ವೆಟ್ಟೈಯಾನ್ ರಣಬೇಟೆಗೆ ಕೌಂಟ್​​ಡೌನ್ ಸ್ಟಾರ್ಟ್: ರಜನಿ ಎನ್​ಕೌಂಟರ್​ಗೆ ಬಿಗ್ ಬಿ ಕೌಂಟರ್..!

ವೆಟ್ಟೈಯಾನ್ ರಣಬೇಟೆಗೆ ಕೌಂಟ್​​ಡೌನ್ ಸ್ಟಾರ್ಟ್: ರಜನಿ ಎನ್​ಕೌಂಟರ್​ಗೆ ಬಿಗ್ ಬಿ ಕೌಂಟರ್..!

Published : Oct 07, 2024, 11:58 AM IST

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ವೆಟ್ಟೈಯಾನ್ ರಿಲೀಸ್​ಗೆ ಕೌಂಟ್​ಡೌಟ್​​ ಸ್ಟಾರ್ಟ್ ಆಗಿದೆ. ರಜನಿಕಾಂತ್-ಅಮಿತಾಭ್ ಅನ್ನೋ ಇಬ್ಬರು ಇಂಡಿಯನ್ ಸಿನಿ ಇಂಡಸ್ಟ್ರಿಯ ದಿಗ್ಗಜರ ಕಾಂಬೋ ಇರುವ ಈ ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆ ಇದೆ. 

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ವೆಟ್ಟೈಯಾನ್ ರಿಲೀಸ್​ಗೆ ಕೌಂಟ್​ಡೌಟ್​​ ಸ್ಟಾರ್ಟ್ ಆಗಿದೆ. ರಜನಿಕಾಂತ್-ಅಮಿತಾಭ್ ಅನ್ನೋ ಇಬ್ಬರು ಇಂಡಿಯನ್ ಸಿನಿ ಇಂಡಸ್ಟ್ರಿಯ ದಿಗ್ಗಜರ ಕಾಂಬೋ ಇರುವ ಈ ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆ ಇದೆ. ರಜನಿ ಇಲ್ಲಿ ಎನ್​ಕೌಂಟರ್ ಸ್ಪೆಷಲಿಸ್ಟ್ ಆಫೀಸರ್ ಆಗಿ ಮುಂಚಿದ್ದಾರೆ. ಈ ಹಂಟರ್​ನ ಎನ್​ಕೌಂಟರ್ ವರ್ಣಿಸೋ ಸಾಂಗ್ ರಿಲೀಸ್ ಆಗಿದ್ದು ಸಖತ್ ಸದ್ದು ಮಾಡ್ತಾ ಇದೆ. ಈ ಬಾರಿಯ ದಸರಾದ ರಂಗು ಹೆಚ್ಚಿಸೋಕೆ ಸೂಪರ್ ಸ್ಟಾರ್ ರಜನಿಕಾಂತ್ ವೆಟ್ಟೈಯಾನ್ ಅವತಾರದಲ್ಲಿ ಬರ್ತಾ ಇದೆ.  ವೆಟ್ಟೈಯಾನ್ ಅಂದ್ರೆ ಬೇಟೆಗಾರ ಅಂತ ಅರ್ಥ.

