ರಾಜಸ್ಥಾನ ಅರಮನೆಯಲ್ಲಿ 'ಗೀತಾ-ಗೋವಿಂದ' ಮದುವೆ! ಮಡಿಕೇರಿ, ಹೈದ್ರಾಬಾದ್ ಬಿಟ್ಟು ಅಲ್ಲಿ ಯಾಕೆ?

ರಾಜಸ್ಥಾನ ಅರಮನೆಯಲ್ಲಿ 'ಗೀತಾ-ಗೋವಿಂದ' ಮದುವೆ! ಮಡಿಕೇರಿ, ಹೈದ್ರಾಬಾದ್ ಬಿಟ್ಟು ಅಲ್ಲಿ ಯಾಕೆ?

Published : Nov 09, 2025, 09:11 AM IST

ಕಿರಿಕ್ ಬ್ಯೂಟಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಎಂಗೇಜ್​ಮೆಂಟ್ ವಿಷ್ಯ ಈಗಾಗ್ಲೇ ಜಗಜ್ಜಾಹೀರಾಗಿದೆ. ನಿಶ್ಚಿತಾರ್ಥದ ಬಳಿಕ ವಿಜಯ್, ರಶ್ಮಿಕಾ ಸಿನಿಮಾಗಳಲ್ಲಿ ಬ್ಯುಸಿಯಾದ್ರೆ , ಅವರ ಮನೆಮಂದಿ ಮದುವೆಗೆ ಡೇಟ್ ಫಿಕ್ಸ್ ಮಾಡಿದ್ದಾರೆ. ಅಷ್ಟೇ ಅಲ್ಲ ಮದುವೆ ನಡೆಯೋ ಜಾಗ ಕೂಡ ಫಿಕ್ಸ್ ಆಗಿದೆ.

ಕಿರಿಕ್ ಬ್ಯೂಟಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಎಂಗೇಜ್​ಮೆಂಟ್ ವಿಷ್ಯ ಈಗಾಗ್ಲೇ ಜಗಜ್ಜಾಹೀರಾಗಿದೆ. ನಿಶ್ಚಿತಾರ್ಥದ ಬಳಿಕ ವಿಜಯ್, ರಶ್ಮಿಕಾ ಸಿನಿಮಾಗಳಲ್ಲಿ ಬ್ಯುಸಿಯಾದ್ರೆ , ಅವರ ಮನೆಮಂದಿ ಮದುವೆಗೆ ಡೇಟ್ ಫಿಕ್ಸ್ ಮಾಡಿದ್ದಾರೆ. ಅಷ್ಟೇ ಅಲ್ಲ ಮದುವೆ ನಡೆಯೋ ಜಾಗ ಕೂಡ ಫಿಕ್ಸ್ ಆಗಿದೆ.

ರಶ್ಮಿಕಾ-ವಿಜಯ್ ಕಲ್ಯಾಣಕ್ಕೆ ಮುಹೂರ್ತ ಫಿಕ್ಸ್..!
ಯೆಸ್ ಕಳೆದ ಅಕ್ಟೋಬರ್ ತಿಂಗಳಲ್ಲಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಎಂಗೇಜ್​ಮೆಂಟ್ ಗುಟ್ಟಾಗಿ ನಡೆದಿತ್ತು. ಎಂಗೇಜ್​ಮೆಂಟ್ ಟೈಂನಲ್ಲಿ ಫೆಬ್ರುವರಿ ತಿಂಗಳಲ್ಲಿ ಮದುವೆ ಮಾಡ್ಲಿಕ್ಕೆ ಇಬ್ಬರ ಮನೆ ಮಂದಿ ನಿರ್ಧಾರ ಮಾಡಿದ್ರು. ಫೈನಲಿ ಈಗ ಈ ತಾರಾಜೋಡಿ ಕಲ್ಯಾಣಕ್ಕೆ ಡೇಟ್ ಫಿಕ್ಸ್ ಮಾಡಿದ್ದಾರೆ. ಫೆಬ್ರುವರಿ 26ನೇ ಈ ತಾರೀಖು ವಿಜಯ್-ರಶ್ಮಿಕಾ ಮದುವೆ ನಡೆಯಲಿದೆ.

