ಸಿಂಗಾಪುರ ಅಗ್ನಿ ಅವಘಡದಲ್ಲಿ ಸಿಲುಕಿದ್ದ ಪವನ್ ಪುತ್ರ: ಮೃತ್ಯು ಗೆದ್ದ ಮಾರ್ಕ್ ಶಂಕರ್!

ಸಿಂಗಾಪುರ ಅಗ್ನಿ ಅವಘಡದಲ್ಲಿ ಸಿಲುಕಿದ್ದ ಪವನ್ ಪುತ್ರ: ಮೃತ್ಯು ಗೆದ್ದ ಮಾರ್ಕ್ ಶಂಕರ್!

Published : Apr 14, 2025, 12:04 PM ISTUpdated : Apr 14, 2025, 12:56 PM IST

ಆಂಧ್ರ ಡಿಸಿಎಂ, ಪವರ್ ಸ್ಟಾರ್ ಕಲ್ಯಾಣ್ ಮಗ ಸಿಂಗಾಪುರದ ಶಾಲೆಯಲ್ಲಿ ನಡೆದ ಅಗ್ನಿ ದುರಂತದಲ್ಲಿ ಸಿಲುಕಿದ್ದು ಇಡೀ ಮೆಗಾ ಫ್ಯಾಮಿಲಿಯನ್ನ ಆತಂಕದಲ್ಲಿ ಮುಳುಗುವಂತೆ ಮಾಡಿತ್ತು. ಇದೀಗ ಪವನ್ ಕಲ್ಯಾಣ್ ಪುತ್ರನೂ ಸೇರಿದಂತೆ 22 ಜನರನ್ನ ರಕ್ಷಣೆ ಮಾಡಲಾಹಿದೆ.

ಆಂಧ್ರ ಡಿಸಿಎಂ, ಪವರ್ ಸ್ಟಾರ್ ಕಲ್ಯಾಣ್ ಮಗ ಸಿಂಗಾಪುರದ ಶಾಲೆಯಲ್ಲಿ ನಡೆದ ಅಗ್ನಿ ದುರಂತದಲ್ಲಿ ಸಿಲುಕಿದ್ದು ಇಡೀ ಮೆಗಾ ಫ್ಯಾಮಿಲಿಯನ್ನ ಆತಂಕದಲ್ಲಿ ಮುಳುಗುವಂತೆ ಮಾಡಿತ್ತು. ಇದೀಗ ಪವನ್ ಕಲ್ಯಾಣ್ ಪುತ್ರನೂ ಸೇರಿದಂತೆ 22 ಜನರನ್ನ ರಕ್ಷಣೆ ಮಾಡಲಾಹಿದೆ. ಖುದ್ದು ಸಿಂಗಾಪುರಕ್ಕೆ ಹೋಗಿ ಮಗನನ್ನ ಕರೆತಂಡ ಪವನ್ ಕಲ್ಯಾಣ್ ಕಣ್ಣೀರು ಹಾಕ್ತಾನೇ ನಿಟ್ಟುಸಿರು ಬಿಟ್ಟಿದ್ದಾರೆ. ಆಂಧ್ರ ಡಿಸಿಎಂ , ಟಾಲಿವುಡ್​​ನ ಪವರ್ ಸ್ಟಾರ್ ಪವನ್ ಒಂದು ಸುದೀರ್ಘ ನಿಟ್ಟುಸಿರು ಬಿಟ್ಟಿದ್ದಾರೆ. ಸಿಂಗಾಪುರದಲ್ಲಿ ನಡೆದ ಅಗ್ನಿ ಅವಗಢದಲ್ಲಿ ಪವನ್ ಕಲ್ಯಾಣ್ ರ 8 ವರ್ಷದ ಪುತ್ರ ಮಾರ್ಕ್ ಶಂಕರ್ ಕೂಡ ಸಿಲುಕಿದ್ದ. ಸಿಂಗಾಪುರದಲ್ಲಿ ಮಾರ್ಕ್ ಶಂಕರ್ ಓದ್ತಾ ಇದ್ದ ಶಾಲೆಗೆ ಬೆಂಕಿ ಬಿದ್ದು 20ಕ್ಕೂ ಹೆಚ್ಚು ಜನರು ಅಪಾಯದಲ್ಲಿ ಸಿಲುಕಿದ್ರು. ಕೊನೆಗೂ ಈ ಅಗ್ನಿ ಅವಗಢದಿಂದ ಮಾರ್ಕ್ ಸೇರಿದಂತೆ 22 ಜನರನ್ನ ರಕ್ಷಣೆ ಮಾಡಲಾಗಿದೆ. 

