RRR ಟಿಕೆಟ್ ದುಬಾರಿಯಾದ್ರೂ ಹೌಸ್‌ಫುಲ್, ರಾಜಮೌಳಿಗೆ ಜೈ ಎಂದ ಪ್ರೇಕ್ಷಕ..!

Mar 26, 2022, 12:51 PM IST

ರಾಮರಾಜು ಪಾತ್ರದಲ್ಲಿ ರಾಮ್‌ಚರಣ್‌ ತೇಜ, ಭೀಮನ ಪಾತ್ರದಲ್ಲಿ ಜೂ.ಎನ್‌ಟಿಆರ್‌ ಒಬ್ಬರಿಗೊಬ್ಬರು ಪೋಟಿಗೆ ಬಿದ್ದವರಂತೆ ನಟಿಸಿದ್ದಾರೆ. ಇವರಿಬ್ಬರನ್ನು ನಿಭಾಯಿವುದು ಛಾಯಾಗ್ರಾಹ ಸೆಂದಿಲ್‌, ನಿರ್ದೇಶಕನ ಚಿತ್ರಕತೆ. ರೀವೆಂಜ್‌ಗೂ ಎಮೋಷನ್‌ ನಂಟು ಇರುತ್ತದೆ ಎನ್ನುವ ರಾಜಮೌಳಿಯ ಅದೇ ನಂಬಿಕೆಯಲ್ಲಿ ಮೂಡಿರುವ ಈ ಚಿತ್ರದಲ್ಲಿ ದ್ವೇಷ ದೊಡ್ಡದಾಗಿ ಎಮೋಷನ್‌ ಪಾಯಿಂಟ್‌ ಚಿಕ್ಕದಾಗಿ ಕಾಣುತ್ತದೆ. 

ರಾಜಮೌಳಿ, ಸಿನಿಮಾದ ಕತೆಯಲ್ಲಿ ಅದೆಷ್ಟು ಗಟ್ಟಿಯಾಗಿದ್ದಾರೋ ಸಿನಿಮಾದ ಹಾಡುಗಳು ಕಣ್ಣಲ್ಲಿ ಕೂತುಬಿಡುತ್ತೆ. ನಾಟು-ನಾಟು ಹಾಡಿನಲ್ಲಿ ರಾಮ್ ಚರಣ್ ಜ್ಯೂ, ಎನ್ಟಿಆರ್ ಡಾನ್ಸ್ ಇಡೀ ಚಿತ್ರಮಂದಿರವೇ ಶಿಳ್ಳೆಯಲ್ಲಿ ಮುಳುಗುಂತೆ ಮಾಡುತ್ತೆ. ಸಿನಿಮಾದ ಕೊನೆಯಲ್ಲಿ ಬರೋ ಮತ್ತೊಂದು ಹಾಡು ದೇಶಪ್ರೇಮವನ್ನ ಮತ್ತಷ್ಟು ಉಕ್ಕಿ ಬರುವಂತೆ ಮಾಡುತ್ತೆ. ರಾಜಮೌಳಿ ಕಥೆಯನ್ನ ಹೆಣೆದ ರೀತಿ, ನಿಮ್ಮ ಮುಂದೆ ಅದನ್ನ ಪ್ರಸೆಂಟ್ ಮಾಡಿದ ಜಾಣತನಕ್ಕೆ ತಲೆಬಾಗಲೇಬೇಕು. ಚಿತ್ರಮಂದಿರದ ಒಳಗೆ ಹೋಗುವ ಪ್ರೇಕ್ಷಕರ ಬಾಯಲ್ಲಿ ಸೂಪರ್, ಎಕ್ಸಲೆಂಟ್, ಜೈ ರಾಜಮೌಳಿ, ಜೈ ಎನ್‌ಟಿಆರ್ ಎನ್ನುವ ಮಾತುಗಳು ಕೇಳಿ ಬರುತ್ತಿವೆ.