ಅಂತರಾಷ್ಟ್ರೀಯ ಮಟ್ಟದ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪಡೆದು ಸಿಕ್ಕಾಪಟ್ಟೆ ಖುಷಿಯಲ್ಲಿರೋ ರಾಜಮೌಳಿ ಬಗ್ಗೆ ಈಗ ಹೊಸದೊಂದು ಸುದ್ದಿ ಹೊರ ಬಂದಿದೆ.
ಬಾಹುಬಲಿ ಸಿನಿಮಾ ಮೂಲಕ ಇಡೀ ಪ್ರಪಂಚವೇ ತೆಲುಗು ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದ ರಾಜಮೌಳಿ ಬಗ್ಗೆ ಈಗ ಹೊಸ ಸುದ್ದಿ ಹೊರ ಬಂದಿದೆ. ಜಕ್ಕಣ್ಣ ಮತ್ತೆ ಹಳೇ ಸಿನಿಮಾದ ಕತೆಯ ಮುಂದುವರೆದ ಭಾಗಕ್ಕೆ ಸಿದ್ಧರಾಗುತ್ತಿದ್ದಾರೆ ಎನ್ನಲಾಗುತ್ತಿದೆ. ರಾಜಮೌಳಿ ಬಾಹುಬಲಿ-3 ಸಿನಿಮಾ ಮಾಡೋಕೆ ತೆರೆ ಮರೆಯಲ್ಲೇ ಎಲ್ಲಾ ಸಿದ್ಧತೆ ಮಾಡಿದ್ದಾರಂತೆ. ಇಡೀ ಸಿನಿಮಾ ಜಗತ್ತೆ ನೋಡಿ ಮೆಚ್ಚಿದ ಪ್ಯಾನ್ ಇಂಡಿಯಾ ಬಾಹುಬಲಿ ಸೀರಿಸ್ ಅನ್ನು ಮುಂದುವರೆಸುತ್ತಾರೆ ಅಂದ್ರೆ ಅದು ಸಖತ್ ಸುದ್ದಿ. ಬಾಹುಬಲಿ ಪಾರ್ಟ್-3 ನಿರ್ಮಾಣಕ್ಕಾಗಿ ಮೌಳಿ ಬೆಂಗಳೂರು ಮೂಲದ ದೊಡ್ಡ ಕಂಪೆನಿಯೊಂದರ ಜತೆ ಮಾತುಕಥೆ ಮಾಡಿದ್ದಾರಂತೆ.