RRR: ಪ್ರತಿ ನಿಮಿಷವೂ ರೋಚಕ, ಮೈನವಿರೇಳಿಸುವ ದೃಶ್ಯ ವೈಭವ.!

RRR: ಪ್ರತಿ ನಿಮಿಷವೂ ರೋಚಕ, ಮೈನವಿರೇಳಿಸುವ ದೃಶ್ಯ ವೈಭವ.!

Published : Mar 26, 2022, 11:19 AM ISTUpdated : Mar 26, 2022, 11:49 AM IST

RRR ನಲ್ಲಿ ಜ್ಯೂ, ಎನ್‌ಟಿಆರ್ ಕೋಮರಂ ಭೀಮ್ ಪಾತ್ರ ಮಾಡಿದ್ದಾರೆ. ರಾಮ್ ಚರಣ್ ಅಲ್ಲೂರಿ ಸೀತರಾಮ ರಾಜು ರೋಲ್‌ನಲ್ಲಿ ವಿಜೃಂಭಿಸಿದ್ದಾರೆ. ಇಬ್ಬರು ಸೌತ್ ಸೂಪರ್ ಸ್ಟಾರ್ಸ್. 

RRR ಸ್ಟೋರಿ ತುಂಬಾ ಸಿಂಪಲ್, ಆದ್ರೆ ಅದನ್ನ ಮೌಳಿ ತೋರಿಸಿದ ರೀತಿ ವಾವ್ಹ್ ಅನ್ನಿಸುತ್ತೆ. ಸಿನಿಮಾದ ಕತೆ ಕೋಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮ ರಾಜು ಅವರದ್ದು. ಸೀತಾರಾಮ ರಾಜು ಬ್ರಿಟೀಷರ ಸರ್ಕಾರದಲ್ಲಿ ನಿಷ್ಠಾವಂತ ಪೊಲೀಸ್ ಅಧಿಕಾರಿ, ಕೋಮರಂ ಭೀಮ್ ಕಾಡಿನಲ್ಲಿರೋ ಕೊಂಡ ಸಮುದಾಯದ ಕಾವಲುಗಾರ. ಕೋಮರಂ ಭೀಮ್ ಕಾಡಿನಿಂದ ನಗರಕ್ಕೆ ಬರುತ್ತಾನೆ. ಅದಕ್ಕೊಂದು ಉದ್ದೇಶ ಇದೆ. ಮತ್ತೊಂದು ಕಡೆ ಅಲ್ಲೂರಿ ಸೀತ ರಾಮ ರಾಜು ಆಂಗ್ಲರಿಗೆ ತೋರುತ್ತಿರುವ ನಿಷ್ಠೆಯ ಹಿಂದೆಯೂ ಒಂದು ಉದ್ದೇಶ ಇದೆ. ಈ ಎರಡೂ ಉದ್ದೇಶಗಳು ಒಂದು ಕಡೆ ಸೇರುತ್ತವೆ. ರಾಮ್ ಬೆಂಕಿ, ಭೀಮ್ ನೀರು. ಇವೆರಡೂ ಒಂದಾಗುತ್ತದೆ. ಆ ಬಳಿಕ RRR ನಲ್ಲಿ ಕಾಡ್ಗಿಚ್ಚು, ಪ್ರಳಯ ಸುನಾಮಿ ಎದ್ದು ಬಿಡುತ್ತೆ.

RRR ನಲ್ಲಿ ಜ್ಯೂ, ಎನ್‌ಟಿಆರ್ ಕೋಮರಂ ಭೀಮ್ ಪಾತ್ರ ಮಾಡಿದ್ದಾರೆ. ರಾಮ್ ಚರಣ್ ಅಲ್ಲೂರಿ ಸೀತರಾಮ ರಾಜು ರೋಲ್‌ನಲ್ಲಿ ವಿಜೃಂಭಿಸಿದ್ದಾರೆ. ಇಬ್ಬರು ಸೌತ್ ಸೂಪರ್ ಸ್ಟಾರ್ಸ್. ಇಬ್ಬರನ್ನು ಒಂದೇ ಫ್ರೇಮ್‌ನಲ್ಲಿ ತೋರಿಸೋದು ತುಂಬಾ ಕಷ್ಟ. ಬಟ್, ಜಕ್ಕಣ್ಣ ರಾಜಮೌಳಿ ಮಿಸ್ಟರ್ ಪರ್ಫೆಕ್ಟ್ ಅನ್ನೋದು ಇಲ್ಲೂ ಸಾಭೀತಾಗಿದೆ. ಒಂದು ದೃಶ್ಯದಲ್ಲಿ ಜೂ ಎನ್‌ಟಿಆರ್‌ ಪಾತ್ರ ಮೇಳೈಸಿದ್ರೆ, ಮತ್ತೊಂದು ದೃಶ್ಯದಲ್ಲಿ ರಾಮ್ ಚರಣ್ ಘರ್ಜಿಸುತ್ತಾರೆ. ಈ ಎರಡೂ ಪಾತ್ರಗಳು ಒಟ್ಟಿಗೆ ಕಾಣಿಸಿಕೊಂಡಾಗ ಇಬ್ಬರ ಅಭಿಮಾನಿಗಳು ಒಟ್ಟಿಗೆ ಸಂಭ್ರಮಿಸುವಂತೆ ಮಾಡಿದ್ದಾರೆ.

ರಾಜಮೌಳಿ, ಸಿನಿಮಾದ ಕತೆಯಲ್ಲಿ ಅದೆಷ್ಟು ಗಟ್ಟಿಯಾಗಿದ್ದಾರೋ ಸಿನಿಮಾದ ಹಾಡುಗಳು ಕಣ್ಣಲ್ಲಿ ಕೂತುಬಿಡುತ್ತೆ. ನಾಟು-ನಾಟು ಹಾಡಿನಲ್ಲಿ ರಾಮ್ ಚರಣ್ ಜ್ಯೂ, ಎನ್ಟಿಆರ್ ಡಾನ್ಸ್ ಇಡೀ ಚಿತ್ರಮಂದಿರವೇ ಶಿಳ್ಳೆಯಲ್ಲಿ ಮುಳುಗುಂತೆ ಮಾಡುತ್ತೆ. ಸಿನಿಮಾದ ಕೊನೆಯಲ್ಲಿ ಬರೋ ಮತ್ತೊಂದು ಹಾಡು ದೇಶಪ್ರೇಮವನ್ನ ಮತ್ತಷ್ಟು ಉಕ್ಕಿ ಬರುವಂತೆ ಮಾಡುತ್ತೆ. 

 

05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
Read more