ರಜನಿ ಇಲ್ಲಿ ಅಕ್ಷರಶಃ ದುಷ್ಟರನ್ನ ಎನ್ ಕೌಂಟರ್ ಹೆಸರಲ್ಲಿ ಭೇಟೆ ಆಡೋ ಪೊಲೀಸ್ ಆಫೀಸರ್ ಪಾತ್ರದಲ್ಲಿ ಮಿಂಚಿದ್ದಾರೆ. ಆದ್ರೆ ಎನ್ ಕೌಂಟರ್ ತಪ್ಪು ಅಂತ ಕೌಂಟರ್ ಕೊಡೋ ಅವರ ಸೀನಿಯರ್ ರೋಲ್ ನಲ್ಲಿ ಬಿಗ್ ಬಿ ಅಮಿತಾಭ್ ಇದ್ದಾರೆ. ಭಾರತೀಯ ಸಿನಿರಂಗದ ಇಬ್ಬರು ಲೆಜೆಂಡ್  ಗಳನ್ನ ಒಟ್ಟಿಗೆ ನೋಡೋದೇ ಒಂದು ರೀತಿ ಸ್ಪೆಷಲ್ ಟ್ರೀಟ್ ಅನ್ನಬಹುದು. ದಶಕಗಳ ಬಳಿಕ ಬರ್ತಿರೋ ಬಿಗ್ ಬಿ ಮತ್ತು ರಜನಿ ಜುಗಲ್ ಬಂದಿ ಈ ಸಿನಿಮಾದ ಬಿಗ್ ಹೈಲೈಟ್ ಅಂದ್ರೆ ತಪ್ಪಾಗಲ್ಲ. ಇನ್ನೂ ರಜನಿ , ಅಮಿತಾಭ್ ಅಷ್ಟೇ ಅಲ್ಲ ಜೊತೆಯಲ್ಲಿ ರಾಣಾ ದಗ್ಗುಬಾಟಿ, ಫಹಾದ್ ಫಾಸಿಲ್, ಮಂಜು ವಾರಿಯರ್, ರಿತಿಕಾ ಸಿಂಗ್, ವಿಜಯನ್, ಜಿಎಂ ಸುಂದರ್, ರೋಹಿಣಿ, ಅಭಿರಾಮಿ, ರಾವ್ ರಮೇಶ್,  ಸೇರಿದಂತೆ ಹಲವು ಘಟಾನುಘಟಿ ಕಲಾವಿದರ ಬಳಗ ವೆಟ್ಟೈಯಾನ್ ನಲ್ಲಿದೆ. 

ಸೂರ್ಯ ನಟನೆಯ 'ಜೈ ಭೀಮ್' ಸಿನಿಮಾ ನಿರ್ದೇಶಿಸಿದ್ದ ಟಿ.ಜೆ. ಜ್ಞಾನವೇಲ್ 'ವೆಟ್ಟೈಯಾನ್'ಗೆ ಆಕ್ಷನ್ ಕಟ್ ಹೇಳಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಈ ಸಿನಿಮಾಗೆ ಬಂಡವಾಳ ಹೂಡಿದ್ದು, ಅದ್ದೂರಿಯಾಗಿ ಸಿನಿಮಾವನ್ನ ತೆರೆಗೆ ತಂದಿದೆ. ಸದ್ಯ ರಿಲೀಸ್ ಹೊಸ್ತಿಲಲ್ಲಿ ವೆಟ್ಟೈಯಾನ್ ಸಿನಿಮಾದ ಹಂಟರ್ ವಂಟರ್ ಅನ್ನೋ ಸ್ಪೆಷಲ್ ಸಾಂಗ್ ರಿಲೀಸ್ ಆಗಿದೆ. ಅನಿರುಧ್ ರವಿಚಂದರ್ ಈ ಮಾಸ್ ಸಾಂಗ್​ಗೆ ಮ್ಯೂಸಿಕ್ ಹಾಕಿದ್ದು, ವೆಟ್ಟೈಯಾನ್ ರಣಬೇಟೆಯನ್ನ ವರ್ಣಿಸುವಂತೆ ಮೂಡಿಬಂದಿದೆ. ಸಿದ್ದಾರ್ಥ್ ಬಸ್ರೂರು ವಾಯ್ಸ್​ನಲ್ಲಿರೋ ಈ ಹಾಡು ತಲೈವಾ ಫ್ಯಾನ್ಸ್​ನ ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ವೆಟ್ಟೈಯಾನ್ ಭೇಟೆ ಸಖತ್ ರೋಚಕವಾಗಿರುತ್ತೆ ಅನ್ನೋ ಸೂಚನೆ ನೀಡಿದೆ. ಇದೇ ಅಕ್ಟೋಬರ್ 10ಕ್ಕೆ ವೆಟ್ಟೈಯಾನ್ ತೆರೆಗೆ ಬರಲಿದ್ದು ಬಾಕ್ಸ್​ಆಫೀಸ್​​ನಲ್ಲಿ ತಲೈವಾ ಬೇಟೆ ಶುರುವಾಗಲಿದೆ.

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more