Jan 5, 2025, 12:08 PM IST
ಪುಷ್ಪ-2 ಮೆಗಾಸಕ್ಸಸ್ ಬೆನ್ನಲ್ಲೇ ಬೆನ್ನು ಬಿದ್ದಿದ್ದ ಕಾಲ್ತುಳಿತದ ಕೇಸ್ ಅಲ್ಲು ಅರ್ಜುನ್ಗೆ ಪೇಚಾಟ ತಂದಿತ್ತು. ಒಂದು ದಿನದ ಮಟ್ಟಿಗೆ ಜೈಲು ಸೇರಿ ಆಚೆ ಬಂದಿದ್ದ ಅಲ್ಲು ಅರ್ಜುನ್, ಸಿಎಂ ರೇವಂತ್ ರೆಡ್ಡಿ ಕೊಟ್ಟ ಏಟಿಗೆ ತತ್ತರಿಸಿ ಹೋಗಿದ್ರು. ಆದ್ರೀಗ ಅಲ್ಲು ಅರ್ಜುನ್ಗೆ ರೆಗ್ಯೂಲರ್ ಬೇಲ್ ಮಂಜೂರಾಗಿದ್ದು, ಸರ್ಕಾರ ಕೂಡ ಈ ವಿಚಾರ ಸಾಫ್ಟ್ ಆದಂತೆ ಕಾಣ್ತಿದೆ. ಸೋ ಈ ಕೇಸ್ನಲ್ಲಿ ಅಲ್ಲು ಅರ್ಜುನ್ ಬಚಾವ್ ಆದ್ರಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಹೈದ್ರಾಬಾದ್ನ ಸಂಧ್ಯಾ ಥಿಯೇಟರ್ ಕಾಲ್ತುಳಿತ ಕೇಸ್ನಲ್ಲಿ ಅಲ್ಲು ಅರ್ಜುನ್ಗೆ ರೆಗ್ಯೂಲರ್ ಬೇಲ್ ಮಂಜೂರಾಗಿದ್ದು, ಬಿಗ್ ರಿಲೀಫ್ ಸಿಕ್ಕಿದೆ. ಈ ಹಿಂದೆ ಡಿಸೆಂಬರ್ 13ರಂದು ನಾಂಪಲ್ಲಿ ಕೋರ್ಟ್ ಅಲ್ಲು ಅರ್ಜುನ್ ನ್ಯಾಯಾಂಗ ಬಂಧನಕ್ಕೆ ಆದೇಶ ಕೊಟ್ಟಿತ್ತು. ರೇವಂತ್ ರೆಡ್ಡಿ ಸರ್ಕಾರ ಅಲ್ಲು ಅರ್ಜುನ್ನ ತ್ವರಿತವಾಗಿ ಅರೆಸ್ಟ್ ಮಾಡಿ ಜೈಲಿಗೆ ಅಟ್ಟಿತ್ತು.
ಹೈಕೋರ್ಟ್ನಿಂದ ಮಧ್ಯಂತರ ಬೇಲ್ ಪಡೆದುಕೊಂಡು ಅಲ್ಲು ಅರ್ಜುನ್ ಹೊರಗೆ ಬಂದಿದ್ರು. ಆದ್ರೆ ಸಿಎಂ ರೇವಂತ್ ರೆಡ್ಡಿ ಇವರಿಗೆ ಶಿಕ್ಷೆ ಕೊಡಿಸಿರೋ ಸಿದ್ದ ಅಂತ ಘರ್ಜಸಿದ್ದು, ಅಲ್ಲು ಅರ್ಜುನ್ಗೆ ನಡುಕ ತಂದಿತ್ತು. ಈ ನಡುವೆ ಪೊಲೀಸರು ನೋಟೀಸ್ ಕೊಟ್ಟು ಗಂಟೆಗಟ್ಟಳೇ ಅಲ್ಲು ಅರ್ಜುನ್ ವಿಚಾರಣೆ ನಡೆಸಿದ್ರು. ಒಂದು ಕಡೆ ಪುಷ್ಪ-2 ಸಿನಿಮಾ ಸಾವಿರಾರು ಕೋಟಿ ಗಳಿಕೆ ಮಾಡಿದ್ರೂ ಈ ಕೇಸ್ ಮಾತ್ರ ಅಲ್ಲು ಅರ್ಜುನ್ಗೆ ತಲೆನೋವು ತಂದಿತ್ತು. ಇನ್ನೂ ತೆಲಂಗಾಣದಲ್ಲಿ ಇನ್ಮುಂದೆ ಬೆನ್ಫಿಟ್ ಶೋ ಟಿಕೆಟ್ ಹೆಚ್ಚಳಕ್ಕೆ ಅವಕಾಶವಿಲ್ಲ ಅಂದಿದ್ದ ಸಿಎಂ ರೇವಂತ್ ರೆಡ್ಡಿ ಇಡೀ ಇಂಡಸ್ಟ್ರಿಗೆ ಬರೆ ಎಳೆದಿದ್ರು.
ಸೋ ತೆಲುಗು ಸಿನಿರಂಗದ ಸೀನಿಯರ್ಸ್ ನಿಯೋಗ ಮಾಡಿಕೊಂಡು ಸಿಎಂ ಭೇಟಿ ಮಾಡಿ ಚಿತ್ರರಂಗಕ್ಕೆ ಸಹಾಯ ಮಾಡುವಂತೆ ಕೇಳಿಕೊಂಡಿದ್ರು. ಇನ್ನೂ ಕಾಲ್ತುಳಿತಕ್ಕೆ ಬಲಿಯಾದ ಕುಟುಂಬಕ್ಕೆ ಬರೊಬ್ಬರಿ 2 ಕೋಟಿ ಪರಿಹಾರವನ್ನ ಪುಷ್ಪ ಟೀಂ ಕೊಟ್ಟಿದೆ. ಅಲ್ಲಿಗೆ ಸಿಎಂ ರೇವಂತ್ ರೆಡ್ಡಿ ಅಲ್ಲು ಅರ್ಜುನ್ ಮೇಲೆ ಕೊಂಚ ಸಾಫ್ಟ್ ಆದಂತೆ ಕಾಣ್ತಾ ಇದ್ದಾರೆ. ಈ ನಡುವೆ ರೆಗ್ಯೂಲರ್ ಬೇಲ್ ಕೂಡ ಸಿಕ್ಕಿರೋದ್ರಿಂದ ಅಲ್ಲು ಅರ್ಜುನ್ಗೆ ರಿಲೀಫ್ ಸಿಕ್ಕಿದೆ. ಈ ಕೇಸ್ ಅಲ್ಲು ಅರ್ಜುನ್ ಎ 11 ಆಗಿರೋದ್ರಿಂದ ಅವರಿಗೆ ಬಂಧನ ಭೀತಿಯೇನೂ ಇಲ್ಲ. ಜೊತೆಗೆ ಕೋರ್ಟ್ನಿಂದಲೂ ಬೇಲ್ ಸಿಕ್ಕಾಗಿದೆ. ಸರ್ಕಾರದ ಜೊತೆಗೂ ರಾಜಿ ಮಾಡಿಕೊಂಡಂತೆ ಕಾಣ್ತಿದೆ. ಸೋ ಈ ಕೇಸ್ ಖತಂ.. ನಾಟಕ್ ಬಂದ್.. ಅಲ್ಲು ಅರ್ಜುನ್ ಬಚಾವ್ ಆದ್ರು ಅಂತಿವೆ ಟಾಲಿವುಡ್ ಮೂಲಗಳು.