ಫ್ಲವರ್ ಅಲ್ಲ ಸ್ವಾಮಿ... ರಶ್ಮಿಕಾ ಅಂದ್ರೆ ಫೈಯರ್! ರಕ್ತಸಿಕ್ತ ಅವತಾರದಲ್ಲಿ ರಶ್ಮಿಕಾ ಹಾಜರ್

ಫ್ಲವರ್ ಅಲ್ಲ ಸ್ವಾಮಿ... ರಶ್ಮಿಕಾ ಅಂದ್ರೆ ಫೈಯರ್! ರಕ್ತಸಿಕ್ತ ಅವತಾರದಲ್ಲಿ ರಶ್ಮಿಕಾ ಹಾಜರ್

Published : Jun 28, 2025, 03:57 PM IST
ರಶ್ಮಿಕಾ ಮಂದಣ್ಣ ಅವರ ಮುಂಬರುವ ಪ್ಯಾನ್-ಇಂಡಿಯಾ ಚಿತ್ರ 'ಮೈಸಾ'ದ ಪೋಸ್ಟರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ರಶ್ಮಿಕಾ ಹಿಂದೆಂದೂ ಕಾಣದ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ರಶ್ಮಿಕಾ ಅವರ ಮೊದಲ ಮಹಿಳಾ ಪ್ರಧಾನ ಚಿತ್ರವಾಗಿದೆ.

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಟನೆಯ ಹೊಸ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಪ್ಯಾನ್ ಇಂಡಿಯಾ ರೆಡಿಯಾಗಲಿರೋ ಈ ಸಿನಿಮಾಗೆ ಮೈಸಾ ಅಂತ ಹೆಸರಿಡಲಾಗಿದ್ದು ಎಲ್ಲಾ ಭಾಷೆಗಳಲ್ಲೂ ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಮಾಡಲಾಗಿದೆ.  ಈ ಪೋಸ್ಟರ್​ನ ಹಂಚಿಕೊಂಡು ನಾನು ಯಾವಾಗಲೂ ಹೊಸತನ್ನ ಕೊಡುವ ಪ್ರಯತ್ನ ಮಾಡ್ತಿನಿ. ಇದೂವರೆಗೆ ನಟಿಸದಂಥಾ ಪಾತ್ರದಲ್ಲಿ ನಟಿಸ್ತಾ ಇದ್ದೀನಿ ಅಂತ ರಶ್ ಅನೌನ್ಸ್ ಮಾಡಿದ್ದರೆ.  ಮುಖದಲ್ಲಿ ರಕ್ತ, ಕಣ್ಣಲ್ಲಿ ಬೆಂಕಿ.. ರಶ್ಮಿಕಾರ ಈ ರಕ್ತ ಸಿಕ್ತ ಪೋಸ್ಟರ್​ ನೋಡಿದವರು, ಅರೇ ಕಿರಿಕ್ ಬ್ಯೂಟಿ ಏನಾ್ದ್ರೂ ಹೀರೋಗಳಿಗೆ ಟಕ್ಕರ್ ಕೊಡೋದಕ್ಕೆ ಸಜ್ಜಾದ್ರಾ ಅಂದುಕೊಳ್ತಾ ಇದ್ದಾರೆ.  

ರಶ್ಮಿಕಾನ ಲಕ್ಕಿ ಹೀರೋಯಿನ್ ಅಂತ ಎಲ್ಲರೂ ಕರೀತಾ ಇದ್ರು. ರಶ್ಮಿಕಾ ನಾಯಕಿಯಾಗಿ ಮಿಂಚಿದ್ರೆ ಈ ಸಿನಿಮಾ ಹಿಟ್ ಆಗುತ್ತೆ ಅನ್ನೋದು ಇಂಡಸ್ಟ್ರಿಯಲ್ಲಿರೋ ನಂಬಿಕೆ. ಅದು ಕಿರಿಕ್ ಪಾರ್ಟಿಯಿಂದ ಕುಬೇರವರೆಗೂ ಪ್ರೂವ್ ಆಗ್ತಾ ಬಂದಿದೆ.ದಳಪತಿ ವಿಜಯ್, ಮಹೇಶ್ ಬಾಬು, ರಣ್​ಬೀರ್ ಕಪೂರ್ , ವಿಕ್ಕಿ ಕೌಶಾಲ್ ಸೇರಿದಂತೆ ರಶ್ಮಿಕಾ ಜೊತೆಗೆ ಡ್ಯುಯೆಟ್ ಹಾಡಿದ ಹೀರೋಗಳೆಲ್ಲಾ ನೂರಾರು ಕೋಟಿ ಗಳಿಸಿ ಗೆದ್ದಿದ್ದಾರೆ. ಅಂತೆಯೇ ರಶ್ಮಿಕಾನ ನಾಯಕಿಯಾಗಿಸಿಕೊಳ್ಳೋದಕ್ಕೆ ಬಲು ಬೇಡಿಕೆ ಇದೆ. ಆದ್ರೆ ಇಷ್ಟು ದಿನ ನಾಯಕನ ಪಾಲಿಗೆ ಲಕ್ಕಿ ಹೀರೋಯಿನ್ ಆಗಿದ್ದುಕೊಂಡು ಅವರ ಜೊತೆ ಮರ ಸುತ್ತಲಿಕ್ಕೆ ಮಾತ್ರ ಸೀಮಿತ ಆಗಿದ್ದ ರಶ್ಮಿಕಾ ಈಗ ತಾನೇ ಲೀಡ್  ಮಾಡ್ಲಿಕ್ಕೆ ಸಜ್ಜಾಗಿದ್ದಾರೆ. ಮೈಸಾ ರಶ್ಮಿಕಾ  ನಟನೆಯ ಮೊದಲ ಮಹಿಳಾ ಪ್ರಧಾನ ಚಿತ್ರವಾಗಿದ್ದು,   ಮಾಸ್  ಕ್ವೀನ್ ಆಗಿ ಮಿಂಚಲಿಕ್ಕೆ ಸಜ್ಜಾಗಿದ್ದಾರೆ.

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
Read more