ನ್ಯಾಷನಲ್ ಅವಾರ್ಡ್​ ಡ್ರೀಮ್‌ನಲ್ಲಿ ನ್ಯಾಷನಲ್ ಕ್ರಶ್; ಗೆಲ್ತಾರಾ ರಶ್ಮಿಕಾ ಮಂದಣ್ಣ?

Dec 1, 2024, 11:54 AM IST

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸ್ಯಾಂಡಲ್​ವುಡ್​​ನಿಂದ ಟಾಲಿವುಡ್​​ ಅಲ್ಲಿಂದ ಬಾಲಿವುಡ್​​ಗೂ ಮುತ್ತಿಟ್ಟಾಗಿದೆ. ರಶ್ಮಿಕಾ ಈಗ ಟಾಪ್ ಹೀರೋಯಿನ್. ಇಷ್ಟಕ್ಕೆ ಶ್ರೀವಲ್ಲಿ ಕನಸು ನಿಂತಿಲ್ಲ. ಈ ಮಡಿಕೇರಿ ಬ್ಯೂಟಿಗೆ ದೊಡ್ಡ ಕನಸೊಂದಿದೆ. ಅದೇ ರಾಷ್ಟ್ರ ಪ್ರಶಸ್ತಿಗೆ ಮುತ್ತಿಕ್ಕೋ ಮನಸ್ಸು. ಹಾಗಾದ್ರೆ ಅದು ಸಾಧ್ಯ ಆಗುತ್ತಾ.? ವೇರಿ ಶಾರ್ಟಿ ಅದು ಕೂಡ ಆಗೇ ಆಗುತ್ತೆ ಎನ್ನುತ್ತಿದ್ದಾರೆ ನಮ್ ಲಿಲ್ಲಿ.. ಹಾಗಾದ್ರೆ ಶ್ರೀವಲ್ಲಿಯ ನ್ಯಾಷನಲ್ ಅವಾರ್ಡ್​ ಕನಸಿನ ಕಥೆಯನ್ನೊಮ್ಮೆ ನೋಡೋಣ ಬನ್ನಿ.. 

ರಶ್ಮಿಕಾ ಮಂದಣ್ಣ.. ಒನ್ ಆ್ಯಂಡ್ ಓನ್ಲಿ ನ್ಯಾಷನಲ್ ಕ್ರಶ್.. ಸೌಂಧರ್ಯದ ಸೊಬಗು, ಅಭಿನಯದ ಆಗರದಿಂದ ಇಂದು ಇಂಡಿಯಾ ಫೇಮಸ್ ಆಗಿರೋ ಅಭಿನೇತ್ರಿ. ರಶ್ಮಿಕಾ ಎಲ್ಲದರಲ್ಲೂ ಫಸ್ಟ್​ ಕ್ಲಾಸ್.. ಅಯ್ಯೋ ಫಸ್ಟ್ ಕ್ಲಾಸ್​ ಅಂದ್ರೆ ಸಾಕಾಗಲ್ಲ, ಱಂಕ್ ಪಡೆದಿದ್ದಾರೆ. ಆದ್ರೆ ಲಿಲ್ಲಿ ಕನಸು ಇಲ್ಲಿಗೆ ನಿಂತಿಲ್ಲ. ಅದು ಮತ್ತಷ್ಟು ದೊಡ್ಡದಾಗಿದೆ. ಎಷ್ಟು ದೊಡ್ಡದು ಅಂದ್ರೆ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಳ್ಳೋ ಕನಸು ಕಂಡಿದ್ದಾರೆ. 
 
