ಆಸ್ಕರ್‌ ಗೆದ್ದ ರಾಮ್‌ಚರಣ್‌ಗೆ ಹೈದ್ರಾಬಾದ್‌ನಲ್ಲಿ ಅದ್ಧೂರಿ ಸ್ವಾಗತ..!

Mar 19, 2023, 4:37 PM IST

ರಾಜಮೌಳಿ ನಿರ್ದೇಶನ ಆರ್‌ಆರ್‌ಆರ್‌ ಸಿನಿಮಾಗೆ ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿ ಲಭಿಸಿದೆ. ಭಾರತೀಯ ಸಿನಿ ಅಭಿಮಾನಿಗಳು ಸೇರಿದಂತೆ ನಟ, ನಟಿಯರು,  ತಂಡಕ್ಕೆ ಶುಭ ಕೋರುತ್ತಿದ್ದಾರೆ. ದೇಶದಲ್ಲಿ ಸಿನಿಮಾ ಬಿಡುಗಡೆಗೂ ಮುನ್ನವೇ ನಾಟು ನಾಟು ಸಖತ್‌ ಹಿಟ್‌ ಆಗಿತ್ತು. ನಂತರ ಪ್ರಂಪಂಚದಾದ್ಯಂತ ರಾಮ್​ ಚರಣ್​ ಮತ್ತು ಎನ್​ಟಿಆರ್​ ಡ್ಯಾನ್ಸ್‌ಗೆ​ ಪ್ರೇಕ್ಷಕರು ಫಿದಾ ಆಗಿದ್ದರು. ಇನ್ನು ಲಾಸ್​ ಏಂಜಲಿಸ್​ನ ಡಾಲ್ಬಿ ಥಿಯೇಟರ್​ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿ ಹೈದ್ರಾಬಾದ್‌ಗೆ ಆಗಮಿಸಿದ ರಾಮ್‌ ಚರಣ್‌ಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದ್ದಾರೆ. ಈ ಕುರಿತು ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.