ದೇಶ ವಿದೇಶಗಳಲ್ಲೂ ಕಾಂತಾರ-1 ಮೇನಿಯಾ; ಕಲೆಕ್ಷನ್ ಎಷ್ಟಾಗುತ್ತೆ..? ಬಾಕ್ಸಾಫೀಸ್ ಲೆಕ್ಕಾಚಾರವೇನು?

ದೇಶ ವಿದೇಶಗಳಲ್ಲೂ ಕಾಂತಾರ-1 ಮೇನಿಯಾ; ಕಲೆಕ್ಷನ್ ಎಷ್ಟಾಗುತ್ತೆ..? ಬಾಕ್ಸಾಫೀಸ್ ಲೆಕ್ಕಾಚಾರವೇನು?

Published : Oct 03, 2025, 12:23 PM IST

ಕಾಂತಾರ ಚಾಪ್ಟರ್-1 ವಿಜಯ ದಶಮಿ ದಿನ ಭರಪೂರ ಕಮಾಯಿ ಮಾಡಿದೆ. ಕರ್ನಾಟಕದಾದ್ಯಂತ ಎಲ್ಲಾ ಸ್ಕ್ರೀನ್​ಗಳಲ್ಲಿ ಬಹುತೇಕ ಶೋಗಳು ಹೌಸ್​ಫುಲ್​ ಆಗಿವೆ. ದೇಶಾದ್ಯಂತ ನಾನಾ ರಾಜ್ಯಗಳಲ್ಲೂ ಸಿನಿಮಾಗೆ ಬಿಗ್ ಓಪನಿಂಗ್ ಸಿಕ್ಕಿದೆ.

ಬುಧವಾರ ಸಂಜೆಯಿಂದ್ಲೇ ಪೇಯ್ಡ್ ಪ್ರೀಮಿಯರ್ ಶೋ ಮೂಲಕ ಸದ್ದು ಮಾಡಿದ್ದ ಕಾಂತಾರ ಚಾಪ್ಟರ್-1, ವಿಜಯ ದಶಮಿ ದಿನ ಭರಪೂರ ಕಮಾಯಿ ಮಾಡಿದೆ. ಕರ್ನಾಟಕದಾದ್ಯಂತ ಎಲ್ಲಾ ಸ್ಕ್ರೀನ್​ಗಳಲ್ಲಿ ಬಹುತೇಕ ಶೋಗಳು ಹೌಸ್​ಫುಲ್​ ಆಗಿವೆ. ದೇಶಾದ್ಯಂತ ನಾನಾ ರಾಜ್ಯಗಳಲ್ಲೂ ಸಿನಿಮಾಗೆ ಬಿಗ್ ಓಪನಿಂಗ್ ಸಿಕ್ಕಿದೆ. ವಿದೇಶಗಳಲ್ಲೂ ಕಾಂತಾರ ಕಮಾಲ್ ಮಾಡ್ತಾ ಇದೆ. ಹಾಗಾದ್ರೆ ಮೊದಲ ದಿನ ಕಾಂತಾರ ಚಾಪ್ಟರ್-1 ಮಾಡಿದ ಕಲೆಕ್ಷನ್ ಎಷ್ಟು..? ನೋಡೋಣ ಬನ್ನಿ. ಯೆಸ್ ಕಾಂತಾರ ಚಾಪ್ಟರ್-1 ಸಿನಿಮಾಗೆ ನಿರೀಕ್ಷೆಯಂತೆಯೇ ಮೆಗಾ ಓಪನಿಂಗ್ ಸಿಕ್ಕಿದೆ. ಬುಧವಾರ ಸಂಜೆಯೇ ಪೇಯ್ಡ್  ಪ್ರೀಮಿಯರ್​ ಮೂಲಕ ಸಿನಿಮಾ ಸದ್ದು ಮಾಡಿತ್ತು. ಇನ್ನೂ ಗುರುವಾರ ವಿಜಯ ದಶಮಿ ಹಬ್ಬದ ದಿನ ಸಿನಿಮಾ ಬಿಗ್ಗೆಸ್ಟ್ ಓಪನಿಂಗ್ ಪಡೆದುಕೊಂಡಿದೆ.