ಪುಷ್ಪ2 ಸಿನಿಮಾ ರಿಲೀಸ್​ಗೆ ಕೌಂಟ್ ಡೌನ್​​ ಸ್ಟಾರ್ಸ್ ಆಗಿದೆ. ಮುಂದಿನ ವಾರ ಪುಷ್ಪರಾಜ್​ ಅಲಿಯಾಸ್ ಅಲ್ಲು ಅರ್ಜುನ್ ಶ್ರೀವಲ್ಲಿ ಅಲಿಯಾಸ್ ರಶ್ಮಿಕಾ ಮಂದಣ್ಣ ಬೆಳ್ಳಿ ಭೂಮಿ ಮೇಲೆ ಮೇಳೈಸಲಿದ್ದಾರೆ. ಪುಷ್ಪ ಬಾಕ್ಸಾಫೀಸ್​ನಲ್ಲಿ ಬಕಾಸುರನಂತೆ ಹಣ ದೋಚೋದು ಕನ್ಫರ್ಮ್. ಆದ್ರೆ ಇದರ ಮಧ್ಯೆ ರಶ್ಮಿಕಾ ಮಂದಣ್ಣಗೂ ದೊಡ್ಡ ಆಸೆಯೊಂದು ಹೆಮ್ಮರವಾಗಿದೆ. ಪುಷ್ಪ2 ಅಭಿನಯಕ್ಕೆ ಶ್ರೀವಲ್ಲಿಗೆ ರಾಷ್ಟ್ರ ಪ್ರಶಸ್ತಿ ಬಂದೇ ಬರುತ್ತೆ ಅನ್ನೋ ನಿರೀಕ್ಷೆ ಹೆಚ್ಚಾಗಿದೆ. 
 
'ಪುಷ್ಪ' ಚಿತ್ರದ ನಟನೆಗೆ ಅಲ್ಲು ಅರ್ಜುನ್ 'ಅತ್ಯುತ್ತಮ ನಟ' ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಲ್ಲು ಅರ್ಜುನ್ ಪುಷ್ಪರಾಜ್ ಆಗಿ ನಾನು ತಗ್ಗೋದೇ ಇಲ್ಲ ಅಂದಿದ್ದಕ್ಕೆ ಇಡೀ ದೇಶದ ಸಿನಿ ಪ್ರೇಕ್ಷಕರು ಭೇಷ್ ಅಂದಿದ್ರು. ಈಗ ಶ್ರೀವಲ್ಲಿ ರಶ್ಮಿಕಾ ಸರದಿ. ಪುಷ್ಪ ಸಿನಿಮಾದಲ್ಲಿ ಅಲ್ಲು ಜೊತೆ ಮೈ ಚಳಿ ಬಿಟ್ಟು ನಟಿಸಿದ್ದಕ್ಕೆ ರಶ್ಮಿಕಾಗೆ ಸಿಕ್ಕಾಪಟ್ಟೆ ನೇಮ್​ ಫೇಮ್ ಸಿಕ್ಕಿತ್ತು.
 
ಪುಷ್ಪ ಪಾರ್ಟ್​​2ನಲ್ಲಿ ರಶ್ಮಿಕಾ ರಂಗು ಮತ್ತೊಂದು ಲೆವೆಲ್​ ನಲ್ಲಿ ಮೂಡಿ ಬಂದಿದೆಯಂತೆ. ಡೈರೆಕ್ಟರ್ ಸುಕುಮಾರ್ ರಶ್ಮಿಕಾ ಪ್ರಶಸ್ತಿ ದೋಚೋ ಹಾಗೆ ರೋಲ್ ಡಿಸೈನ್ ಮಾಡಿದ್ದಾರಂತೆ. ಹೀಗಾಗಿ, ‘ಪುಷ್ಪ 2’ ಚಿತ್ರದ ನಟನೆಗೆ ರಶ್ಮಿಕಾಗೆ ರಾಷ್ಟ್ರ ಪ್ರಶಸ್ತಿ ಸಿಗಲಿದೆ ಅಂತ ಟಾಲಿವುಡ್​ ತುಂಬಾ ಟಾಕ್​ ಆಗಿದೆ ರಶ್ಮಿಕಾ ಕೂಡ ಇದೇ ಕನಸು ಕಂಡಿದ್ದೇನೆ ಅಂತ ಹೇಳಿಕೊಂಡಿದ್ದಾರೆ. ಅದು ನಿಜವಾದ್ರೂ ಆಶ್ಚರ್ಯವೇನಿಲ್ಲ ಬಿಡಿ.. ಎಲ್ಲ ಮಾಹಿತಿಗೆ ವೀಡಿಯೋ ನೋಡಿ..