ಸೌತ್ ಸುಂದರಿ ತ್ರಿಷಾಗೆ ಕೂಡಿ ಬಂತು ಕಂಕಣ ಬಲ: ದಳಪತಿ ವಿಜಯ್ ಜೊತೆ ನಟಿಯ ನಂಟಿನ ಗಾಸಿಪ್

ಸೌತ್ ಸುಂದರಿ ತ್ರಿಷಾಗೆ ಕೂಡಿ ಬಂತು ಕಂಕಣ ಬಲ: ದಳಪತಿ ವಿಜಯ್ ಜೊತೆ ನಟಿಯ ನಂಟಿನ ಗಾಸಿಪ್

Published : Oct 11, 2025, 04:44 PM IST

ಎರಡೂವರೇ ದಶಕದಿಂದ ಆಕ್ಟಿವ್ ಆಗಿರೋ ತ್ರಿಷಾ ಈಗಲೂ ಬ್ಯುಸಿಯೆಸ್ಟ್ ನಟಿಮಣಿ. 42ವರ್ಷವಾದ್ರೂ ಇನ್ನೂ ಸಿಂಗಲ್ ಆಗಿದ್ದ ಈ ಬ್ಯೂಟಿ ಫೈನಲಿ ಹಸೆಮಣೆ ಏರಲಿಕ್ಕೆ ಸಜ್ಜಾಗಿದ್ದಾರೆ. ತ್ರಿಷಾ ಕಲ್ಯಾಣದ ವಿಷ್ಯ ಸದ್ಯ ಭಾರಿ ಸೌಂಡ್ ಮಾಡ್ತಾ ಇದೆ.

ಸೌತ್ ಸಿನಿದುನಿಯಾದಲ್ಲಿ ಎರಡೂವರೇ ದಶಕದಿಂದ ಆಕ್ಟಿವ್ ಆಗಿರೋ ತ್ರಿಷಾ ಈಗಲೂ ಬ್ಯುಸಿಯೆಸ್ಟ್ ನಟಿಮಣಿ. 42ವರ್ಷವಾದ್ರೂ ಇನ್ನೂ ಸಿಂಗಲ್ ಆಗಿದ್ದ ಈ ಬ್ಯೂಟಿ ಫೈನಲಿ ಹಸೆಮಣೆ ಏರಲಿಕ್ಕೆ ಸಜ್ಜಾಗಿದ್ದಾರೆ. ತ್ರಿಷಾ ಕಲ್ಯಾಣದ ವಿಷ್ಯ ಸದ್ಯ ಭಾರಿ ಸೌಂಡ್ ಮಾಡ್ತಾ ಇದೆ. ಸೌತ್ ಸಿನಿದುನಿಯಾದಲ್ಲಿ ಎರಡು ದಶಕ ರಾಣಿಯಾಗಿ ಮರೆದ ತ್ರಿಷಾ ಮದುವೆಯಾಗಲಿಕ್ಕೆ ಸಜ್ಜಾಗಿದ್ದಾರಂತೆ. ಸದ್ಯ ತ್ರಿಷಾ ಕಲ್ಯಾಣದ ವಿಷ್ಯ ಸಿನಿಲೋಕದಲ್ಲಿ ಸಖತ್ ಸದ್ದು ಮಾಡ್ತಾ ಇದೆ. ಅಂದಗಾಗೆ ತ್ರಿಷಾಗೀಗ 42 ವರ್ಷ ವಯಸ್ಸು. ತ್ರಿಷಾ ಒಬ್ಬಂಟಿಯಾಗಿ ಉಳಿದುಬಿಡ್ತಾರಾ. ಅಂತ ಫ್ಯಾನ್ಸ್ ತಲೆಕೆಡಿಸಿಕೊಂದ್ರು. ಆದ್ರೀಗ ಈ ಸುಂದರಿ ಜಂಟಿಯಾಗಲಿಕ್ಕೆ ಸಜ್ಜಾಗಿದ್ದಾರೆ.

ಯೆಸ್ ಇತ್ತೀಚಿಗೆ ತ್ರಿಷಾ ಹೆಸರು ನಟ-ರಾಜಕಾರಣಿ ದಳಪತಿ ವಿಜಯ್ ಜೊತೆಗೆ ತಳುಕು ಹಾಕಿಕೊಂಡಿರೋದು ಗೊತ್ತೇ ಇದೆ. 2023ರಲ್ಲಿ ಬಂದ ಲಿಯೋ ಸಿನಿಮಾದಲ್ಲಿ ವಿಜಯ್ ತ್ರಿಷಾ ಒಟ್ಟಾಗಿ ನಟಿಸಿದ್ರು. ಅಲ್ಲಿಂದ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿತ್ತು. ವಿಜಯ್-ತ್ರಿಷಾ ಮದುವೆಯಾಗ್ತಾರಂತೆ. ಅದಕ್ಕಾಗಿ ವಿಜಯ್ ತಮ್ಮ ಮೊದಲ ಪತ್ನಿಗೆ ವಿಚ್ಛೇದನ ಕೊಡ್ತಾರೆ ಅಂತ ಗಾಸಿಪ್ ಹರಿದಾಡಿದ್ವು. ಆದ್ರೀಗ ಈ ವದಂಕಿಗೆ ಬ್ರೇಕ್ ಹಾಕಿ ತ್ರಿಷಾ ಮದುವೆಗೆ ಸಜ್ಜಾಗಿದ್ದಾರೆ. ಹೌದು ತ್ರಿಷಾ ಕುಟುಂಬದ ಜೊತೆಗೆ ಒಡನಾಟವಿರುವ ಚಂಡಿಗಢ ಮೂಲದ ಉದ್ಯಮಿಯೊಬ್ಬರ ಜೊತೆಗೆ ತ್ರಿಷಾ ಕಲ್ಯಾಣ ಫಿಕ್ಸ್ ಆಗಿದೆ.

