ಅಣ್ಣಾವ್ರ ಸಿನಿಮಾ ಕಾಮನಬಿಲ್ಲು ನೆನಪಿಸಿದ ರಜನಿಕಾಂತ್​​: ಸೂಪರ್​ ಸ್ಟಾರ್ ಕಾಣಲು ಕಿಕ್ಕಿರಿದ ಅಭಿಮಾನಿಗಳು

ಅಣ್ಣಾವ್ರ ಸಿನಿಮಾ ಕಾಮನಬಿಲ್ಲು ನೆನಪಿಸಿದ ರಜನಿಕಾಂತ್​​: ಸೂಪರ್​ ಸ್ಟಾರ್ ಕಾಣಲು ಕಿಕ್ಕಿರಿದ ಅಭಿಮಾನಿಗಳು

Govindaraj S   | Kannada Prabha
Published : Jun 23, 2025, 01:42 PM IST

ಜೈಲರ್​-2 ರಜನಿಕಾಂತ್​​ ನಟನೆಯ ಮೋಸ್ಟ್​ ಅವೇಟೆಡ್​ ಸಿನಿಮಾ.. ಸದ್ಯ ಜೈಲರ್​ ಮೂವಿ ಟೀಮ್ ಮೈಸೂರಿನಲ್ಲಿ ಬೀಡು ಬಿಟ್ಟಿದೆ. ಆದರೆ ಹೀಗೆ ಎಂಟ್ರಿ ಕೊಟ್ಟಿರೋ ಜೈಲರ್​ ಸಿನಿಮಾ ತಂಡ 43 ವರ್ಷಗಳ ಹಿಂದಿನ ರಾಜಣ್ಣ ಅವರ ಕಥೆ ನೆನಪು ಮಾಡ್ಸಿದೆ.

ಜೈಲರ್​-2 ರಜನಿಕಾಂತ್​​ ನಟನೆಯ ಮೋಸ್ಟ್​ ಅವೇಟೆಡ್​ ಸಿನಿಮಾ.. ಸದ್ಯ ಜೈಲರ್​ ಮೂವಿ ಟೀಮ್ ಮೈಸೂರಿನಲ್ಲಿ ಬೀಡು ಬಿಟ್ಟಿದೆ. ಆದರೆ ಹೀಗೆ ಎಂಟ್ರಿ ಕೊಟ್ಟಿರೋ ಜೈಲರ್​ ಸಿನಿಮಾ ತಂಡ 43 ವರ್ಷಗಳ ಹಿಂದಿನ ರಾಜಣ್ಣ ಅವರ ಕಥೆ ನೆನಪು ಮಾಡ್ಸಿದೆ. ಅಷ್ಟೇ ಅಲ್ಲಾ ತಲೈವಾ ಎಂಟ್ರಿ ಆಗಿದೆ ಅಂತ ಅಭಿಮಾನಿಗಳು ರಜಿನಿ ಇದ್ದ ಜಾಗಕ್ಕೆ ಓಡೋಡಿ ಬಂದಿದ್ದಾರೆ.. ಅಲ್ಲಿ ರಜಿನಿ ಮೇನಿಯಾನೇ ನಡೀತಾ ಇದೆ. ಈ ಡೈಲಾಗ್​ ಕೇಳಿದ್ರೇನೆ ಗೊತ್ತಾಗುತ್ತೆ ನಾವ್ ಯಾರ್​ ಬಗ್ಗೆ ಮಾತಾಡ್ತಾ ಇದ್ದೀವಿ ಅಂತ.. ಯೆಸ್​​ ವಯಸ್ಸು 72..  ಆದ್ರೂ ಕಮ್ಮಿ ಆಗಿಲ್ಲ ಕ್ರೇಜ್​.. ಅವ್ರೆ  ಸ್ಟೈಲ್​ ಕಾ ಬಾಪ್​.. ಸೂಪರ್​ ಸ್ಟಾರ್​ ರಜನಿಕಾಂತ್​​..

