ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?

ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?

Published : Nov 22, 2025, 04:24 PM IST

ರಾಜಮೌಳಿ ಮತ್ತೊಂದು ದೊಡ್ಡ ಹೆಜ್ಜೆ ಅಂದ್ರೆ ಅದು ವಾರಣಾಸಿ.. ಪ್ರಿನ್ಸ್ ಮಹೇಶ್​ ಬಾಬು ಜೊತೆ ವಾರಣಾಸಿಯ ಅಖಾಡಕ್ಕೆ ಇಳಿದಿರೋ ರಾಜಮೌಳಿ ಕನ್ನಡಿಗರನ್ನೂ ವಾರಣಾಸಿ ಲೋಕಕ್ಕೆ ಕರೆದೊಯ್ಯಲು ಬಹುದೊಡ್ಡ ಪ್ಲ್ಯಾನ್ ಮಾಡಿದ್ದಾರೆ.

ಭಾರತೀಯ ಚಿತ್ರರಂಗದ ಭುಜಬಲ ಎಸ್​.ಎಸ್.ರಾಜಮೌಳಿ ಮತ್ತೊಂದು ದೊಡ್ಡ ಹೆಜ್ಜೆ ಅಂದ್ರೆ ಅದು ವಾರಣಾಸಿ.. ಪ್ರಿನ್ಸ್ ಮಹೇಶ್​ ಬಾಬು ಜೊತೆ ವಾರಣಾಸಿಯ ಅಖಾಡಕ್ಕೆ ಇಳಿದಿರೋ ರಾಜಮೌಳಿ ಕನ್ನಡಿಗರನ್ನೂ ವಾರಣಾಸಿ ಲೋಕಕ್ಕೆ ಕರೆದೊಯ್ಯಲು ಬಹುದೊಡ್ಡ ಪ್ಲ್ಯಾನ್ ಮಾಡಿದ್ದಾರೆ. ಅದಕ್ಕೆ ಬಾದ್ ಷಾ ಕಿಚ್ಚ ಸುದೀಪ್​​ಗೆ ಗಾಳ ಹಾಕಿದ್ದಾರೆ ನಮ್ಮ ಜಕ್ಕಣ್ಣ.. ಹಾಗಾದ್ರೆ ಮೌಳಿಯ ವಾರಣಾಸಿಗೂ, ಬಾದ್ ಷಾ ಸುದೀಪ್​​ಗೂ ಏನು ಸಂಬಂಧ. ಎಸ್​.ಎಸ್.ರಾಜಮೌಳಿ ಈಗ ಭಾರತೀಯ ಚಿತ್ರರಂಗವನ್ನ ಮತ್ತೆ ಆವರಿಸಿಕೊಳ್ತಿದ್ದಾರೆ. ತ್ರಿಬಲ್ ಆರ್ ಸಿನಿಮಾ ಆದ್ಮೇಲೆ ಸೈಲೆಂಟ್ ಆಗಿ ಕೆಲಸ ಮಾಡುತ್ತಿದ್ದ ಜಕ್ಕಣ್ಣ, ಈಗ ವೈಲೆಂಟ್ ಆಗಿದ್ದಾರೆ. ಅದು ವಿವಾಗದಿಂದಲೂ ಹೌದು. ಹೊಸ ಸಿನಿಮಾ ಅನೌನ್ಸ್​ನಿಂದಲೂ ಹೌದು. ರಾಜಮೌಳಿ ನಾನು ಹನುಮಂತನ ನಂಬುವುದಿಲ್ಲ ಅಥ ಹೇಳಿಕೆ ಕೊಟ್ಟಿದ್ದಾರೆಂದು ಕೇಸ್​ಗಳು ದಾಖಲಾಗ್ತಿವೆ.

ಇದು ಆಂಧ್ರದ ತುಂಬೆಲ್ಲಾ ವಿವಾದದ ಹೊಗೆ ಎಬ್ಬಿಸಿದೆ. ಆದ್ರೆ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದ ಮೌಳಿ ತನ್ನ ಸಿನಿಮಾ ಟೈಟಲ್​ ವಾರಣಾಸಿ ಎಂದು​ ಅನೌನ್ಸ್​ ಮಾಡಿಯೇ ಬಿಟ್ಟಿದ್ದಾರೆ. ಟೌಟಲ್​ ಅನೌನ್ಸ್​ ಆಗುತ್ತಿದ್ದಂತೆ ಮತ್ತೊಂದು ವಿಚಾರ ಸ್ಯಾಂಡಲ್​ವುಡ್​​ನಲ್ಲಿ ಬುಸುಗುಟ್ಟುತ್ತಿದೆ. ಆ ಕಡೆ ವಾರಣಾಸಿ ಸುವಾಸನೆ ಆದ್ರೆ ಇಲ್ಲಿ ರಾಜಮೌಳಿ ಕಣ್ಣು ಮತ್ತೆ ಕಿಚ್ಚನ ಮೇಲೆ ಬಿದ್ದಿದೆ ಅನ್ನೋ ಪ್ರೀತಿಯ ವೇದನೆ ಶುರುವಾಗಿದೆ. ಯಾಕಂದ್ರೆ ವಾರಣಾಸಿ ಸಿನಿಮಾಗಾಗಿ ಸುದೀಪ್​​ ಗೆ ಮೌಳಿ ಗಾಳ ಹಾಕಿದ್ದಾರಂತೆ. ಮಹೇಶ್​ ಬಾಬು ಜೊತೆ ನಟಿಸೋಕೆ ಸುದೀಪ್​​​​​​​​​​ಗೆ ಆಫರ್​ ಮಾಡಲಾಗಿದ್ಯಂತೆ.  ತೆಲುಗು ಚಿತ್ರರಂಗದಲ್ಲಿ ಕಿಚ್ಚ ಯಾರ ಟೀಂ ಅಂದ್ರೆ ಎಲ್ಲರಿಗೂ ಗೊತ್ತು ಅದು ರಾಜಮೌಳಿ ಟೀಮ್​ ಅನ್ನೋದು.

