ಪುಷ್ಪ-2 ಕಾಲ್ತುಳಿತ, ಬದುಕುಳಿದ ಬಾಲಕನ ಆರ್ತನಾದ:‘ಅಮ್ಮ ಎಲ್ಲಿ..?’ ಅಲ್ಲು ಅಭಿಮಾನಿಯ ಪ್ರಶ್ನೆಗೆ ಉತ್ತರವೆಲ್ಲಿ?

ಪುಷ್ಪ-2 ಕಾಲ್ತುಳಿತ, ಬದುಕುಳಿದ ಬಾಲಕನ ಆರ್ತನಾದ:‘ಅಮ್ಮ ಎಲ್ಲಿ..?’ ಅಲ್ಲು ಅಭಿಮಾನಿಯ ಪ್ರಶ್ನೆಗೆ ಉತ್ತರವೆಲ್ಲಿ?

Published : May 01, 2025, 05:21 PM ISTUpdated : May 01, 2025, 05:37 PM IST

ಪುಷ್ಪ-2 ಸಿನಿಮಾ ಪ್ರೀಮಿಯರ್ ಶೋ ಸಮಯದಲ್ಲಿ ನಡೆದ ಕಾಲ್ತುಳಿತ.. ಆ ಬಳಿಕ ನಡೆದ ಹೈಡ್ರಾಮಾ ಎಲ್ಲವೂ ಗೊತ್ತೇ ಇದೆ. ಆ ಕಾಲ್ತುಳಿತದಲ್ಲಿ ಸಿಲುಕಿ 5 ತಿಂಗಳ ಕಾಲ ಕೋಮಾದಲ್ಲಿದ್ದ ಬಾಲಕ ಕೊನೆಗೂ ಮೃತ್ಯು ಜಯಿಸಿದ್ದಾನೆ. 

ಪುಷ್ಪ-2 ಸಿನಿಮಾ ಪ್ರೀಮಿಯರ್ ಶೋ ಸಮಯದಲ್ಲಿ ನಡೆದ ಕಾಲ್ತುಳಿತ.. ಆ ಬಳಿಕ ನಡೆದ ಹೈಡ್ರಾಮಾ ಎಲ್ಲವೂ ಗೊತ್ತೇ ಇದೆ. ಆ ಕಾಲ್ತುಳಿತದಲ್ಲಿ ಸಿಲುಕಿ 5 ತಿಂಗಳ ಕಾಲ ಕೋಮಾದಲ್ಲಿದ್ದ ಬಾಲಕ ಕೊನೆಗೂ ಮೃತ್ಯು ಜಯಿಸಿದ್ದಾನೆ. ಆದ್ರೆ ಬದುಕುಳಿದ ಅಲ್ಲು ಅಭಿಮಾನಿಯ ಆರ್ತನಾದ ಕೇಳಿದ್ರೆ ಎಂಥವರಿಗೂ ಕಣ್ತುಂಬಿ ಬರುತ್ತೆ. ಪುಷ್ಪ-2.. ಭಾರತೀಯ ಸಿನಿರಂಗದಲ್ಲಿ ಹೊಸ ಗಳಿಕೆಯಲ್ಲಿ ಹೊಸ ದಾಖಲೆ ಬರೆದ ಸಿನಿಮಾ. ಆದ್ರೆ ಇಂಥಾ ಪುಷ್ಪ-2 ಬಿಡುಗಡೆ ಸಮಯದಲ್ಲಿ ಆದ ದುರಂತ, ಅದರ ಸಕ್ಸಸ್​ ಸಂಭ್ರಮವನ್ನೆಲ್ಲಾ ಮರೆಸುವಂತೆ ಮಾಡಿಬಿಟ್ಟಿತ್ತು. 