ಖುದ್ದು ಪವನ್ ಸಿಂಗಾಪುರಗೆ ತೆರಳಿ ಮಗನನ್ನ ಮರಳಿ ಮನೆಗೆ ಕರೆತಂದಿದ್ದಾರೆ. ಕಳೆದ ಏಪ್ರಿಲ್ 8ನೇ ತಾರೀಖು ನಡೆದ ಈ ಅವಗಢದ ವಿಚಾರ ಗೊತ್ತಾದಾಗ ಪವನ್ ಕಲ್ಯಾಣ್ ಚಡಪಡಿಸಿ ಹೋಗಿದ್ರು. ಪತ್ನಿ ಅನ್ನಾ ಜೊತೆಗೆ ಸಿಂಗಾಪುರ್ ಪ್ಲೈಟ್ ಏರಿದ್ರು. ಅದೃಷ್ಟವಶಾತ್ ಈ ಅವಗಢದಲ್ಲಿ ಸಿಲುಕಿದವರೆನ್ನೆಲ್ಲಾ ರಕ್ಷಣೆ ಮಾಡಲಾಗಿತ್ತು. ಆದ್ರೆ ಎಲ್ಲರಿಗೂ ಗಂಭೀರ ಗಾಯಗಳಾಗಿದ್ವು.  ಪವನ್ ಪುತ್ರ ಮಾರ್ಕ್​​ ಕೈಕಾಲಿಗೂ ಸುಟ್ಟ ಗಾಯಗಳಾಗಿದ್ದು ಸಿಂಗಾಪುರದ ಆಸ್ಪತ್ರೆಗೆ ಸೇರಿಸಲಾಗಿತ್ತು. ಮಗನ ಸ್ಥಿತಿ ಕಂಡು ಕಣ್ಣೀರಿಟ್ಟಿದ್ದ ಪವನ್, ಇದೀಗ ಪುತ್ರನನ್ನ ಕರೆದುಕೊಂಡು ಹೈದ್ರಾಬಾದ್ ಗೆ ಮರಳಿದ್ದಾರೆ. ಶನಿವಾರ ರಾತ್ರಿ ಹೈದ್ರಾಬಾದ್​​ ಏರ್​ಪೋರ್ಟ್​​ಗೆ ಬಂದಿಳಿದ ಪವನ್ ಮಗನನ್ನ ಗಟ್ಟಿಯಾಗಿ ತಬ್ಬಿಕೊಂಡು ಕರೆತಂದಿದ್ದಾರೆ. ಪವನ್ ಮಗನನ್ನ ತಬ್ಬಿ ಹಿಡಿದಿದ್ದ ರೀತಿಯಲ್ಲೇ ಅವರ ಆತಂಕ, ನೋವು., ಪ್ರೀತಿ ಎಲ್ಲವೂ ಎದ್ದು ಕಾಣ್ತಾ ಇದೆ.  

ಪವನ್ ಕಲ್ಯಾಣ್ - ಅನ್ನಾ ದಂಪತಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ ಇದ್ದಾರೆ. ತನ್ನ ಸಿನಿಮಾ-ರಾಜಕೀಯ ಬದುಕಿನ ನಡುವೆ ಬ್ಯುಸಿಯಾಗಿರೋ ಪವನ್ , 8 ವರ್ಷದ ಪುತ್ರನನ್ನ ಸಿಂಗಾಪುರದ ಶಾಲೆಯಲ್ಲಿ ಓದಿಸ್ತಾ ಇದ್ದಾರೆ. ಆದ್ರೆ ಕಳೆದ ಮಂಗಳವಾರ ನಡೆದ ಅಗ್ನಿ ದುರಂತದಲ್ಲಿ ಮಾರ್ಕ್ ಶಂಕರ್ ಓದ್ತಾ ಇದ್ದ ಶಾಲೆ ಸಿಲುಕಿತ್ತು. ಶಾಲೆಯಲ್ಲಿದ್ದ ಕೆಲ ಮಕ್ಕಳು ಸೇರಿದಂತೆ ಒಟ್ಟು 22 ಮಂದಿ ಪ್ರಾಣಾಪಾಯಕ್ಕೆ ಸಿಲುಕಿದ್ರು. ತಮ್ಮ ಪುತ್ರ ಪ್ರಾಣಾಪಾಯಕ್ಕೆ ಸಿಲುಕಿದ ವಿಚಾರ ಗೊತ್ತಾಗಿ ಪವನ್ ತತ್ತರಿಸಿ ಹೋಗಿದ್ರು. ಇದೀಗ ಮಗನನ್ನ ಮರಳಿ ಮನೆಗೆ ಕರೆತಂದಿರೋ ಪವನ್ ನಿಟ್ಟುಸಿರು ಬಿಟ್ಟಿದ್ದಾರೆ. ಜೊತೆಗೆ ಈ ಕಷ್ಟದ ಸಮಯದಲ್ಲಿ ತನ್ನ ಜೊತೆಗೆ ನಿಂತವರಿಗೆಲ್ಲಾ ಧನ್ಯವಾದ ಹೇಳಿದ್ದಾರೆ. ಮೃತ್ಯ ಗೆದ್ದ ಮಗನಿಗೆ ದೃಷ್ಟಿ ತೆಗೆದು ಮನೆಗೆ ಬರಮಾಡಿಕೊಂಡಿದ್ದಾರೆ.

05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
Read more