Dec 7, 2024, 3:47 PM IST
ಸದ್ಯಕ್ಕೆ ಭಾರತೀಯ ಚಿತ್ರರಂಗದಲ್ಲಿ ಸಖತ್ ಸದ್ದು ಮಾಡುತ್ತಿರುವ ಪುಷ್ಟ 2 ಸಿಮಾದ ಮೂಲ ಕಥೆ ಇರೋದೇ ರಕ್ತ ಚಂದನ ಮರಗಳ ಕಳ್ಳಸಾಗಾಣಿಕೆಗೆ ಸಂಬಂಧಿಸಿದ್ದಾಗಿದೆ. ಕೆಲ ಸಿನಿಮಾಗಳು ಸಾಮಾನ್ಯ ಜನರ ಮೇಲೆ ಪ್ರಭಾವ ಬಿರೋದು ಸಾಮಾನ್ಯ. ಹಾಗೆನೇ ಈ ಚಿತ್ರ ಕೂಡ ಪ್ರಭಾವ ಬೀರಿದೆ.
ಕಾಲ್ತುಳಿತಕ್ಕೆ ಒಳಗಾಗಿ ಸಾವಿಗೀಡಾದ ಮಹಿಳೆ ಪ್ರಕರಣದಲ್ಲಿ ಅಲ್ಲ ಅರ್ಜುನ್ ಅರೆಸ್ಟ್ ಆಗ್ತಾರೆ ಎಂದು ಹೇಳಲಾಗುತ್ತಿದೆ. ಮುಂದೇನಾಗುತ್ತೋ ಕಾದು ನೋಡಬೇಕು. ಇನ್ನು ಪುಷ್ಪ 2 ಸಿನಿಮಾ ಅದೆಷ್ಟು ಪ್ರಭಾವ ಬೀರಿದೆ ಎಂದ್ರೆ ಆ ಸಿನಿಮಾ ಸ್ಟೈಲ್ನಲ್ಲೇ ರಕ್ತಚಂದನ ಕದ್ದು ಸಾಗಿಸುತ್ತಿದ್ದಾರ 49 ಜನ ಅರೆಸ್ಟ್ ಆಗಿದ್ದಾರೆ.
ಕನ್ನಡಿಗರಾದ ನಮಗೆ ಈ ಪುಷ್ಟ ಸಿನಿಮಾ ಒಂದಿಷ್ಟು ವಿಶೇಷ ಏಕೆ ಗೊತ್ತಾ? ಅಲ್ಲು ಅರ್ಜುನ್ ನಟನೆಯ ಸುಕುಮಾರ್ ನಿರ್ದೇಶನದ ಬ್ಲಾಕ್ ಬಾಸ್ಟರ್ ಚಿತ್ರದಲ್ಲಿ ಕನ್ನಡದ ಐದು ಕಲಾವಿದರು ನಟಿಸಿದ್ದಾರೆ. ಪುಷ್ಪ 2 ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಈ ಸಖತ್ ಸೌಂಡ್ ಮಾಡುತ್ತಿರುವ ಸಿನಿಮಾ. ಇಂತಹದ್ದೊಂದು ಸಿನಿಮಾದಲ್ಲಿ ಕನ್ನಡ ಚಿತ್ರರಂಗದ ಐವರು ನಟರು ನಟಿಸಿದ್ದಾರೆ ಅನ್ನೋದೇ ಹೆಮ್ಮೆ