ಸಿನಿಮಾ ಬಿಡುಗಡೆಯ ಹಿಂದಿನ ದಿನ ಹೈದ್ರಾಬಾದ್​ನ ಸಂಧ್ಯಾ ಥಿಯೇಟರ್​ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ರೇವತಿ ಅನ್ನೋ ಮಹಿಳೆ ಸಾವನ್ನಪ್ಪಿದ್ರು. ಆಕೆಯ 9 ವರ್ಷದ ಮಗ ಶ್ರೀತೇಜ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ. ಈ ದುರ್ಘಟನೆಗೆ ಅಲ್ಲು ಅರ್ಜುನ್ ಬೇಜವಾಬ್ದಾರಿಯೇ ಕಾರಣ ಅಂತ ಆಕ್ರೋಶ ವ್ಯಕ್ತಪಡಿಸಿದ್ದ ತೆಲಂಗಾಣ ಸಿಎಂ, ಇಡೀ ತೆಲುಗು ಚಿತ್ರೋದ್ಯಮಕ್ಕೆ ವಾರ್ನ್ ಮಾಡಿದ್ರು. ಈ ಕೇಸ್​​ನಲ್ಲಿ ಅಲ್ಲು ಅರ್ಜುನ್ ಅರೆಸ್ಟ್ ಆಗಿ ಒಂದು ದಿನ ಜೈಲು ಕೂಡ ನೋಡಿ ಬಂದ್ರು. ಈಗಲೂ ಈ ಕೇಸ್ ನಡೀತಾ ಇದೆ. ಇನ್ನೂ ಸಮಾಧಾನದ ವಿಚಾರ ಅಂದ್ರೆ ಗಂಭೀರವಾಗಿ ಗಾಯಗೊಂಡು ಕೋಮಾಗೆ ಜಾರಿದ್ದ ಬಾಲಕ ಶ್ರೀತೇಜ್​ ಕೊನೆಗೂ ಮೃತ್ಯವನ್ನ ಗೆದ್ದಿದ್ದಾರೆ. 4 ತಿಂಗಳು 25 ದಿನಗಳ ಬಳಿಕ ಬಾಲಕ ಶ್ರೀತೇಜ್​ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. 

ಆದ್ರೆ ಈ ಮೃತ್ಯ ಗೆದ್ದ ಬಾಲಕ ಕೇಳುತ್ತಿರೋ ಪ್ರಶ್ನೆಗಳಿಗೆ ಮಾತ್ರ ಉತ್ತರ ಸಿಕ್ತಾ ಇಲ್ಲ. ಹೌದು ಶ್ರೀತೇಜ್​ಗೆ ಆ ದಿನ ಸಿನಿಮಾ ನೋಡಲಿಕ್ಕೆ ತಾಯಿಯ ಜೊತೆಗೆ ಹೋಗಿದ್ದು, ನೂಕು ನುಗ್ಗಲು ಸಂಭವಿಸಿದ್ದು ಎಲ್ಲವೂ ನೆನಪಿದೆ. ಮುಂದೇನಾಯ್ತು ಅನ್ನೋದು ಗೊತ್ತಿಲ್ಲ. ಈ ಬಾಲಕ ತನ್ನ ತಾಯಿ ಎಲ್ಲಿ ಅನ್ನೋ ಪ್ರಶ್ನೆ ಕೇಳ್ತಾ ಇದ್ದಾನೆ. ಆದ್ರೆ ಈತನ ತಾಯಿ ಅದೇ ದಿನ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ರು ಅನ್ನೋ ವಿಚಾರ ಈ ಮುಗ್ದ ಬಾಲಕನಿಗೆ ಗೊತ್ತಿಲ್ಲ. ಈಗಾಗ್ಲೇ ಪುಷ್ಪ-2 ತಂಡ ಮತ್ತು ಅಲ್ಲು ಅರ್ಜುನ್ ಬಾಲಕನ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿದ್ದಾರೆ. ಆಸ್ಪತ್ರೆಯ ವೆಚ್ಚಗಳನ್ನ ಕೂಡ ಸರ್ಕಾರ ಭರಿಸಿದೆ. ಅಂತೂ ಇಂತೂ ಬಾಲಕನ ಜೀವ ಉಳಿದಿದೆ. ಆದ್ರೆ ಈ ಅಭಿಮಾನಿಯ ಪ್ರಶ್ನೆಗಳಿಗೆ ಖುದ್ದು ಪುಷ್ಪನ ಬಳಿಯೂ ಉತ್ತರ ಇಲ್ಲ..!

05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
Read more