ಮಧ್ಯೆ ಏನ್ ನಡೀತಿದೆ ಅಂತ ನೋಡೋಣ ಬನ್ನಿ. ಟಾಲಿವುಡ್​ನ ಮೋಸ್ಟ್​ ಬ್ಯೂಟಿಫುಲ್ ಹೀರೋಯಿನ್​​ ಅಂದ್ರೆ ಅದು ಸಮಂತಾ ಅಂತ ಟಾಲಿವುಡ್​​ನ ಗೋಡೆಗಳೆಲ್ಲಾ ಕೂಗಿ ಹೇಳುತ್ತವೆ. ಅದು ಸುಳ್ಳೇನು ಅಲ್ಲ. ಸಮಂತಾ ಅದೆಷ್ಟೋ ಪಡ್ಡೆ ಹುಡುಗರ ಮನದರಸಿ. ಆದ್ರೆ ನಾಗಚೈತನ್ಯ ಜೊತೆ ಸಪ್ತಪದಿ ತುಳಿದ ಮೇಲೆ ಸ್ಯಾಮ್​ ಸಿನಿಮಾ ರಂಗದಿಂದ ಸ್ವಲ್ಪ ಸ್ವಲ್ಪವೇ ದೂರಾಗ್ತಾ ಬಂದ್ರು. 

ಬಟ್ ನಾಗಚೈತನ್ಯ ಜೊತೆಗಿನ ಸಂಬಂಧ ಮುರಿದು ಬಿದ್ಮೇಲೆ ಸಮಂತಾ ಮತ್ತೆ ಮೈ ಕೊಡವಿ ನಿಂತಿದ್ದಾರೆ. ಸಮಂತಾ ಸಿನಿ ಕರಿಯರ್ ಮತ್ತೆ ಟ್ರ್ಯಾಕ್​​ನಲ್ಲಿದೆ. ಇದೇ ಟೈಮ್​​​ನಲ್ಲಿ ಹೊರ ಪ್ರಪಂಚಕ್ಕೆ ಒಂಟಿಯಾಗಿ ಕಾಣಿಸುತ್ತಿರೋ ಸಮಂತಾ ಬಗ್ಗೆ ಮತ್ತೊಂದು ಸುದ್ದಿ ಗಾಢವಾಗಿ ಹಬ್ಬಿದೆ. ಅದೇ ಸಮಂತಾ ಮನದಲ್ಲಿ ಪ್ರೇಮದ ಹೂವೂ ಅರಳಿದೆ ಅನ್ನೋ ಮಾತು. ಸಮಂತಾ ಮನದ ಕಡಲಲ್ಲಿ ಮತ್ತೊಮ್ಮೆ ಪ್ರೇಮದ ಗಾಳಿ ಬೀಸಿದೆ. ನಾಗಚೈತನ್ಯ ಪ್ರೀತಿಯಲ್ಲಿ ಬಿದ್ದಿದ್ದು, ಎದ್ದಿದ್ದು ಹೊರ ಬಂದಿದ್ದು ಆದ ಮೇಲೆ ಈಗ ಸಮಂತಾ ತನ್ನ ನೆಚ್ಚಿನ ನಿರ್ದೇಶಕನ ಜೊತೆ ಪ್ರೇಮ್​​ ಕಹಾನಿಗೆ ಸಾಕ್ಷಿಯಾಗುತ್ತಿದ್ದಾರೆ. ಇವರ ಪ್ರೀತಿಯ ಕಥೆಗೆ ಈಗ ಸಾಕ್ಷಿ ಸಿಕ್ಕಿದೆ. ಸಮಂತಾ ತನ್ನ ಪ್ರಿಯಕರನ ಭುಜದ ಮೇಲೆ ತನ್ನ ತಲೆ ಒರಗಿಸಿದ್ದಾರೆ. ಆ ಫೋಟೋ ಒಂದು ಹರಿದಾಡುತ್ತಿದೆ. ಸಮಂತಾ ಪ್ರೀತಿಗೆ ಬಲಿ ಆಗಿರೋ ಆ ಹುಡುಗ ರಾಜ್ ನಿಡಿಮೊರು. 