ಇದು ಎರಡೂ ಕುಟುಂಬಗಳು ಸೇರಿಸಿ ಫಿಕ್ಸ್ ಮಾಡಿರೋ ಮದುವೆ. ಪಕ್ಕಾ ಅರೇಂಜ್ಡ್ ಮ್ಯಾರೇಜ್. ತ್ರಿಷಾ ಸಿನಿರಂಗಕ್ಕೆ ಬಂದಿದ್ದು 2002ರಲ್ಲಿ. ಅಲ್ಲಿಂದ ಮುಂದೆ ಟಾಲಿವುಡ್, ಕಾಲಿವುಡ್​ನ ನಂ.1 ನಟಿಮಣಿಯಾಗಿ ಮರೆದವರು ತ್ರಿಷಾ. ತ್ರಿಷಾ ಜೊತೆಗೆ ಸಿನಿಇಂಡಸ್ಟ್ರಿಗೆ ಬಂದ ನಟಿಯರೆಲ್ಲಾ ಈಗಾಗ್ಲೇ ರಿಟೈರ್ ಆಗಿದ್ದಾರೆ. ಆದ್ರೆ ತ್ರಿಷಾ ಮಾತ್ರ ಈಗಲೂ ಟಾಪ್ ನಟರ ಜೊತೆಗೆ ನಾಯಕಿಯಾಗಿ ಮಿಂಚ್ತಾ ಇದ್ದಾರೆ. ಈ ಪಂಚಭಾಷಾ ನಟಿಮಣಿ ನಮ್ಮ ಕನ್ನಡಿಗರಿಗೂ ಪರಿಚಿತೆ. 2014ರಲ್ಲಿ ಬಂದ ಪವರ್ ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ಗೆ ಜೋಡಿಯಾಗಿ ನಟಿಸಿದ್ರು ತ್ರಿಷಾ. ಗುರುವಾರ ಸಂಜೆ ಚೂಡಿದಾರ ತೊಟ್ಟು ಮರಿಜಿಂಕೆಯಂತೆ ಕಂಡಿದ್ರು.

ಪವರ್ ಸಿನಿಮಾದ ಟೈಂನಲ್ಲೇ ತ್ರಿಷಾ ಮದುವೆ ಫಿಕ್ಸ್ ಆಗಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಒಂದು ದಶಕದ ಹಿಂದೆಯೇ ತ್ರಿಷಾ ಮದುವೆಯಾಗಬೇಕಿತ್ತು. ಉದ್ಯಮಿ ವರುಣ್ ಮಣಿಯನ್ ಜೊತೆ ತ್ರಿಷಾ ನಿಶ್ಚಿತಾರ್ಥ ಕೂಡ ನಡೆದಿತ್ತು. ಆದರೆ ಆ ನಂತರ ಅದೇನಾಯ್ತೋ ಗೊತ್ತಿಲ್ಲ. ಮದುವೆಯಾಗಲು ತ್ರಿಷಾ ರೆಡಿಯಾಗಲಿಲ್ಲ. ಮದುವೆ ಮುರಿದು ಬಿದ್ದಿದ್ದೇಕೆ ಅನ್ನೋದನ್ನೂ ಹೇಳಲಿಲ್ಲ. ಮುಂದೆ ಒಬ್ಬಂಟಿಯಾಗೇ ಇದ್ದ ತ್ರಿಷಾ ಇದೀಗ ಮತ್ತೆ  ವೈವಾಹಿಕ ಜೀವನಕ್ಕೆ ಕಾಲಿಡೋದಕ್ಕೆ ಮನಸು ಮಾಡಿದ್ದಾರೆ. ಅಂತೂ ಇಂತೂ ತ್ರಿಷಾಗೆ ಕಂಕಣ ಬಲ ಕೂಡಿಬಂತು ಅಂತ ಫ್ಯಾನ್ಸ್ ಈ ಚೆಲುವೆಯನ್ನ ಹರಸ್ತಾ ಇದ್ದಾರೆ.

05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
Read more