ನಟಿ ರಶ್ಮಿಕಾ ಮಂದಣ್ಣ ತಮಿಳು ಸ್ಟಾರ್ ನಟ ವಿಜಯ್ ತನ್ನ ಕ್ರಷ್ ಎನ್ನುತ್ತಿದ್ದರು. ಇದೀಗ ಅವರ ಜೊತೆ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ವಿಜಯ್ ನಟನೆಯ 66ನೇ ಸಿನಿಮಾಗೆ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಇತ್ತೀಚಿಗೆ ರಶ್ಮಿಕಾಗೆ ಯಾರಾದರೂ ನಿಮ್ಮ ಸೆಲೆಬ್ರಿಟಿ ಕ್ರಷ್ ಯಾರೂ ಅಂದ್ರೆ ಸಾಕು. ಅದು ತಮಿಳು ನಟ ವಿಜಯ್ ಎನ್ನುತ್ತಿದ್ದರು. ಅದಕ್ಕೆ ಕಾರಣ ದಳಪತಿ ಜೊತೆ ನಟಿಸೊ ಆಸೆ. ಕೊನೆಗೂ ರಶ್ಮಿಕ ತನ್ನಾಸೆ ಈಡೇರಿಸಿಕೊಳ್ಳುವ ದಿನ ಬಂದೇ ಬಿಟ್ಟಿದೆ. ವಿಜಯ್ ದಳಪತಿಗೆ ಹೀರೋಯಿನ್ ಆಗೆಬಿಟ್ಟಿದ್ದಾರೆ. ಆದರೆ ಸಿನಿಮಾ ಮುಹೂರ್ತದಲ್ಲೇ ರಶ್ಮಿಕಾ ವಿಜಯ್ ಜೊತೆ ಹೀಗೆ ಮಾಡಿದ್ದು ನೋಡಿ ಒಬ್ಬೊಬ್ಬರು ಒಂದೊಂದು ಹೇಳುತ್ತಿದ್ದಾರೆ. ರಶ್ಮಿಕಾ ವಿಜಯ್ ಗೆ ಸ್ವತಃ ದೃಷ್ಟಿ ತೆಗೆದಿದ್ದಾರೆ. ಇದನ್ನು ನೋಡಿ ವಿಜಯ್ ಅಚ್ಚರಿ ಪಡುತ್ತಾ ಮುಗುಳ್ನಗೆ ಬೀರಿದ್ದಾರೆ. ಇನ್ನು ಕೆಲವರು ಇದು ಜಾಸ್ತಿ ಓವರ್ ಅಯ್ತು ಅಂತಲೂ ಕಾಮೆಂಟ್ ಮಾಡಿದ್ದಾರೆ. ದಳಪತಿ ವಿಜಯ್ ನಟನೆಯ 66ನೇ ಚಿತ್ರಕ್ಕೆ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ದಿಲ್ ರಾಜು ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರಕ್ಕೆ ಫಸ್ಟ್ ಟೈಮ್ ದಳಪತಿ ವಿಜಯ್‌ಗೆ ನಾಯಕಿಯಾಗಿ ರಶ್ಮಿಕಾ ನಟಿಸುತ್ತಿದ್ದಾರೆ. ರಶ್ಮಿಕಾ ಕೂಡ ದಳಪತಿ ವಿಜಯ್ ಅವರ ಅಭಿಮಾನಿಯಾಗಿದ್ದು, ಇದೇ ಖುಷಿಯಲ್ಲಿ ಹೊಸ ಚಿತ್ರದ ಮುಹೂರ್ತದ ವೇಳೆ ಖುಷಿ ಖುಷಿಯಾಗಿ ಲಟಿಕೆ ಮುರಿದು ವಿಜಯ್‌ಗೆ ದೃಷ್ಟಿ ತೆಗೆದಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಡೈರೆಕ್ಟರ್ ವಂಶಿ ಪಡಿಪಲ್ಲಿ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ವಿಜಯ್ ನಟನೆಯ`ಬಿಗಿಲ್’, `ಸರ್ಕಾರ್’ ಹೀಗೆ ಬ್ಯಾಕ್ ಟು ಬ್ಯಾಕ್ ಚಿತ್ರಗಳು ಹಿಟ್ ನೀಡಿದ್ದಾರೆ. ಸದ್ಯ ಬೀಸ್ಟ್ ಬಿಡುಗಡೆಗೆ ಕಾಯುತ್ತಿದ್ದಾರೆ.