ತಲೈವಾ​, ಅನ್ನೋ ಹೆಸರು ಕೇಳಿದ್ರೇನೆ ಇಂದಿಗೂ ಅಭಿಮಾನಿಗಳು ಹುಚ್ಚೆದ್ದು ಕುಣಿತಾರೆ. ಸೇಲ್ಫಿ, ಶೇಕ್​ ಹ್ಯಾಂಡ್​ಗಾಗಿ ಮುಗಿಬೀಳ್ತಾರೆ.. ತಲೈವಾ ತಲೈವಾ ಅಂತ ರಜಿನಿ ನೋಡಲು ಕಿಕ್ಕಿರಿದು ಸೇರ್ತಾರೆ.. ಅದಕ್ಕೆ ಮತ್ತೊಂದು ಬೆಸ್ಟ್​ ಎಕ್ಸಾಂಪಲ್​ ಇಲ್ಲಿದೆ ನೋಡಿ. ಯೆಸ್​.. ನೋಡಿದ್ರಲ್ವಾ ಇಂದಿಗೂ ರಜಿನಿ ಸ್ವ್ಯಾಗ್, ಕ್ರೇಜ್​​​ ಕಮ್ಮಿ ಆಗಿಲ್ಲ ಅನ್ನೋದಕ್ಕೆ ಈ ವಿಡಿಯೋನೆ ಸಾಕ್ಷಿ. ಈ ಕ್ರೇಜ್​ಗೆ ಸಾಕ್ಷಿಯಾಗಿದ್ದು, ನಮ್ಮ ಮೈಸೂರಿನ ಹುಣಸೂರು ಸಮೀಪವಿರುವ ಬಿಳಿಕೆರೆ.. ಮೈಸೂರಿನಲ್ಲಿ ಜೈಲರ್​ 2 ಸಿನಿಮಾ ಟೀಮ್​ ಬೀಡುಬಿಟ್ಟಿದ್ದು, ರಜಿನಿ ಎಂಟ್ರಿ ಮ್ಯಾಟರ್​ ಕೇಳಿ ಫ್ಯಾನ್ಸ್​​ ಓಡೋಡಿ ಬಂದಿದ್ದಾರೆ. ಹೀಗೆ ಬಂದ ಫ್ಯಾನ್ಸ್​​ಗೆ ರಜಿನಿ ನಿರಾಸೆ ಮಾಡ್ತಾರಾ.. ಚಾನ್ಸೇ ಇಲ್ಲ.. ಕಾರಿನ ಮೇಲೆ ನಿಂತು ಅಭಿಮಾನಿಗಳತ್ತ ಕೈ ಬೀಸಿದ್ದಾರೆ.

ರಾಜ್​ ಕುಟುಂಬಕ್ಕೂ ರಜನಿಕಾಂತ್​ಗೂ ಇರೊ ನಂಟಿನ ಬಗ್ಗೆ ಹೊಸದಾಗಿ ಹೇಳ್ಬೇಕಿಲ್ಲ. ಸಂದರ್ಭ ಸಿಕ್ಕಾಗಲೆಲ್ಲಾ, ಶಿವಣ್ಣ, ಅಪ್ಪು, ರಾಘವೇಂದ್ರ ರಾಜ್​ ಕುಮಾರ್​, ರಜಿನಿ ಅವರನ್ನ ಹಾಡಿ ಹೊಗಳ್ತಾರೆ. ಇದ್ರಿಂದ ರಜಿನಿ ಕೂಡ ಹೊರತಾಗಿಲ್ಲ.. ಸದ್ಯ ಸೂಪರ್​ ಸ್ಟಾರ್​ ರಜನಿಕಾಂತ್ ಅವರ ಮೋಸ್ಟ್​ ಅವೇಟೆಡ್​ಸಿನಿಮಾ ಜೈಲರ್​-2 ಮೈಸೂರಿನಲ್ಲಿ ಶೂಟಿಂಗ್​ ನಡಿತ್ತಿದ್ದು, ಈಗ ನಡಿತಿರೋ ಶೂಟಿಂಗ್​ ಸ್ಪಾಟ್​ ವರನಟರ ಕಾಮನಬಿಲ್ಲು ಸಿನಿಮಾವನ್ನ ನೆನಪಿಸಿದೆ. 43 ವರ್ಷದ ಹಿಂದೆ ಕಾಮನಬಿಲ್ಲು ಚಿತ್ರದ ಹಾಡಿನ ಚಿತ್ರೀಕರಣ ಮಾಡಿದ್ದಲ್ಲೇ `ಜೈಲರ್ 2' ಚಿತ್ರೀಕರಣ ಮಾಡಲಾಗ್ತಿದೆ. ಸದ್ಯ ರಜನಿಕಾಂತ್​​ ಜೈಲರ್​-2 ಸಿನಿಮಾ ಶೂಟಿಂಗ್​​ನಲ್ಲಿ ಬ್ಯುಸಿಯಾಗಿದ್ದು, ತಲೈವಾ ಹೋದಲ್ಲಿ ಬಂದಲ್ಲಿ ಎಲ್ಲಾ ಅಭಿಮಾನಿಗಳು ಕಿಕ್ಕಿರಿದು ಸೇರ್ತಾ ಇದ್ದಾರೆ. ವಯಸ್ಸು 72 ಆದ್ರೂ ರಜನಿ ಕ್ರೇಜ್​ ಅಂತೂ ಕಮ್ಮಿಯಾಗಿಲ್ಲ.

02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
Read more