ರಾಜ್ ನಿಡಿಮೊರು ಸಮಂತಾ ಲವ್​​ನಲ್ಲಿದ್ದಾರೆ ಅನ್ನೋ ಮಾತು ಕಳೆದೊಂದು ವರ್ಷದಿಂದ ಸಿಕ್ಕಾಪಟ್ಟೆ ಹರಿದಾಡುತ್ತಿದೆ. ಆ ಕಡೆ ವಿಜಯ್ ದೇವರಕೊಂಡ ರಶ್ಮಿಕಾ ಮಂದಣ್ಣ ಪ್ರೇಮ್ ಕಹಾನಿಗೆ ಹೇಗೆ ಸಾಕ್ಷ್ಯಗಳು ಸಿಕ್ತಾ ಇವೆಯೋ ಹಾಗೆ ಸಮಂತಾ ಹಾಗು ರಾಜ್​ ನಿಡಿಮೋರು ಪ್ರೇಮ್​​ದ ಗುಲ್ಲಿಗೂ ಈಗ ಸಾಕ್ಷ್ಯಗಳು ಸಿಗ್ತಾ ಇವೆ.  ರಾಜ್ ನಿಡಿಮೊರು ತೋಳಲ್ಲಿ ತಲೆಇಟ್ಟು ಮಲಗಿದ ಸಮಂತಾ ಇಬ್ಬರ ಪ್ರೀತಿಯ ರೂಮರ್ಸ್​ಗೆ ಮತ್ತಷ್ಟು ತುಪ್ಪ ಸುರಿದಿದ್ದಾರೆ. ಹಾಗ್ ನೋಡಿದ್ರೆ ರಾಜ್​ ನಿಡಿಮೊರು ಹಾಗು ಸಮಂತಾ ಮಧ್ಯೆ ಸ್ನೇಹ ಬೆಳೆದಿದ್ದು, ದಿ ಫ್ಯಾಮಿಲಿ ಮ್ಯಾನ್ ವೆಬ್​ ಸೀರಿಸ್​​ನಿಂದ. ಫ್ಯಾಮಿಲಿಮ್ಯಾನ್​ ವೆಬ್ ಸೀರಿಸ್ ನೋಡಿದ್ದ ಸಮಂತಾ ರಾಜ್​ ನಿಡಿಮೋರುಗೆ ವಿಶ್ ಮಾಡಿದ್ರು. ಇದರಿಂದ ಫ್ಯಾಮಿಲಿ ಮ್ಯಾನ್​ ಸೀಸನ್​2ಗೆ ಸಮಂತಾ ಲೀಡ್ ರೋಲ್​​ ಚಾನ್ಸ್​​ ಸಿಕ್ತು. ಇಲ್ಲಿ ಸಮಂತಾ ಹಸಿ ಬಿಸಿ ದೃಶ್ಯದಲ್ಲಿ ಮಿಂಚಿದ್ರು. 

ಇದು ನಾಗಚೈತನ್ಯಾ ಜೊತೆ ಡಿವೋರ್ಸ್​ಗೆ ಕಾರಣ ಅನ್ನೋ ಟಾಕ್ ಇದೆ. ನಾಗಚೈತನ್ಯಾ ಜೊತೆ ಸಮಂತಾ ಡಿವೋರ್ಸ್ ಪಡೆದ ಮೇಲೆ ಕಂಪ್ಲೀಟ್ ಆಗಿ ರಾಜ್ ನಿಡಿಮೋರು ಜೊತೆಗೆ ಸುತ್ತಾಡುತ್ತಿದ್ದಾರೆ. ಸಿಟಾಡಲ್ ಹನಿ ಬನಿ ವೆಬ್​ ಸೀರಿಸ್​ನಲ್ಲೂ ಒಟ್ಟಿಗೆ ಕೆಲಸ  ಮಾಡಿದ್ರು. ಈಗ ದೇವಸ್ಥಾನ ವಿದೇಶ ಅಂತ ಇಬ್ಬರೂ ಸುತ್ತಾಡುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ಸಮಂತಾ ರುತ್ ಪ್ರಭು ಮತ್ತು ರಾಜ್ ನಿಡಿಮೋರು ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈಗ ರಾಜ್​ ಹೆಗಲ ಮೇಲೆ ತಲೆ ಇಟ್ಟು ರಿಲ್ಯಾಕ್ಸ್ ಆಗಿರೋ ಫೋಟೋವನ್ನ ಸಮಂತಾ ಹಂಚಿಕೊಂಡಿದ್ದು, ಇಬ್ಬರ ಮಧ್ಯೆ ಪ್ರೀತಿ ಮೊಳಕೆ ಒಡೆದಿದೆ ಅನ್ನೋ ಟಾಕ್​​ಗೆ ಪೆಟ್ರೋಲ್ ಹಾಕಿದ್ದಾರೆ. 

04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
04:07ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
03:30ರಾಜಸ್ಥಾನ ಅರಮನೆಯಲ್ಲಿ 'ಗೀತಾ-ಗೋವಿಂದ' ಮದುವೆ! ಮಡಿಕೇರಿ, ಹೈದ್ರಾಬಾದ್ ಬಿಟ್ಟು ಅಲ್ಲಿ ಯಾಕೆ?
Read more