ಸುದೀಪ್​ ನಟನೆ ಬಗ್ಗೆ ಅರೆದು ಕುಡಿದಿರೋ ರಾಜಮೌಳಿ ಕಿಚ್ಚನನ್ನ ಆ ವಿಷಯದಲ್ಲಿ ಬಿಗಿದಪ್ಪಿಕೊಳ್ತಾರೆ. ಸುದೀಪ್​ ಅದ್ಭತ ನಟ ಅಂತ ಹಲವು ಭಾರಿ ರಾಜಮೌಳಿಯೇ ಸರ್ಟಿಫಿಕೆಟ್​ ಕೊಟ್ಟಿದ್ದು ಇದೆ. ಅಷ್ಟೆ ಅಲ್ಲ ಜಕ್ಕಣ್ಣನ ಸಿನಿಮಾ ಬಂದ್ರೆ ಕಣ್ಣು ಮುಚ್ಚಿಕೊಂಡು ಕಣ್ಣಿಗೊತ್ತಿಕೊಳ್ಳೋ ಸುದೀಪ್ ಈಗ ಹಾಗು ಬಾಹುಬಲಿ ಸಿನಿಮಾದಲ್ಲಿ ನಟಿಸಿರೋದನ್ನ ಮರೆಯೋಕೆ ಸಾಧ್ಯವಿಲ್ಲ. ರಾಜಮೌಳಿಯ ವಾರಣಾಸಿಗೆ ಪ್ರಮುಖ ಪಾತ್ರಗಳನ್ನ ರಿವೀಲ್ ಮಾಡಲಾಗಿದೆ. ಪ್ರಿನ್ಸ್ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರ್ ಹೆಸರುಗಳು ಅನೌನ್ಸ್ ಆಗಿವೆ.

ಇನ್ನುಳಿದಂತೆ ಎಲ್ಲಾ ಮುಖ್ಯ ಪಾತ್ರಗಳಿಗೂ ಹುಡುಕಾಟ ಶುರುವಾಗಿದ್ದು, ವೀರ ಆಂಜನೇಯನ ಪಾತ್ರಕ್ಕಾಗಿ ಸುದೀಪ್ ನಟಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಆದ್ರೆ ಈ ಪಾತ್ರಕ್ಕೆ ಕಿಚ್ಚ ಒಪ್ಪಿಕೊಂಡಿದ್ದಾರಾ..? ಅದಕ್ಕೆ ಸುದೀಪ್ ಮನವೇ ಉತ್ತರ ಕೊಡಬೇಕು. ರಾಜಮೌಳಿ ಕಥೆ ಕಟ್ಟೋದ್ರಲ್ಲಿ ನಂಬರ್ ಒನ್ ಅಂತ ಮತ್ತೆ ಹೇಳಬೇಕಿಲ್ಲ. ಅವರದ್ಧೇ ಕಲ್ಪನಾ ಲೋಕದಲ್ಲಿ ಹೊಸ ಪ್ರಪಂಚವನ್ನೇ ಸೃಷ್ಟಿಸುತ್ತಾರೆ. ಈಗ್ಲೂ ವಾರಣಾಸಿಯಾ ರಿಯಲ್ ಸ್ಟೋರಿಯನ್ನೇನು ಹೇಳುತ್ತಿಲ್ಲ ಮೌಳಿ. ಬದ್ಲಾಗಿ ಅವರದ್ದೇ ಕಲ್ಪನೆಯಲ್ಲಿ ಟೈಮ್​ ಟ್ರಾವೆಲರ್ ಸ್ಟೋರಿಯನ್ನ ಸಿದ್ಧಪಡಿಸಿದ್ದಾರೆ. ಅದರಲ್ಲಿ ಬಾದ್​ ಷಾ ಸುದೀಪ್​ಗೂ ಒಂದು ಸ್ಥಾನ ಇದೆ ಅನ್ನೋದೆ ಇಂಟ್ರೆಸ್ಟಿಂಗ್.

05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
04:07ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
03:30ರಾಜಸ್ಥಾನ ಅರಮನೆಯಲ್ಲಿ 'ಗೀತಾ-ಗೋವಿಂದ' ಮದುವೆ! ಮಡಿಕೇರಿ, ಹೈದ್ರಾಬಾದ್ ಬಿಟ್ಟು ಅಲ್ಲಿ ಯಾಕೆ?
Read more