ಕರ್ನಾಟಕದಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಬಹುತೇಕಗಳ ಶೋಗಳು ಹೌಸ್​​ಫುಲ್ ಆಗಿವೆ. ಬೆಂಗಳೂರಿನಲ್ಲಂತೂ ಎಲ್ಲಾ ಮಲ್ಟಿಪ್ಲೆಕ್ಸ್​ಗಳ ಬಹುತೇಕ ಸ್ಕ್ರೀನ್​ಗಳಲ್ಲಿ ಕಾಂತಾರ ಸಿನಿಮಾನೇ ಪ್ರದರ್ಶನ ಕಾಣ್ತಾ ಇದೆ. ಸಿನಿಮಾ ನೋಡಿದ ಫ್ಯಾನ್ಸ್ ಇದೊಂದು  ವಿಷ್ಯುವಲ್ ಟ್ರೀಟ್ ಅಂತಿದ್ದಾರೆ. ಹೌದು ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಭಾರತದ ಬಹುತೇಕ ರಾಜ್ಯಗಳಲ್ಲಿ ಕಾಂತಾರ ರಿಲೀಸ್ ಆಗಿದೆ. ಮಹಾರಾಷ್ಟ್ರ, ಕೇರಳ ಮತ್ತು ಆಂಧ್ರದಲ್ಲಿ ಸಿನಿಮಾಗೆ ಬಿಗ್ಗೆಸ್ಟ್ ಓಪನಿಂಗ್ ಸಿಕ್ಕಿದೆ. ಅನ್ಯಭಾಷಿಕರು ಕೂಡ ತಮ್ಮದೇ ಭಾಷೆಯಲ್ಲಿ ನಮ್ಮ ನೆಲದ ಕಾಂತಾರ ನೋಡಿ ಜೈ ಹೋ ಅಂತಿದ್ದಾರೆ. ಇನ್ನೂ ಇಂಗ್ಲೀಷ್ ಭಾಷೆಯಲ್ಲೂ ಕಾಂತಾರ-1 ರೆಡಿಯಾಗಿದ್ದು ಯು.ಎಸ್, ಯು.ಕೆ ಕೆನಡಾ ಸೇರಿದಂತೆ ಬಹಳಷ್ಟು ಯುರೋಪಿಯನ್ ದೇಶಗಳಲ್ಲಿ ತೆರೆಕಂಡಿದೆ.

ಯುಕೆಯಲ್ಲಿ ನಡೆದ ಪ್ರೀಮಿಯರ್ ಶೋನಲ್ಲಿ ಅಶ್ವೀನಿ ಪುನೀತ್ ರಾಜ್ ಕುಮಾರ್ ಭಾಗಿಯಾಗಿದ್ದು ವಿಶೇಷ. ಯೆಸ್ ಕಾಂತಾರ ಚಾಪ್ಟರ್-1 ಭಾರತದಾದ್ಯಂತ ಮೊದಲ 29 ಕೋಟಿ ಗಳಿಕೆ ಮಾಡಿದೆ. ಓವರ್​ಸೀಸ್ ಗಳಿಕೆ ಲೆಕ್ಕ ಹಾಕಿದ್ರೆ ಸಿನಿಮಾ ಫಸ್ಟ್ ಡೇ ಬಾಕ್ಸಾಫೀಸ್ ಕಲೆಕ್ಷನ್ 35 ರಿಂದ 40 ಕೋಟಿ ಆಗಬಹುದು ಅಂತಿದ್ದಾರೆ ಬಾಕ್ಸಾಫೀಸ್ ಪಂಡಿತರು. ಇನ್ನೂ ವಾರಾಂತ್ಯದ ಸಾಲು ಸಾಲು ರಜೆ ಇರೋದ್ರಿಂದ ಮುಂದಿನ ಮೂರು ದಿನಗಳಲ್ಲಿ ಕಾಂತಾರ ಚಾಪ್ಟರ್-1 ಭರ್ಜರಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಕಾಂತಾರ ಓಪನಿಂಗ್ ಡೇ  ಕಲೆಕ್ಷನ್ ನೋಡಿದವರು ಇದು ಮುಂದಿನ ದಿನಗಳಲ್ಲಿ ಹೊಸ ದಾಖಲೆಗಳನ್ನ ಬರೆಯೋದ್ರಲ್ಲಿ ಡೌಟಿಲ್ಲ ಅಂತಿದ್ದಾರೆ.

06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
03:52ರಾಕಿ ಸಾಮ್ರಾಜ್ಯಕ್ಕೆ 'ಲೇಡಿ ಬಾಸ್': ನಿರ್ದೇಶಕಿಗೆ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾದ ಬರ್ತ್‌ಡೇ ಗಿಫ್ಟ್!
02:48ಪೆದ್ದಿ ಸೆಟ್​ನಲ್ಲಿ ಕಣ್ಣೀರಿಟ್ಟಿದ್ರಾ ಜಾನ್ವಿ ಕಪೂರ್? ಚಾಟ್ಸ್ ವಿವರ ವೈರಲ್, ಏನಿದು ಜಾನು ಚಾಟ್ ಸೀಕ್ರೆಟ್!
04:41ಸಾಯಿ ಪಲ್ಲವಿ, ರುಕ್ಮಿಣಿ ವಸಂತ್ ಕೂಡ ಅಲ್ಲ: ಸುಬ್ಬುಲಕ್ಷ್ಮಿ ಬಯೋಪಿಕ್​ಗೆ ರಶ್ಮಿಕಾ ಎಂಟ್ರಿ?
03:08Rashmika-Vijay: ವಿಜಯ್ ಕಟ್ಟಿರೋ ತಾಳಿಯಲ್ಲೂ ರಶ್ಮಿಕಾ ಕೈಚಳಕ.. ನ್ಯಾಷನಲ್ ಕ್ರಶ್ ಟ್ಯಾಲೆಂಟ್ ಒಂದೆರಡಲ್ಲ!
Read more