ರಾಜಸ್ಥಾನ ಅರಮನೆಯಲ್ಲಿ ತಾರಾಜೋಡಿ ಮದುವೆ..!
ಹೌದು ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ರಾಜಸ್ಥಾನದ ಪ್ಯಾಲೇಸ್ ಹೊಟೇಲ್‌ನಲ್ಲಿ ಮದುವೆ ಆಗೋದಕ್ಕೆ ನಿರ್ಧಾರ ಮಾಡಿದ್ದಾರೆ. ಕೋಟೆ ನಗರಿ ರಾಜಸ್ಥಾನದಲ್ಲಿ ಅನೇಕ ಅರಮನೆಗಳಿವೆ. ಉದಯಪುರದ ಅರಮನೆಯನ್ನ ಹೊಟೇಲ್ ಆಗಿ ಬದಲಾಯಿಸಿದ್ದು ಅಲ್ಲಿ ಇವೆಂಟ್​ಗಳನ್ನ ನಡೆಸೋದಕ್ಕೆ ಬಾಡಿಗೆ ಕೊಡಲಾಗುತ್ತೆ. ಈ ಉದಯಪುರ ಪ್ಯಾಲೇಸ್ ಹೊಟೇಲ್​ನಲ್ಲೇ ರಶ್ಮಿಕಾ ವಿಜಯ್ ಮದುವೆ ನಡೆಯೋದು ಫಿಕ್ಸ್ ಆಗಿದೆ.

ಮಡಿಕೇರಿ, ಹೈದ್ರಾಬಾದ್ ಬಿಟ್ಟು ಉದಯಪುರ ಯಾಕೆ..?
ರಶ್ಮಿಕಾ ಮಂದಣ್ಣ ಮಡಿಕೇರಿ ಮೂಲದವರು. ಕೊಡವ ಕುಟುಂಬದವರಾದ ಅವರ ಮೂಲ ಮನೆ ಈಗಲೂ ವಿರಾಜಪೇಟೆಯಲ್ಲಿದೆ. ಇನ್ನೂ ದೇವರಕೊಂಡ ಫ್ಯಾಮಿಲಿ ಹೈದರಾಬಾದ್​ನವರು. ಸೋ ವಧು-ವರ ಇಬ್ಬರ ಜಾಗವನ್ನೂ ಬಿಟ್ಟು ರಾಜಸ್ಥಾನದ ಉದಯಪುರದಲ್ಲಿ ಮದುವೆ ನಡೆಸಲಾಗ್ತಾ ಇದೆ. ಇದಕ್ಕೆ ಕಾರಣ ಬೇರೆನೂ ಇಲ್ಲ.. ಖಾಸಗಿತನಕ್ಕೆ ಅಡ್ಡಿ ಬರಬಾರದು ಅಂತ.

ಫೆ.26ಕ್ಕೆ ಡೆಸ್ಟಿನೇಷನ್ ವೆಡ್ಡಿಂಗ್.. ಆಪ್ತರಿಗಷ್ಟೇ ಆಹ್ವಾನ..!
ಈ ಹಿಂದೆ ಇದೇ ಉದಯಪುರ ಪ್ಯಾಲೇಸ್ ಹೊಟೇಲ್​ನಲ್ಲಿ ಹಲವು ಸೆಲೆಬ್ರಿಟಿಗಳ ಮದುವೆ ನಡೆದಿದೆ. ಇಲ್ಲಿಯೇ ರಶ್ಮಿಕಾ- ವಿಜಯ್ ಕೂಡ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಳ್ತಾ ಇದ್ದು, ತೀರಾ ಆಪ್ತರಿಗೆ ಮಾತ್ರ ಆಹ್ವಾನ ಹೋಗಲಿದೆಯಂತೆ.

ವಿಜಯ್ ರಶ್ಮಿಕಾದೂ ಬರೊಬ್ಬರಿ 8 ವರ್ಷಗಳ ಲವ್​ ಸ್ಟೋರಿ. ಫೈನಲಿ ಅದಕ್ಕೀಗ ಅಧಿಕೃತ ಮುದ್ರೆ ಬೀಳ್ತಾ ಇದೆ. ಮುಂದಿನ ವರ್ಷ ಗೀತಾ ಗೋವಿಂದ ಸತಿಪತಿರಾಗ್ತಾ ಇದ್ದಾರೆ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
04:07ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
03:30ರಾಜಸ್ಥಾನ ಅರಮನೆಯಲ್ಲಿ 'ಗೀತಾ-ಗೋವಿಂದ' ಮದುವೆ! ಮಡಿಕೇರಿ, ಹೈದ್ರಾಬಾದ್ ಬಿಟ್ಟು ಅಲ್ಲಿ ಯಾಕೆ?
Read more